ಓಮಿನಿ-ಲಾರಿ ಡಿಕ್ಕಿ; ಇಬ್ಬರ ಸಾವು

ಜಗಳೂರು.ಜೂ.೫; ತಾಲ್ಲೂಕಿನ ಹೊಸಕೆರೆ ಸಮೀಪ ಬೆಳ್ಳಿಗೆ ಓಮಿನಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿ ಇಬ್ಬರು ಸ್ಥಳದಲ್ಲಿ ಸಾವು ಕಂಡಿರುವ ಘಟನೆ ನಡೆದಿದೆ.

ತಾಲೂಕಿನ ಚಿಕ್ಕ ಉಜ್ಜಯಿನಿ ಗ್ರಾಮದ ಹನುಮಂತಪ್ಪ(35)  ಹಾಲಪ್ಪ (60) ಇವರು ತಮ್ಮ ಗ್ರಾಮದಿಂದ ಜಗಳೂರು ಕಡೆಗೆ  ಓಮಿನಿ ಕಾರ್ ನಲ್ಲಿ ಬರುವ ವೇಳೆ ಜಗಳೂರಿನಿಂದ ಕೊಟ್ಟೂರು ಕಡೆಗೆ ಹೋಗುವ ಲಾರಿ ನಡುವೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಸ್ಥಳಕ್ಕೆ ವೃತ್ತ ನಿರೀಕ್ಷಕ ಮಂಜುನಾಥ ಪಂಡಿತ್ ಮತ್ತು  ಉಪ ನಿರೀಕ್ಷಕ ಸಂತೋಷ್ ಬಾಗೋಜಿ  ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸ್ ಸಿಬ್ಬಂದಿಗಳಾದ ಬಸವರಾಜ್. ರಮೇಶ್. ಅಂಜಿನಿ ಬಾಬು ಸೇರಿದಂತೆ ಇದ್ದರು.