ಓದು ಮುಖ್ಯವಿಲ್ಲ ಸಂಸ್ಕಾರ ಮುಖ್ಯ : ಡಾ. ಬಸವಲಿಂಗ ಅವಧೂತರು

ಭಾಲ್ಕಿ :ಏ.25: ಯಾರೊಬ್ಬರು ನಾನು ಚೆನ್ನಾಗಿ ಓದಿಕೊಂಡಿದ್ದಾನೆ, ದೊಡ್ಡ ಹುದ್ದೆಯಲ್ಲಿ ಇದ್ದೇನೆ ಎಂದು ಅಹಂ ಪಡಬಾರದು. ಇತರರೊಂದಿಗೆ ಹೇಗೆ ಇರಬೇಕು ಎಂದು ಸಂಸ್ಕಾರ ಕಲಿಯಬೇಕು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ, ದೇಗಲಮಡಿ ಮತ್ತು ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ನುಡಿದರು.
ಭಾಲ್ಕಿ ತಾಲ್ಲೂಕಿನ ತಳವಾಡ (ಕೆ) ಗ್ರಾಮದಲ್ಲಿಬುಧವಾರ ನಡೆದ ಮಹಾದೇವ ದೇವಾಲಯದ 23ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕಿನ ಅಂಧಕಾರ ಕಳೆಯುವವನೇ ನಿಜವಾದ ಗುರು ಅವರ ಮಾರ್ಗದರ್ಶನದಿಂದ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು
ಈ ಊರಲ್ಲಿ ತಾವೆಲ್ಲ ಸೌಹಾರ್ದದಿಂದ ಬಾಳಬೇಕು. ಪರಿಸ್ಪರರ ಕಷ್ಟ- ಸುಖದಲ್ಲಿ ಭಾಗಿಯಾಗಬೇಕು ಎಂದು ಸಲಹೆ ನೀಡಿದರು
ತಂದೆ ತಾಯಿ ವೃದ್ಧಾಪ್ಯದಲ್ಲಿಇದ್ದಾಗ ಅವರ ಸೇವೆ ಮಾಡಬೇಕು. ಯಾವ ಕಾರಣಕ್ಕೂ ಅವರ ಮನಸ್ಸು ನೋಯಿಸಬಾರದು ಎಂದು ತಿಳಿಸಿದರು.
ಇಂದಿನ ಹುಡುಗರು ಮಾದಕ ವಸ್ತುಗಳ ಚಟಕ್ಕೆ ಬಿದ್ದು ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಚಟಗಳಿಂದ ಆರೋಗ್ಯ ಹಾಳಾಗುತ್ತದೆ ತಂದೆ ತಾಯಿ ಮಕ್ಕಳನ್ನೂ ಪೊಷಿಸಿಕೊಳ್ಳಬೇಕು ಎಂದು ನುಡಿದರು.
ಬಸವಣ್ಣ ಅಕ್ಕಮಹಾದೇವಿ ವಿವೇಕಾನಂದ ಸೇರಿದಂತೆ ಮಹಾತ್ಮರ ಜೀನವ ಸಾಧನೆ ಪುಸ್ತಕಗಳನ್ನು ಓದಿ ಪ್ರೇರಣೆ ಪಡೆದು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಈ ಊರಿನ ಆರಾಧ್ಯ ದೈವ ಮಹಾದೇವ ಭಕ್ತರ ಸಂಕಷ್ಟ ಪರಿಹರಿಸುತ್ತಾನೆ ಎಂದು ಹೇಳಿದರು ಇದಕ್ಕೂ ಮುನ್ನ ಗ್ರಾಮದ ಮುಖ್ಯ ರಸ್ತೆಯಿಂದ ಮಹಾದೇವ ಮಂದಿರದವರೆಗೆ ಡಾ. ಬಸವಲಿಂಗ ಅವಧೂತರನ್ನು ಬೆಳ್ಳಿ ರಥದಲ್ಲಿ ಭವ್ಯ ಮೆರವಣಿಗೆಯಲ್ಲಿ ಕರೆ ತರಲಾಯಿತು.
ಕಳಸ ಹೊತ್ತ ಮಹಿಳೆಯರು, ಕೋಲಾಟ, ಡೋಳು ಕುಣಿತ, ಯುವಕರ ನರ್ತನ ಮೆರವಣಿಗೆಗೆ ಕಳೆ ತಂದುಕೊಟ್ಟವು.
ಪ್ರಮುಖರಾದ ಗುಂಡಪ್ಪ ರಾಜಪೂರೆ, ಓಂಕಾರ ಬೋರಗೆ, ಬಾಬಶೆಟ್ಟಿ ರಾಜಪೂರೆ, ಜಗನ್ನಾಥ ಕನಶೆಟ್ಟೆ, ಶಿವಕುಮಾರ ಪಾಟೀಲ್, ಸೋಮನಾಥ ಕನಶೆಟ್ಟೆ, ಯುವರಾಜ ರಾಜಪೂರೆ, ರವಿ ಪಾಟೀಲ, ಕಾಮಶೆಟ್ಟಿ ರಾಜಪೂರೆ, ಸಿದ್ರಾಮ ಪಾಟೀಲ್, ಜಗನ್ನಾಥ ಪಾಟೀಲ್, ಶಿವಾಜಿ ಲೋಹಾರ, ವಿಶ್ವನಾಥ ಹೂಗಾರ ಮತ್ತಿತರರು ಪಾಲ್ಗೊಂಡಿದ್ದರು.