ಓದುಗರು ಗ್ರಂಥಾಲಯ ಲಾಭ ಪಡೆಯಿರಿ: ಇಓ ಮಾಣಿಕರಾವ ಪಾಟೀಲ

ಬೀದರ:ಜು.18: ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಬೀದರ ತಾಲ್ಲೂಕ ಪಂಚಾಯತ ವತಿಯಿಂದ ಸುಸರ್ಜಿತ ಗ್ರಾಂಥಾಲಯಗಳನ್ನು ನಿರ್ಮಿಸಿದ್ದು ಇದರ ಸದುಪಯೋಗವನ್ನು ಓದುಗರು ಪಡೆಯಬೇಕು ಎಂದು ಬೀದರ ತಾಲ್ಲೂಕ ಪಂಚಾಯತ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಮಾಣಿಕರಾವ ಪಾಟೀಲ್ ಹೇಳಿದರು.
ಅವರು ಸೋಮವಾರ ಬೀದರನ ಮೈಲುರು ಬಳಿ ಇರುವ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಆಯೋಜಿಸಿದ ಗ್ರಂಥಪಾಲಕರ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಇ ಗ್ರಂಥಾಲಯದಲಯವನ್ನು ಮಕ್ಕಳ ಸ್ನೇಹಿಯಾಗಿಸಬೇಕು, ಸರಿಯಾದ ಇಂರ್ಟನೆಟ್ ಸೇವೆ ವದಗಿಸಬೇಕು ಇದರಿಂದ ಬೇರೆ ದೇಶಗಳ ಪುಸ್ಕಕಗಳನ್ನು ಸಹ ಓದಬಹುದು ಹಾಗೂ ನಮ್ಮ ದೇಶದ ಪುಸ್ಕಗನ್ನು ಇತರೆ ದೇಶದವರು ಓದುವಂತಾಗುತ್ತದೆ ಎಂದರು..
ಈ ಸಂದರ್ಭದಲ್ಲಿ ತರಬೇತಿದಾರ ಸುನಿಲ್ ಕುಂಟೆ, ಮುಜಾಮಿಲ್, ಪ್ರೀಯಾ, ವಿಶ್ವನಾಥ, ಸತ್ಯಜೀತ್ ನಿಡೋಧಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.