ಔರಾದ ನಲ್ಲಿ ಗುರು ನಾನಕ ಪಬ್ಲಿಕ್ ಶಾಲೆ ಉದ್ಘಾಟನೆ

ಬೀದರ:ಮೇ.21:ಇಲ್ಲಿಯ ಗುರು ನಾನಕ ಶಿಕ್ಷಣ ಸಂಸ್ಥೆಯು ಔರಾದನಲ್ಲೂ ಗುರು ನಾನಕ ಪಬ್ಲಿಕ್ ಶಾಲೆ ಆರಂಭಿಸಿದೆ.

ಗುರು ನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ ಅವರು ಔರಾದ(ಬಾ) ನಲ್ಲಿ ಹೊಸದಾಗಿ ಗುರು ನಾನಕ್ ಪಬ್ಲಿಕ್ ಶಾಲೆಯೂ ಉದ್ಘಾಟಿಸಿದರು.

ಔರಾದ ತಾಲ್ಲೂಕಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಶಾಲೆ ಶುರು ಮಾಡಲಾಗಿದೆ. ಗುಣಮಟ್ಟದ ಶಿಕ್ಷಣ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವುದೇ ಸಂಸ್ಥೆಯ ಧ್ಯೇಯವಗಿದೆ ಎಂದರು ಅವರು ಹೇಳಿದರು.

ಗುರು ನಾನಕ ಶಿಕ್ಷಣ ಸಂಸ್ಥೆಯು ಸರ್ನರಿಯಿಂದ 3ನೇ ತರಗತಿಯವರೆಗೆ ಹೊಂದಿದೆ. ಔರಾದ ಶಾಖೆಯು ಈ ಸಾಲಿಗೆ ಹೊಸದಾಗಿ ಸೇರ್ಪಡೆಗೊಂಡಿದೆ. ಔರಾದ ತಾಲ್ಲೂಕಿನ ವಿದ್ಯಾರ್ಥಿಗಳು ಪ್ರಯೋಜನೆ ಪಡೆಯಬೇಕು ಎಂದರು.

ಅವರು ಮುಂದು ವರೆದು ಮಾತನಾಡುತ್ತ ಇಲ್ಲಿ ಜನರಿಗೆ ಒಂದು ಒಳ್ಳೆಯ ಅವಕಾಶ ಕಲ್ಪಿಸಿಕೊಡಲಾಗಿದೆ. ನಮ್ಮ ಉದ್ದೇಶ ಇಲ್ಲಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವುದು ಮತ್ತು ಕಡಿಮೆ ಫೀಸ್ ಇಟ್ಟು ಎಲ್ಲರರಿಗೂ ಅನುಕೂಲವಾಗುವಂತೆ ಈ ಸಂಸ್ಥೆಯು ಇಲ್ಲಿನ ವಾತಾವರಣ ಗಮನಿಸಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಇಲ್ಲಿ ಶಾಲೆಯು ತೆರೆಯಲಾಗಿದೆ ಎಂದರು. ಔರಾದನಲ್ಲಿ ಸಿಬಿಎಸ್‍ಇ ಪಠ್ಯಕ್ರಮದ ಮತ್ತು ಇಂಗ್ಲೀಷ ಮಾಧ್ಯಮದಲ್ಲಿ ನಡೆಯುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುನಿತ್ ಸಿಂಗ್, ಸೈಯದ ಕಲೀಂ ಉದ್ದೀನ್, ಮಜರ ಹುಸೇನಿ, ಸುನೀಲ ಕುಲಕರ್ಣಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.