ಔರಾದ, ಕಮಲನಗರ ತಾಲ್ಲೂಕುಗಳನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಿಸಿ

ಬೀದರ್: ಜು.19:ಪಶುಸಂಗೋಪನೆ ಸಚಿವರಾದ ಪ್ರಭು ಬಿ. ಚವ್ಹಾಣಅವರು ಸೋಮವಾರ ಬೆಂಗಳೂರಿನಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಅತಿವೃಷ್ಟಿಯಿಂದಾಗಿ ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ಚರ್ಚಿಸಿದರು.
ಜಿಲ್ಲೆಯಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸಾಕಷ್ಟು ಹಾನಿ ಸಂಭವಿಸಿದೆ. ಔರಾದ ಹಾಗೂ ಕಮಲನಗರತಾಲ್ಲೂಕಿನಲ್ಲಿಅತಿ ಹೆಚ್ಚು ಮಳೆಯಾಗಿದ್ದು, ಅಲ್ಲಿನ ಹಲವಾರು ರಸ್ತೆಗಳು, ಬ್ರಿಜ್ ಕಂ ಬ್ಯಾರೇಜ್ ಗಳು, ಕೆರೆ-ಕಟ್ಟೆಗಳು ಹಾಳಾಗಿದ್ದು, ಮಳೆ ನೀರು ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ.
ಬಿತ್ತನೆಯಾದ ಸೋಯಾಬೀನ್ ಹಾಗೂ ಇನ್ನಿತರೆಎಲ್ಲ ಬೆಳೆಗಳು ನಾಶವಾಗಿ ರೈತರುಆರ್ಥಿಕ ನಷ್ಟಎದುರಿಸುತ್ತಿದ್ದಾರೆ. ನೂರಾರು ಮನೆಗಳು ಕುಸಿದು ಬಿದ್ದಿದ್ದರಿಂದ ಸಾರ್ವಜನಿಕರು ಸಾಕಷ್ಟುಆತಂಕದಲ್ಲಿದ್ದಾರೆ. ಪ್ರವಾಹದಲ್ಲಿಇಬ್ಬರು ಮರಣ ಹೊಂದಿದ್ದಾರೆಎಂದು ಸಚಿವರುಕ್ಷೇತ್ರದಲ್ಲಾದ ಹಾನಿಯ ಬಗ್ಗೆ ಮನವರಿಕೆ ಮಾಡಿದರು.
ಜಿಲ್ಲೆಯ ಔರಾದ ಹಾಗೂ ಕಮಲನಗರ ಎರಡೂ ತಾಲ್ಲೂಕುಗಳನ್ನು ಕೂಡಲೇ ಅತಿವೃಷ್ಟಿ ಪ್ರದೇಶವೆಂದು ಘೋಷಿಸಿ, ತುರ್ತು ಪರಿಹಾರಕ್ಕಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಇದಕ್ಕೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವರಾದ ಪ್ರಭು ಬಿ.ಚವ್ಹಾಣಅವರು ತಿಳಿಸಿದ್ದಾರೆ.