
ಬೀದರ:ಮಾ.9:ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ, ಜಿಲ್ಲಾ ಪಂಚಾಯತ ಬೀದರ ಮಾಹಿತಿ ಶಿಕ್ಷಣ ಸಂವಹನ ವಿಭಾಗ ಬೀದರ ಇವರು ಆಯೋಜನೆ ಮಾಡಿರುವ 2022-23ನೇ ಸಾಲಿನ ರಾಷ್ಚ್ರೀಯ ಅರೋಗ್ಯ ಅಭಿಯಾನದ ಕಾರ್ಯಕ್ರಮವನ್ನು ಬೀದರ ತಾಲುಕಿನ ದೇಶಮುಖ ವಡಗಾಂಗ ಗ್ರಾಮದಲ್ಲಿ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜನವಾಡಾ ಪಿ.ಎಸ್.ಐ ಗಳಾದ ಬಸವರಾಜ ಚಿತಕೋಟೆ ಅವರು ಹಲಿಗೆ ಭಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಯಿ ಮತ್ತು ಮಗುವಿನ ಆರೋಗ್ಯ, ಹದಿಹರೆಯದ ಸಮಸ್ಯೆ, ಪೌಷ್ಠಿಕ ಆಹಾರ, ಅಪೌಷ್ಠಿಕತೆ, ಅನಿಮಿಯ ರಕ್ತಹಿನತೆ, ಸಾಂಕ್ರಮಿಕ ಹಾಗು ಅಸಾಂಕ್ರಮಿಕ ರೋಗ, ಬಾಲ್ಯವಿವಾಹ, ಕ್ಷಯರೋಗ, ಕುಷ್ಟರೋಗ, ಹೀಗೆ ವಿವಿಧ ಯೋಜನೆಗಳ ಕುರಿತು ದೇವದಾಸ ಚಿಮಕೋಡ. ಅಧ್ಯಕ್ಷರು ನಂದೀಶ್ವರ ನಾಟ್ಯ ಸಂಘ ಚಿಮಕೋಡ ಕಲಾ ತಂಡದಿಂದ ಜಾನಪದ ಹಾಗು ಬೀದಿನಾಟಕ ಮೂಲಕ ಗ್ರಾಮೀಣ ಜನರಿಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರು ಗ್ರಾಮದ ಹಿರಿಯರು ಮುಖಂಡರು ಭಾಗ ವಹಿಸಿದರು.