
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜು.3 : ಸಾಮಾಜಿಕ ಸೇವೆಯ ಮೂಲಕ ಕ್ಷೇತ್ರದಲ್ಲಿ ಮನೆ ಮಾತಾಗಿರುವ ಓದೋ ಗಂಗಪ್ಪ ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯ ಅಧಿಕಾರ ದೊರೆಯಲಿ ಎಂದು ರಂಗಭಾರತಿ ಕಾರ್ಯಾಧ್ಯಕ್ಷೆ ಎಂ.ಪಿ.ಸುಮಾ ವಿಜಯ್ ಹೇಳಿದರು.
ಪಟ್ಟಣದ ಶಿವಶಾಂತವೀರ ಸಮುದಾಯ ಭವನದಲ್ಲಿ ಬಿಜೆಪಿ ಮುಖಂಡ ಓದೋ ಗಂಗಪ್ಪ ಅವರ 67ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಕೆಲಸ ನಿರ್ವಹಿಸಿ ಅಪಾರ ಅನುಭವ ಹೊಂದಿರುವ ಗಂಗಪ್ಪನವರು ಸೇವಾ ನಿವೃತ್ತಿ ಬಳಿಕ ಜನಪರ ಸೇವೆಯಲ್ಲಿ ತೊಡಗಿ, ಹೂವಿನಹಡಗಲಿಯವರೇ ಆಗಿದ್ದಾರೆ. ಅವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ದೊರೆತು ಇನ್ನು ಹೆಚ್ಚಿನ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ, ನೀರಾವರಿ ಯೋಜನೆಗಳ ಬಗ್ಗೆ ಅಪಾರ ಅನುಭವ ಹೊಂದಿರುವ ಗಂಗಪ್ಪನವರು ಹೂವಿನಹಡಗಲಿ ಕ್ಷೇತ್ರವನ್ನು ಸಂಪೂರ್ಣ ನೀರಾವರಿಯಾಗಿಸಲು ತಮ್ಮ ತಾಂತ್ರಿಕ ಜ್ಞಾನವನ್ನು ನೀಡುವಂತಾಗಬೇಕು ಎಂದು ಹೇಳಿದರು.
ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಜನಪರ ಕಾಳಜಿ ಹೊಂದಿರುವ ಗಂಗಪ್ಪನವರು ಅಪಾರ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ರಾಜಕೀಯ ಶಕ್ತಿ ದೊರೆಯಲಿ ಎಂದು ಆಶೀರ್ವದಿಸಿದರು.
ಮಾನಿಹಳ್ಳಿಯ ಮಳೆಯೋಗೀಶ್ವರ ಸ್ವಾಮೀಜಿ, ಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ನಂದಿಪುರ ಕ್ಷೇತ್ರದ ಮಹೇಶ್ವರ ಸ್ವಾಮೀಜಿ, ಕೊಂಬಳಿ ಚೌಕಿಮಠದ ಗಾಡಿತಾತ ಸಾನಿಧ್ಯ ವಹಿಸಿದ್ದರು.
ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಸಂಜೀವರೆಡ್ಡಿ, ಮುಖಂಡರಾದ ಪಿ.ವಿ.ಬಸವರಾಜ, ಕೋಡಬಾಳ ಹನುಮಂತಪ್ಪ, ಈಟಿ ಲಿಂಗರಾಜ, ಎಲ್.ಕೆ.ರವಿಕುಮಾರ್, ಸಿರಾಜ್ ಬಾವಿಹಳ್ಳಿ, ಜೆ.ಪರಶುರಾಮ, ಪ್ರದೀಪ ಜ್ಯೋತಿ, ಪುರಸಭೆ ಸದಸ್ಯರಾದ ಸುರೇಶ ಐಗೋಳ, ಎ.ಜೆ.ವೀರೇಶ, ಬಿ.ಎಂ.ಮಹೇಶ್ವರ ಸ್ವಾಮಿ, ದ್ಯಾಮಪ್ಪ ಇತರರು ಇದ್ದರು.
One attachment • Scanned by Gmail