“ಓದುವ ಬೆಳಕು ” ಮುಖ್ಯ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ

ಸಿಂದಗಿ:ಜ.7: ಗ್ರಂಥಾಲಯಗಳ ಸಂಪನ್ಮೂಲಗಳು ಎಂದಿಗೂ ಎಲ್ಲಿಯೂ ಬತ್ತಿಹೋಗಬಾರದು ಗ್ರಂಥಾಲಯಗಳು ಪ್ರಾಚೀನ ಕಾಲದಲ್ಲಿ ಮುದ್ರಾಣಾಲಯಗಳಿರಲಿಲ್ಲ ಆದ್ದರಿಂದ ಜ್ಞಾನವನ್ನು ಸಂಪಾದಿಸಲು ಬಹಳ ಕಷ್ಟಪಡಬೇಕಾಗುತ್ತಿತ್ತು, ಈಗ ಗ್ರಂಥಗಳು ನಮಗೆ ಬೇಕಾದ ವಿಷಯಗಳನ್ನು ತಿಳಿಸಲು ಮುದ್ರಣ ಸಿದ್ಧವಾಗಿವೆ, ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಬೇಕಾದ ಗ್ರಂಥಗಳನ್ನು ಓದಿ ಜ್ಞಾನ ಬೆಳೆಸಿ ಕೊಳ್ಳಲು ಹೆಚ್ಚು ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಎಸ್ ನಗನೂರ ಹೇಳಿದರು.
ಪಟ್ಟಣದ ಬಿ ಆರ್ ಸಿ ಕೇಂದ್ರದಲ್ಲಿ ಬುಧುವಾರರಂದು ವಿಜಯಪುರ ಜಿಲ್ಲಾ ಪಂಚಾಯತ ,ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮಜಿ ಫೌಂಡೇಷನ್ ಹಮ್ಮಿಕೊಂಡ “ಓದುವ ಬೆಳಕು ” ಮುಖ್ಯ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ಮತ್ತು ಪುಸ್ತಕ ವಿತರಣಾ ಸಮಾರಂಭವನ್ನು ಗ್ರಾಮ ಪಂಚಾಯತ ಅಧಿಕಾರಿಗಳು ಶಾಲಾ ಮುಖ್ಯ ಶಿಕ್ಷಕರು ಹಾಗೂ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕರಿಗಾಗಿ ತರಬೇತಿಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು,
ಕ್ಷೇತ್ರ ಸಮನ್ವಯ ಅಧಿಕಾರಿ ಸಂತೋಷಕುಮಾರ ಬೀಳಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪುಸ್ತಕಗಳ ಜೊತೆಯಲ್ಲಿ ಶರಣರ ಸಂತರ ಸಾಹಿತಿಗಳ ರಚಿಸಿದ ಪುಸ್ತಕಗಳು ಓದಲು ಪ್ರೇರಣೆ ನೀಡಬೇಕು. ಅರಿವಿನ ಜ್ಞಾನದೀವಿಗೆಗಳು. ಇಷ್ಟುಪಟ್ಟು ಓದಲು ಬರುವವರಿಗೆ, ಸ್ವಾಗತ ಕೊರುವ ಮೂಲಕ ಅವರಿಗೆ ಸಹಕಾರ ನೀಡುವ ಮೂಲಕ ಜ್ಞಾನದ ಹೊಸ ಹೊಳಪನ್ನು ನೀಡುವ ಅಕ್ಷಯ ಭಂಡಾರವಾಗಬೇಕು ಎಂದು ಹೇಳಿದರು,
ತಾಲೂಕಾ ಪಂಚಾಯತ ಯೋಜನಾಧಿಕಾರಿ ಉಪ್ಪಲದಿನ್ನಿ, ಅಜೀಂ ಪ್ರೇಮಜಿ ಫೌಂಡೇಷನ್ ಅಧಿಕಾರಿ ಸುನೀತಾ ವೇದಿಕೆ ಮೇಲೆ ಇದ್ದರು.
ಬಿಆರ್ ಪಿ ಎಂ.ಬಿ. ಯಡ್ರಾಮಿ ಸ್ವಾಗತಿಸಿ ವಂದಿಸಿದರು,