ಓಮ್ರಿಕಾನ್ ಮಾರಾಣಾಂತಿಕ ಅಧ್ಯಯನದಲ್ಲಿ ದೃಢ

ನವದೆಹಲಿ, ಏ.೮- ಕೋವಿಡ್‌ನ ರೂಪಾಂತರ ತಳಿಯಾದ ಓಮ್ರಿಕಾನ್ ಋತುಮಾನದ ಸೋಂಕಾದ ಇನ್ಫ್ಲುಯೆಂಜಾಗಿಂತ ಮಾರಾಣಾಂತಿಕವಾಗಿದೆ ಎಂದು ಅಧ್ಯಯನ ತಿಳಿಸಿದೆ.

ಆಸ್ಪತ್ರೆಯಲ್ಲಿ ದಾಖಲಾದ ಇನ್ಫ್ಲುಯೆಂಜಾ ಸೋಂಕಿತರಿಗಿಂತ ಓಮ್ರಿಕಾನ್ ಸೋಂಕಿತರ ಸಾವಿನ ಪ್ರಮಾಣ ಅಧಿಕವಾಗಿದೆ ಎಂದು ವರದಿ ತಿಳಿಸಿದೆ. ಆದರೂ ಕೂಡ ಓಮ್ರಿಕಾನ್ ಡೆಲ್ಟಾ ಮತ್ತು ಅಲ್ಫಾ ತಳಿಗೆ ಹೋಲಿಕೆ ಮಾಡಿದಾಗ ಈ ಸೋಂಕಿತರ ಸಾವಿನ ಪ್ರಮಾಣ ಕಡಿಮೆ ಇರುವುದು ಸಂಶೋಧನೆಯನ್ನು ದೃಢಪಟ್ಟಿದೆ. ಈ ಸಂಬಂಧ ಇಸ್ಟೇಲ್ನ ಬೆಲಿನಿಸನ್ ಆಸ್ಪತ್ರೆಯ ರಾಬಿನ್ ಮೆಡಿಕಲ್ ಸೆಂಟರ್‌ನ ಡಾ ಅಲಾ ಆಟಮ್ನಾ ಮತ್ತು ಅವರ ಸಹೋದ್ಯೋಗಿಗಳು ನಡೆಸಿರುವ ಅಧ್ಯಯನದಲ್ಲಿ ಬಹಿರಂಗವಾಗಿದೆ.

ಈ ಅಧ್ಯಯನದಲ್ಲಿ ಇನ್ಫ್ಲುಯೆಂಜಾ ಸೋಂಕಿನಿಂದ ೧೮ ವರ್ಷಕ್ಕಿಂತ ದಾಖಲಾದವರು ಮತ್ತು ೨೦೨೧-೨೦೨೨ರಲ್ಲಿ ಓಮ್ರಿಕಾನ್ ಸೋಕಿನಿಂದ ದಾಖಲಾದವರ ಮೇಲೆ ಅಧ್ಯಯನ ನಡೆಸಲಾಗಿದೆ. ಈ ವೇಳೆ, ಓಮ್ರಿಕಾನ್ ಸೋಂಕಿಗೆ ತುತ್ತಾದವರ ಸಾವಿನ ಪ್ರಮಾಣ ಶೇ ೫೫ರಷ್ಟಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಇನ್ಫ್ಲುಯೆಂಜಾ ಸೋಂಕಿಗಿಂದ ಓಮ್ರಿಕಾನ್ ಸೋಂಕಿತರ ಸಾವಿನ ಪ್ರಮಾಣ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ಇನ್ಫ್ಲುಯೆಂಜಾ ಮತ್ತು ಕೋವಿಡ್-೧೯ ಎರಡೂ ಸೋಂಕುಗಳು ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಇವರಿಗೆ ದೈನಂದಿನ ಚಟುವಟಿಕೆ ನಿರ್ವಹಣೆಯಲ್ಲಿ ಸಹಾಯದ ಅಗತ್ಯ ಕಂಡು ಬಂದಿದೆ. ಜೊತೆಗೆ ಇವರಲ್ಲಿ ಅಧಿಕರ ರಕ್ತದ ಒತ್ತಡ ಮತ್ತು ಮಧುಮೇಹ ಹೊಂದಿರುವ ಸಾಧ್ಯತೆ ಇದೆ. ಇನ್ನು ಇನ್ಫ್ಲುಯೆಂಜಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಅಸ್ತಮಾ ಸಾಮಾನ್ಯವಾಗಿದೆ.