ಓಪಕ್ ಮತ್ತು ರಿಮ್ಸ್ ಆಸ್ಪತ್ರೆ ಅಧಿಕಾರಗಳನ್ನು ಅಮಾನತ್ತು ಮಾಡಲು ಒತ್ತಾಯ

ರಾಯಚೂರು, ಡಿ.೩-ರಾಜೀವಗಾಂಧಿ ಸೂಪರ್ ಸ್ಟೇಷಾಲಿಟಿ ಆಸ್ಪತ್ರೆ ಹಾಗೂ ರಿಮ್ಸ್ ಆಸ್ಪತ್ರೆಯಲ್ಲಿ ಔಷಧಿಗಳ ಭಾರೀ ಹಗರಣ ಬಯಲಿಗೆ ಬಂದಿದ್ದು ಡಾ. ನಾಗರಾಜ ಗದ್ವಾಲ್ ಹಾಗೂ ಡಾ. ಪೀರಾಪುರ ಅವರನ್ನು ಅಮಾನತ್ತು ಮಾಡಬೇಕು ಎಂದು ಸ್ವಾಭಿಮಾನ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿ ಕಚೇರಿಗೆ ಮನವಿಸಲ್ಲಿಸಿ ಒತ್ತಾಯಸಿದರು.
ನಗರದ ರಾಜೀವ್‌ಗಾಂಧಿ ಸೂಪರ್ ಸ್ಟೇಷಾಲಿಟಿ ಆಸ್ಪತ್ರೆ ಓಪಕ್ ಹಾಗೂ ರಿಮ್ಸ್ ಆಸ್ಪತ್ರೆಯಲ್ಲಿ ಔಷಧಿಗಳ ವಿತರಣೆ, ನಿರ್ವಹಣೆ ಹಾಗೂ ವಿಲೇವಾರಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಔಷಧಿಗಳ ಹಗರಣ ನಡೆಯುತ್ತಿರುವುದು ಇದೀಗ ಬಯಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಬರೆದಿರುವ ಔಷಧಿಗಳನ್ನು ರೋಗಿಗಳಿಗೆ ವಿತರಸದೇ ಕಡಿಮೆ ಪ್ರಾಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಿಮ್ ಗೋಡಾನ್‌ನಲ್ಲಿ ಯಥೇಚ್ಛವಾಗಿ ಔಷಧಿಗಳು ಇದ್ದರೂ ಸಹ ಅವುಗಳನ್ನು ಬಡ ರೋಗಿಗಳಿಗೆ ವಿತರಿಸದೇ, ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಿರುವುದು ಹಲವಾರು ವರ್ಷಗಳಿಂದ ನಡೆಯುತ್ತಿದ್ದರು. ಇದರ ಬಗ್ಗೆ ಯಾವ ಅಧಿಕಾರಿಗಳೂ ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ. ಡಾ.ನಾಗರಾಜ ಗದ್ವಾಲ್ ಹಾಗೂ ಡಾ. ಹೀರಾಪೂರು ಇವರ ಆಡಳಿತದಲ್ಲಿ ರಿಮ್ಸ್ ಮತ್ತು
ಓಪೆಕ್ ಆಸ್ಪತ್ರೆಗಳಲ್ಲಿ ಅವ್ಯವಹಾರ, ಭ್ರಷ್ಟಾಚಾರ, ಔಷಧಿಗಳ ಹಗರಣ ಸಾಕಷ್ಟು ನಡೆಯುತ್ತಿದೆ. ಅವಧಿ ಮುಗಿದಿರುವ ಔಷಧಿಗಳನ್ನು ಪುನಃ ಸರ್ಕಾರಕ್ಕೆ ಮರಳಿಸುವ ನಿಯಮಗಳನ್ನು ಗಾಳಿಗೆ ತೂರಿ ಅವಧಿ ಮುಗಿದ ಔಷಧಿಗಳನ್ನು ಜೆಸಿಬಿ ಮೂಲಕ ಭೂಮಿಯಲ್ಲಿ ಕುಣಿ ತೋಡಿ ಔಷಧಿಗಳನ್ನು ಹಾಕಿ ಮುಚ್ಚುತ್ತಿರುವ ಅವ್ಯವಹಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಕ್ಷಣವೇ ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಅವ್ಯವಹಾರ, ಭ್ರಷ್ಟಾಚಾರ, ಔಷಧಿ ಹಗರಣ ಮಾಡುತ್ತಿರುವ ತಪ್ಪಿತಸ್ಥರಿಗೆ
ಶಿಕ್ಷಿಸಬೇಕು ಹಾಗೂ ಡಾ.ನಾಗರಾಜ ಗದ್ವಾಲ್ ಮತ್ತು ಡಾ. ಪೀರಾಪೂರು ಇವರನ್ನು ತಕ್ಷಣದಿಂಲೇ ಅಮಾನತ್ತು ಮಾಡಬೇಕೆಂದು ಅವರು ಒತ್ತಾಯಸಿದರು.
ಈ ಸಂದರ್ಭದಲ್ಲಿ ಸ್ವಾ. ಕ. ರ. ವೇ ಅಧ್ಯಕ್ಷ ರಾಮು, ಜಿಲ್ಲಾಧ್ಯಕ್ಷ ಕೆ. ಬಸವರಾಜ್ ಹಾಗೂ ಪ್ರವೀಣ ಗಟ್ಟು ಸೇರಿದಂತೆ ಉಪಸ್ಥಿತರಿದ್ದರು.