ಓಬವ್ವ ಪಡೆಯಿಂದ ಮಕ್ಕಳ ಹಕ್ಕುಗಳ ಜಾಗೃತಿ

ವಾಡಿ.ಸೆ.17: ಸಮಾಜದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಹಾಗೂ ಬಾಲ್ಯ ವಿವಾಹಗಳಂತಹ ಪಿಡುಗು ಕಾಡುತ್ತಿರುವ ಹಿನ್ನೆಲೆಯಲ್ಲಿ ಶಹಾಬಾದ ಉಪ ವಿಭಾಗದ ವಾಡಿ ಠಾಣಾ ವ್ಯಾಪ್ತಿಯಲ್ಲಿ ಓಬೊವ್ವ ವೇಷದಾರಿಯ ಮಹಿಳಾ ಪೊಲೀಸ್ ಪೇದೆಗಳು, ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸುವ ಮೂಲಕ ಆತ್ಮಸ್ಥರ್ಯ ಹೆಚ್ಚಿಸಿದರು.

ಕಲಬುರ್ಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಆದೇಶದ ಮೆರೆಗೆ ಮಹಿಳಾ ರಕ್ಷಣಾ ಪಡೆಯ ಪೊಲೀಸ್ ಪೇದೆಗಳು ಹಳಕರ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸಿದರು.

ಈ ಕುರಿತು ಮಾತನಾಡಿದ ಶಹಾಬಾದ ಡಿವೈಎಸ್‍ಪಿ ಠಾಣೆಯ ಮಹಿಳಾ ರಕ್ಷಣಾ ಪಡೆಯ ಪೊಲೀಸ್ ಪೇದೆ ಸವಿತಾ ತಳವಾರ, ವಿದ್ಯಾರ್ಥಿಗಳು ಅನ್ಯಾಯದ ವಿರುದ್ದ ಮೆಟ್ಟಿ ನಿಲ್ಲುವಂತಹ ಧೈರ್ಯ ಗಟ್ಟಿಸಿಕೊಳ್ಳಬೇಕು. ಮಹಿಳೆಯರಲ್ಲಿ ಅಡಗಿರುವ ಭಯದ ವಾತಾವರಣ ಓಗಲಾಡಿಸಲು ಓಬವ್ವ ತಂಡ ರಚನೆ ಮಾಡಲಾಗಿದೆ. ಪುಂಡರ ಯುವಕರಿಂದ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವದೇ ಓಬವ್ವ ಪಡೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ವಾಡಿ ಪೊಲೀಸ್ ಠಾಣೆಯ ಎಎಸ್‍ಐ ಚನ್ನಮಲ್ಲಪ್ಪ ಪಾಟೀಲ, ಪೊಲೀಸ್ ಪೇದೆ ರವೀಂದ್ರ ಹಾರಿ, ನಾಗರಾಜ ಸ್ವಾಮಿ, ಓಬವ್ವ ಪಡೆಯ ಪದೇಗಳಾದ ಸುವರ್ಣ ಕಾಳಗಿ, ಸರೋಜಿನಿ ಮಾಡಬೂಳ, ಅನಿತಾ ಕ್ಷೇತ್ರಿ, ಸವಿತಾ ತಳವಾರ ಸೇರಿದಂತೆ ಶಾಲಾ ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.