ಔರಾದ್ ಪಟ್ಟಣ ಪಂಚಾಯ್ತಿ ಬಿಜೆಪಿ ತೆಕ್ಕೆಗೆ

ಔರಾದ್:ನ.10: ಔರಾದ್ ಪಟ್ಟಣ ಪಂಚಾಯ್ತಿ ಸದಸ್ಯರ ಚುನಾವಣೆ ನಡೆದು ಒಂದುವರೆ ವರ್ಷದ ನಂತರ ಇಂದು ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯಿತು ಒಟ್ಟು 20 ಸದಸ್ಯ ಬಲ ಹೊಂದಿರುವ ಔರಾದ ಪಟ್ಟಣ ಪಂಚಾಯಿತಿ ಇದರಲ್ಲಿ 12 ಸ್ಥಾನ ಬಿಜೆಪಿ 2 ಪಕ್ಷೇತರ ಹಾಗೂ 6 ಕಾಂಗ್ರೆಸ್ ಸ್ಥಾನ ಪಡೆದಿತ್ತು 12 ಸ್ಥಾನ ಬಹುಮತ ಹೊಂದಿದ ಬಿಜೆಪಿ ಇಂದು ಸರ್ವಾನುಮತದ ಮೂಲಕ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಸೇರಿತ್ತು ಇಂದು ನೂತನವಾಗಿ ಅಂಬಿಕಾ ಕೇರಬಾ ಪವಾರ ಅವರನ್ನು ಅಧ್ಯಕ್ಷ ಹಾಗೂ ಸಂತೋಷ್ ಪೋಕಲವಾರ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾನ್ಯ ಪಶು ಸಂಗೋಪನಾ ಸಚಿವರು ಯಾದಗಿರಿ ಹಾಗೂ ಬೀದರ ಜಿಲ್ಲೆಯ ಉಸ್ತುವಾರಿ ಸಚಿವರು ಶ್ರೀ ಪ್ರಭು ಚವ್ಹಾಣ ಅವರು ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಔರಾದ್ ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿ ಮಾಡಲು ಪಣ ತೊಟ್ಟು ಕೆಲಸ ಮಾಡಿ ಎಂದು ಹಾರೈಸಿದರು. ಹಾಗೂ ಪಕ್ಷದ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.