ಓದಿನ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ:ಕೂಚಬಾಳ

oppo_0

ತಾಳಿಕೋಟೆ,ಏ.16: ಸತತ ಓದಿನೊಂದಿಗೆ ಸಾಗಿದ ಕು.ಭವಾನಿ ಘೋರ್ಪಡೆ ಅವಳ ಪರಿಶ್ರಮಕ್ಕೆ ದ್ವಿತೀಯ ಪಿಯುಸಿಯಲ್ಲಿ ಶೇ.97 ರಷ್ಟು ಅಂಕ ಪಡೆದುಕೊಂಡು ಸಾಧನೆ ಮಾಡಲು ಸಾಧ್ಯವಾಗಿದೆ ಮುಂದಿನ ವೈಧ್ಯಕೀಯ ಕ್ಷೇತ್ರದ ಕನಸ್ಸು ಮತ್ತು ಛಲ ಯಶಸ್ವಿಯಾಗಲೆಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಹೇಳಿದರು.
ಸೋಮವಾರರಂದು ಪಟ್ಟಣದ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರ ಮನೆಗೆ ಬೆಟ್ಟಿ ನೀಡುವದರೊಂದಿಗೆ ಅವರ ಮೊಮ್ಮಗಳಾದ ಕು.ಭವಾನಿ ಘೋರ್ಪಡೆ ದ್ವಿತೀಯ ಪಿಯುಸಿ ಪರಿಕ್ಷೆಯಲ್ಲಿ ಶೇ.97 ಅಂಕ ಪಡೆಯುವದರೊಂದಿಗೆ ಉತ್ತಮ ಸಾಧನೆ ಮಾಡಿದ್ದಕ್ಕೆ ಸನ್ಮಾನಿಸಿ ಪ್ರೋತ್ಸಾಹಿಸಿ ಸಿಹಿ ವಿತರಿಸಿ ಮಾತನಾಡಿದ ಅವರು ಓದಿನಲ್ಲಿ ಆಸಕ್ತಿ ಎಂಬುದು ಇರಬೇಕು ಇದರಿಂದ ಎಂತಹದ್ದೇ ಪರಿಕ್ಷೆಗಳು ಬಂದರೂ ಕೂಡಾ ನಿರ್ಭಯವಾಗಿ ಎದುರಿಸಬಲ್ಲರು ಕು.ಭವಾನಿ ಘೋರ್ಪಡೆ ನೀಟ್ ಮತ್ತು ಸಿಇಟಿ ಪರಿಕ್ಷೆಯಲ್ಲಿ ಯಶಸ್ವಿ ಕಾಣುವದರೊಂದಿಗೆ ಮುಂದಿನ ಉಜ್ವಲ ಭವಿಷ್ಯ ಕಟ್ಟುಕೊಳ್ಳಲಿ ಎಂದು ಆಶಿಸಿದ ಅವರು ನಾಗರಬೆಟ್ಟದ ಎಂ.ಎಸ್.ಪಾಟೀಲ ಅವರ ನೇತೃತ್ವದ ಆಕ್ಸಫರ್ಡ್ ಪಾಟೀಲ ಕಾಲೇಜು ಉತ್ತರ ಕರ್ನಾಟಕ ಭಾಗದಲ್ಲಿಯೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ ಪ್ರತಿವರ್ಷವು 100ಕ್ಕೂ ಅಧಿಕ ಮಕ್ಕಳನ್ನು ಮೇಡಿಕಲ್ ಸೀಟು ಒದಗಿಸುತ್ತಾ ಬಂದಿದೆ ಅಂತಹ ಉತ್ತಮ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಪಡೆದಿರುವ ಕು.ಭವಾನಿ ಘೋರ್ಪಡೆ ಉಜ್ವಲ ಭವಿಷ್ಯದ ಕನಸ್ಸು ನನಸ್ಸಾಗಲಿ ಎಂದು ಆಶಿಸಿದರು.
ಈ ಸಮಯದಲ್ಲಿ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ಬಿಜೆಪಿ ಮುಖಂಡರುಗಳಾದ ಮಂಜುನಾಥ ಶೆಟ್ಟಿ, ಮುರುಗೇಶ ಕೋರಿ, ಸಿದ್ದನಾಥ ಸಾಳುಂಕೆ, ಪ್ರವೀಣ್ ಘೋರ್ಪಡೆ, ಅಂಬಾಜಿ ಘೋರ್ಪಡೆ, ಮೊದಲಾದವರು ಇದ್ದರು.