ಔರಾದನಲ್ಲಿ ಸುರಿದ ಭಾರಿ ಮಳೆಯಿಂದ ಸೇತುವೆ ಮುಳುಗಡೆ : ಸಂಚಾರ ಸ್ಥಗಿತ

ಔರಾದ :ಆ.4: ಬುಧವಾರ ಸಾಯಂಕಾಲ ಸುರಿದ ಧಾರಾಕಾರ ಮಳೆಗೆ ನಗರದ ಜನಜೀವನ ಅಸ್ತವ್ಯಸ್ಥವಾಗಿದೆ. ಹಲವು ಕಡೆ ಸೇತುವೆಗಳು ಮುಳುಗಡೆಯಾಗಿ, ಸಂಚಾರ ವ್ಯವಸ್ಥೆ ಬಂದ್ ಆಗಿದೆ.

ಪಟ್ಟಣದ ಬಸ್ ನಿಲ್ದಾಣದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಹೋಗುವ ರಸ್ತೆಯಲ್ಲಿ ಇರುವ ಸೇತುವೆ ಮುಳುಗಿದೆ, ಔರಾದ-ಉದಗೀರ ರಸ್ತೆ ಚರ್ಚ ಬಳಿ ಇರುವ ಸೇತುವೆ ನೀರಿನಲ್ಲಿ ಮುಳುಗಿ ಹೋಗಿ ಸುಮಾರು ಗಂಟೆಗಳ ಕಾಲ ಸಂಚಾರ ವ್ಯವಸ್ಥೆ ಸಂಪೂರ್ಣ ನಿಂತು ಹೋಗಿದ ಘಟನೆ ನಡೆದಿದೆ.

ಧಾರಾಕಾರವಾಗಿ ಸುರಿದ ಭಾರಿ ಮಳೆಯಿಂದ ಕೆಲವೊಂದು ಕಡೆ ಮನೆಗಳಲ್ಲಿ ನೀರು ನುಗ್ಗಿದೆ, ನೀರಿನ ರಭಸಕ್ಕೆ ಮರ ಕುಸಿದು ಬಿದ್ದಿದೆ, ಜಮೀನಿನಲ್ಲಿ ನೀರು ನುಗ್ಗಿ ಜಮೀನು ಜಲಾವೃತಗೊಂಡಿವೆ.