ಓ.ಆರ್.ಎಸ್. ದ್ರಾವಣ, ಜಿಂಕ್ ಮಾತ್ರೆಗಳ ಮಹತ್ವ ತಿಳಿಸಿ: ತಹಸೀಲ್ದಾರ್ ರಾಜಶೇಖರ

ರಾಯಚೂರು.ಆ.೦೧- ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಲೂಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಓ.ಆರ್.ಟಿ. ಕಾರ್ನರ್ ಮಾಡಿ ಆಸ್ಪತ್ರೆಗಳಿಗೆ ಬಂದಂತಹ ಫಲಾನುಭವಿಗಳಿಗೆ ಓ.ಆರ್.ಎಸ್. ದ್ರಾವಣ ಮತ್ತು ಜಿಂಕ್ ಮಾತ್ರೆಯ ಮಹತ್ವದ ಬಗ್ಗೆ ತಿಳಿಸಲಾಗುತ್ತದೆಂದು ರಾಯಚೂರು ತಹಸೀಲ್ದಾರ್ ರಾಜಶೇಖರ ಬಿ. ಅವರು ಹೇಳಿದರು.
ಅವರು ಜು.೩೧ರ ರವಿವಾರ ದಂದು ಇಲ್ಲಿಯ ತಹಸೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ, ಕೈ ತೊಳೆಯುವ ವಿಧಾನ ಹಾಗೂ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ತಾಲೂಕ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ಆಗಷ್ಟ್ ೧ರಿಂದ ೧೫ರವರೆಗೆ ಆಶಾ ಕಾರ್ಯಕರ್ತೆಯರು ಪ್ರತಿಯೊಂದು ಮನೆ ಭೇಟಿ ಮಾಡಿ ೦-೫ ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ಓ.ಆರ್.ಎಸ್. ಪ್ಯಾಕೆಟ್‌ಅನ್ನು ವಿತರಿಸಲಾಗುತ್ತದೆ. ಅತಿಸಾರ ಭೇದಿ ಕಂಡುಬಂದ ಮಕ್ಕಳಿರುವ ಮನೆಗೆ ಓ.ಆರ್.ಎಸ್ ಮತ್ತು ಜಿಂಕ್ ಮಾತ್ರೆಯನ್ನು ವಿತರಿಸಲಾಗುತ್ತದೆ. ಜಿಂಕ್ ಮಾತ್ರೆಯನ್ನು ವಯಸ್ಸಿನ ಅನುಗುಣವಾಗಿ ೧೪ ದಿನಗಳವರೆಗೆ ಕೊಡಲಾಗುತ್ತದೆ ಎಂದರು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಶಕೀರ್ ಅವರು ಮಾತಾನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಓ.ಆರ್.ಎಸ್. ದ್ರಾವಣವನ್ನು ತಯಾರಿಸುವ ವಿಧಾನ, ಕೈ ತೊಳೆಯುವ ವಿಧಾನಗಳನ್ನು ಪ್ರಾಥ್ಯಕ್ಷತೆ ಮಾಡುವ ಮೂಲಕ ತೋರಿಸಬೇಕು. ಅಲ್ಲದೆ ಅತಿಸಾರ ಭೇದಿಯಿಂದ ೦-೫ವರ್ಷದೊಳಗಿನ ಮಕ್ಕಳು ೮%ಮರಣ ಹೊಂದುತ್ತಿದ್ದಾರೆ. ಈ ವರ್ಷದ ಧ್ಯೇಯ ತೀವ್ರತರ ಅತಿಸಾರ ಭೇದಿಯಿಂದ ಶ್ಯೂನ ಮರಣ ಇತರೆ ಇಲಾಖೆಗಳ ಸಹಕಾರ ಅಗತ್ಯವಿರುತ್ತದೆ ಎಂದರು.
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತದೆ. ಈ ವರ್ಷದ ಘೋಷ ವಾಕ್ಯ ಶಿಕ್ಷಣ ಮತ್ತು ಬೆಂಬಲದೊಂದಿಗೆ ಸ್ತನ್ಯಪಾನ ವೃದ್ದಿಸಿ ಸಮುದಾಯದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಎದೆ ಹಾಲಿನ ಮಹತ್ವದ ಬಗ್ಗೆ ಬಾಣಂತಿಯರಿಗೆ, ಗರ್ಭೀಣಿಯರಿಗೆ, ಸಾರ್ವಜನಿಕರಿಗೆ ಎದೆ ಹಾಲಿನ ಮಹತ್ವದ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತದೆ. ಈ ಕಾರ್ಯಕ್ರಮದಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರೆ ಇಲಾಖೆಯವರ ಸಹಕಾರ ಅಗತ್ಯವೆಂದು ತಿಳಿಸಿದರು.
ರಕ್ತಹೀನತೆ ಮತ್ತು ಕುಂಠಿತ ಬೆಳವಣಿಗೆ ತಡೆಗಟ್ಟುವ ನಿಟ್ಟಿನಲ್ಲಿ ಆಗಸ್ಟ್ ೧೦ರಂದು ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮ ಆಚರಿಸಲಾಗುತ್ತದೆ. ಪ್ರತಿಯೊಂದು ಶಾಲೆಯಲ್ಲಿ ಪ್ರಾರ್ಥನ ವೇಳೆಯ ನಂತರ ಕೈತೊಳೆಯುವ ವಿಧಾನದ ಮಹತ್ವ ಹಾಗೂ ಕೈ ತೊಳೆಯುವ ವಿಧಾನಗಳನ್ನು ಪ್ರಾಥ್ಯಕ್ಷತೆ ಮಾಡುವ ಮೂಲಕ ತೋರಿಸಬೇಕೆಂದು ತಿಳಿಸಿದರು. ೧-೧೯ ವರ್ಷದೊಳಗಿನ ಮಕ್ಕಳಿಗೆ ಅಲ್ಬಂಡೋಜಲ್ ಮಾತ್ರೆಗಳನ್ನು ವಿತರಿಸುವುದು. ಈ ಸಂದರ್ಭದಲ್ಲಿ ಬಿಟ್ಟು ಹೋದ ಮಕ್ಕಳಿಗೆ ಆಗಸ್ಟ್ ೧೭ರಂದು ಮಾಪ್ ಆಫ್ ಅಲ್ಬಂಡೋಜಲ್ ಮಾತ್ರೆಗಳನ್ನು ವಿತರಿಸಲಾಗುವುದು.ಈ ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದರು.
ಪ್ರತಿಯೊಂದು ಗ್ರಾಮಗಳಲ್ಲಿ ಪಂಚಾಯತ್ ಕಡೆಯಿಂದ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಿಗೆ ಕೈ ತೊಳೆಯುವ ವಿಧಾನ ಮತ್ತು ಸ್ವಚ್ಚತೆ ಬಗ್ಗೆ ಪಂಚಾಯತ್ ಸಭೆಗಳಲ್ಲಿ ಮಾಹಿತಿ ನೀಡಬೇಕು ಹಾಗೂ ಡಂಗುರ ಸಾರುವ ಮೂಲಕ, ಮೈಕಿಂಗ್‌ಮಾಡುವುದರ ಮೂಲಕ ಸಾರ್ವಜನಿಕಕರಲ್ಲಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ತಾಲೂಕ ಮೇಲ್ವಿಚಾರಕರು, ತಾಲೂಕ ಪಂಚಾಯತ್ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಶು ಅಭಿವೃದ್ದಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ನಗರಸಭೆಯ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು, ಆರ್.ಬಿ.ಎಸ್.ಕೆ. ವೈದ್ಯಾಧಿಕಾರಿಗಳು ಹಾಗೂ ಇತರೆ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.