(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಜು24: ವಿದ್ಯಾಭ್ಯಾಸದೊಂದಿಗೆ ಕ್ರೀಡೆಯು ಒಂದು ಪಾಠವಾಗಿದೆ. ಇದರಲ್ಲಿ ಭಾಗವಹಿಸುವುದರಿಂದ ಮನುಷ್ಯ ಸಧೃಡನಾಗಿ ಬೆಳೆಯಲು ಸಾಧ್ಯವಾಗುತ್ತದೆ. ಅದಲ್ಲದೇ ಮನಸ್ಸಿಗೆ ಖುಷಿಯೊಂದಿಗೆ ವಿಶ್ರಾಂತಿ ನೀಡುತ್ತದೆ ಎಂದು ಅಳ್ನಾವರ ಪ.ಪಂ.ಮಾಜಿ ಸದಸ್ಯ ಸುಧೀರ ಅಂಬಡಗಟ್ಟಿ ಹೇಳಿದರು.
ಸಮೀಪದ ಅಳ್ನಾವರ ಸರಕಾರಿ ಪ್ರಥಮ ದರ್ಜೆ ಕಾಲೇಜ ಆವರಣದಲ್ಲಿ ಕವಿವಿ ಪ್ರಥಮ ವಲಯ ಮತ್ತು ಅಂತರ ವಲಯ ಪುರುಷ್ ಕಬಡ್ಡಿ ಪಂದ್ಯಾವಳಿ ಸಮಾರೋಪ ಕಾರ್ಯಕ್ರಮದಲ್ಲಿ ಅಥಿತಿಯಾಗಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದವರು.
ಕ್ರೀಡೆಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳವುದರಿಂದ ಶಾಲೆಗೊಂದು ದೊಡ್ಡ ಹೆಸರು ಬಂದಂತಾಗುತ್ತದೆ. ಓದಿನೊಂದಿಗೆ ಕ್ರೀಡೆಯು ಸಹ ಒಂದು ಪಾಠವಿದ್ದಂತೆ ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವಿದ್ಯಾರ್ಥಿಗಳ ಬಾಳು ಹಸನಾಗುವುದು. ಓದಿನೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿ ಭವಿಷ್ಯ ಕಟ್ಟಿಕೊಳ್ಳಬೇಕೆಂದರು.
ಶಾಲೆಯಲ್ಲಿ ಗುರುಗಳ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಮುಂದಾಗಲು ಸಾಧ್ಯವಿದೆ. ವಿದ್ಯಾರ್ಥಿಗಳ ಉತ್ತಮ ಸಾಧನೆಯಿಂದ ಶಾಲೆಗೆ ಕೀರ್ತಿ ಬರುತ್ತದೆ. ಅದೆ ತೆರನಾಗಿ ವಿದ್ಯಾರ್ಥಿಗಳು ಸಹ ಉತ್ತಮತೆಯಿಂದ ಅಭ್ಯಸಿಸಿ ಕ್ರೀಡೆಯಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತರುವುದರೊಂದಿಗೆ ಗುರುಗಳ ಕೀರ್ತಿಯು ಹೆಚ್ಚಾಗುತ್ತದೆ ಎಂದರು.
ಈ ವೇಳೆ ಅರ್ಬನ್ ಬ್ಯಾಂಕ ವ್ಯವಸ್ಥಾಪಕ ರವಿ ಪಟ್ಟಣ, ಪತ್ರಕರ್ತ ಗುರುರಾಜ ಸಬ್ಬನಿಸ, ದೈಹಿಕ ಶಿಕ್ಷಕ ಶ್ರೀಪಾಲ ಕುರಕರಿ, ಎಂ.ಸಿ.ವಿಜಾಪೂರ, ಪರಶುರಾಮ ಬೇಕನೇಕರ, ಡಾ’ ಶಿರಿನ್‍ಬಾಬು ಹಿರೇಕುಂಬಿ, ಪಿಎಲ್‍ಡಿ ಬ್ಯಾಂಕ ಉಪಾಧ್ಯಕ್ಷ ಮಲ್ಲಪ್ಪ ಗಾಣಿಗೇರ, ಅಶ್ವಿನಿ ನಿಪ್ಪಾಣಿ, ಡಾ. ಉಮಾ ಪೂಜಾರ, ತಳವಾರ, ಸಿದ್ದೇಶ್ವರ, ಕನಬುರ್ಗಿ ಸೇರಿದಂತೆ ವಿದ್ಯಾಥಿಗಳು ಇನ್ನಿತರಿದ್ದರು.
ಪಿ.ಆರ್. ನಾಗರತ್ನಾ ವಂದಿಸಿದರು. ಪಿ.ಬಿ.ಜಾರಿ ನಿರೂಪಿಸಿ ಸ್ವಾಗತಿಸಿದರು.