ಓಮ್ನಿ ಕಾರ್ ಡಿಕ್ಕಿ: ವ್ಯಕ್ತಿ ಗಂಭೀರ

ಮುಂಜಾನೆ ನೆಕ್ಕಿಲಾಡಿಯಲ್ಲಿ ನಡೆದ ಅವಘಡ
ಉಪ್ಪಿನಂಗಡಿ, ಮಾ.೩೦- ಪೇಪರ್ ಸಾಗಾಟದ ಓಮ್ನಿ ಕಾರು ಢಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ೩೪ ನೆಕ್ಕಿಲಾಡಿಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಬಿ.ಸಿ.ರೋಡ್ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಪತ್ರಿಕೆ ಸಾಗಾಟ ಮಾಡುತ್ತಿದ್ದ ಓಮ್ನಿ ಕಾರು ಮುಂಜಾನೆ ೫:೨೦ರ ಸುಮಾರಿಗೆ ೩೪ ನೆಕ್ಕಿಲಾಡಿಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರಿಗೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಅವರನ್ನು ಉಪ್ಪಿನಂಗಡಿ ಪೊಲೀಸ್ ಸಿಬ್ಬಂದಿ ಪ್ರತಾಪ್ ಹಾಗೂ ಹೈವೆ ಪಟ್ರೋಲ್ ನ ಪೊಲೀಸರು ತಕ್ಷಣ ಚಿಕಿತ್ಸೆಗಾಗಿ ಪುತ್ತೂರಿಗೆ ಕಳುಹಿಸಿದ್ದಾರೆ. ಅಪಘಾತವೆಸಗಿದ ಓಮ್ನಿ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.