ಓದುವ ಮನೆಯನ್ನು ಸದುಪಯೋಗ ಪಡಿಸಿಕೊಳ್ಳಿ-ಸಂತೋಷ್ ಕುಮಾರ್

ಸಂಡೂರು ನ 15 : ಶಿಕ್ಷಣ ಇಲಾಖೆಯ ಅಪಾರ ಆಯುಕ್ತರ ಅದೇಶದಂತೆ ಓದುವ ಮನೆ ಕಾರ್ಯಕ್ರಮವನ್ನು ತಾಲೂಕಿನ ವಿಠಲಾಪುರ ಗ್ರಾಮ ಪಂಚಾಯಿತಿಯಲ್ಲಿ ಪ್ರಾರಂಭಿಸಲಾಯಿತು, ಅಲ್ಲದೆ ಮಕ್ಕಳಿಗೆ ಓದುವ ಮನೆ ಕಾರ್ಯಕ್ರಮಕ್ಕೆ ನೊಂದಾಣೆ ಮಾಡಿಕೊಳ್ಳಲಾಯಿತು ಎಂದು ಮುಖ್ಯ ಗುರುಗಳಾದ ಸಂತೋಷ್ ತಿಳಿಸಿದರು.
ಅವರು ತಾಲೂಕಿನ ವಿಠ್ಠಲಾಪುರ ಗ್ರಾಮದಲ್ಲಿ ಮಕ್ಕಳ ದಿನಾಚರಣೆ ಮತ್ತು ಓದುವ ಮನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಕಡ್ಡಾಯ ಶಿಕ್ಷಣದ ಅಡಿಯಲ್ಲಿ 1 ರಿಂದ 14ನೇ ವಯಸ್ಸಿನವರೆಗೆ ಶಿಕ್ಷಣವನ್ನು ಕಡ್ಡಾಯವಾಗಿ ಹಾಗೂ ಉಚಿತವಾಗಿ ನೀಡಲಾಗುವುದು, ಅಲ್ಲದೆ ಯಾವುದೇ ಕಾರಣಕ್ಕೂ ಮಕ್ಕಳು ಬಾಲ ಕಾರ್ಮಿಕರಾಗದಂತೆ ತಡೆಯುವುದ, ಒಂದು ವೇಳೆ ಕಾರ್ಮಿಕರಾದರೆ ಅವರನ್ನು ಕೆಲಸಕ್ಕೆ ಇಟ್ಟುಕೊಂಡವರಿಗೆ, ಪಾಲಕರಿಗೆ ಶಿಕ್ಷೆ ನೀಡಲಾಗುವುದು, ಪ್ರತಿ ಮಗುವೂ ಸಹ ದೇಶದ ಸಂಪತ್ತು, ಅದಕ್ಕೆ ಬಾಲ್ಯದಿಂದ 14ನೇ ವರ್ಷದ ವರೆಗೆ ಕಡ್ಡಾಯವಾಗಿ ಶಿಕ್ಷಣ ಪಡೆಯುವ ಹಕ್ಕು ಇದೆ, ಯಾವುದೇ ಕಾರಣಕ್ಕೂ ಬಾಲ್ಯ ವಿವಾಹವನ್ನು ಮಾಡಬಾರದು ಒಂದು ವೇಳೆ ಮಾಡಿದ ಕುಟುಂಬದವರಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುವುದು, ಅದ್ದರಿಂದ ಮಕ್ಕಳು ತಪ್ಪದೇ ಶಿಕ್ಷಣವನ್ನು ಪಡೆಯಬೇಕು, ಶಿಕ್ಷಣದಿಂದ ವಂಚಿತರಾದರೆ ಅವರು ಇಡೀ ಜೀವನದಲ್ಲಿ ಕಷ್ಟಗಳಿಗೆ ತುತ್ತಾಗಬೇಕಾಗುತ್ತದೆ, ಅದ್ದರಿಂದ ಕಡ್ಡಾಯ ಶಿಕ್ಷಣ ಪಡೆಯುವ ಮೂಲಕ ದೇಶದ ಉತ್ತಮ ಪ್ರಜೆಯಾಗಬೇಕು ಎಂದರು. ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನವನ್ನು ನಡೆಲಾಯಿತು.
ಈ ಸಂದರ್ಭದಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸುವ ಮೂಲಕ ಅವರಿಗೆ ಬಹುಮಾನಗಳನ್ನು ನೀಡಲಾಯಿತು, ಈ ಸಂದರ್ಭದಲ್ಲಿ ಶಿಕ್ಷಕರಾದ ಗಂಗಣ್ಣ.ಟಿ. ಸ್ವಾಮಿ, ಮಲ್ಲಿಕಾರ್ಜುನ, ಪಾಂಡುರಂಗ, ತಾರಾಪತಿ, ಸಂತೋಷ್‍ಕುಮಾರ್, ಪಂಚಾಯಿತಿ ಸಿಬ್ಬಂದಿಗಳಾದ ಪಂಪಾಪತಿ, ತಿಮ್ಮಾರಡ್ಡಿ ಉಪಸ್ಥಿತರಿದ್ದರು.