ಓ ಮೈ ಲವ್ ಗೆ 50ರ ಸಂಭ್ರಮ

“ಓ ಮೈ ಲವ್”  ಚಿತ್ರ 50 ದಿನ ಪೂರೈಸಿ  ಮುನ್ನಡೆದಿದೆ ಇದು ಸಹಜವಾಗಿ ನಿರ್ದೇಶಕ ಸ್ಮೈಲ್ ಶ್ರೀನು ಮತ್ತು ತಂಡದ ಮುಖದಲ್ಲಿ ಗೆಲುವಿನ ಮಂದಹಾಸ ಮೂಡಿಸಿದೆ.

ಅರ್ಧ ಶತಕ ಬಾರಿಸಿರುವ ಹಿನ್ನೆಲೆಯಲ್ಲಿ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಶ್ರೀನು, ಹತ್ತು ವರ್ಷಗಳ ಸಿನಿ ಬದುಕಿನಲ್ಲಿ ಆತಿಹೆಚ್ಚು ತೃಪ್ತಿ ತಂದುಕೊಟ್ಟ ಚಿತ್ರದ ಯಶಸ್ಸಿಗೆ  ಪ್ರತಿಯೊಬ್ಬ ಕಲಾವಿದರು ಹಾಗೂ ತಂತ್ರಜ್ಞರು ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರದ ಯಶಸ್ಸಿನಲ್ಲಿ ತಾಂತ್ರಿಕ ವರ್ಗದ ಪಾಲು ದೊಡ್ಡದಿದೆ. ಅವರ ಸಹಕಾರವಿಲ್ಲದೇ ಹೋಗಿದ್ದರೆ ಸಿನಿಮಾ ಇಷ್ಟೊಂದು ಅದ್ಭುತವಾಗಿ ಮೂಡಿಬರುತ್ತಿರಲಿಲ್ಲ. ಜೊತೆಗೆ ಒಂದು ಉತ್ತಮ ಚಿತ್ರ

ನೋಡಿ ಪ್ರಶಂಸೆ ವ್ಯಕ್ತಪಡಿಸಿ, ಗೆಲುವಿಗೆ ಕಾರಣರಾದ ನಾಡಿನ ಎಲ್ಲಾ ಸಿನಿರಸಿಕರಿಗೆ ಅಭಿನಂಧನೆ ಎಂದಿದ್ದಾರೆ. ನಿರ್ಮಾಪಕ ಜಿ.ರಾಮಾಂಜಿನಿ ಅವರು ಜಿ.ಸಿ.ಬಿ ಪ್ರೊಡಕ್ಷನ್ಸ್ ಬ್ಯಾನರ್ ನಿಂದ ಒಂದಷ್ಟು ಹೊಸ ಬಗೆಯ ಸಿನಿಮಾ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ. ಸ್ಮೈಲ್ ಶ್ರೀನು ಅವರಿಗೆ ಅನ್ಯ ಭಾಷೆಯಿಂದಲೂ ಬೇಡಿಕೆಯಿದ್ದು,  ಸದ್ಯದಲ್ಲೇ ಅವರು ದೊಡ್ಡ ಸ್ಟಾರ್ ನಟರ ಜೊತೆ ಶೀಘ್ರದಲ್ಲಿ   ಹೊಸ ಚಿತ್ರ ಘೋಷಣೆ ಮಾಡುವ ನಿರೀಕ್ಷೆ ಇದೆ.