“ಓದಲು ಒಂದೇ ದಿನಪತ್ರಿಕೆ” ಕಿಟಕಿ ಇಲ್ಲ, ಮುರಿದ ಬಾಗಿಲು-ಗಿಡಗಂಟೆಗಳ ನಡುವೆ ಮೊರಬ ಗ್ರಂಥಾಲಯ

ಕೂಡ್ಲಿಗಿ.ನ.14:- ಬಡವರ ಪಾಲಿನ ಜ್ಞಾನ ಬಂಡಾರ ಹೆಚ್ಚಿಸುವ ಗ್ರಂಥಾಲಯ ಗ್ರಾಮದ ಜನತೆಗೆ ದೇಶ ವಿದೇಶದಲ್ಲಾಗುವ ಮಾಹಿತಿ ತಿಳಿಸುವ ದಿನಪತ್ರಿಕೆಗಳು ಮತ್ತು ಅನೇಕ ಪುಸ್ತಕಗಳಿರಬೇಕಾದ ಗ್ರಂಥಾಲಯದಲ್ಲಿ ದಿನಕ್ಕೊಂದು ದಿನಪತ್ರಿಕೆ ಹಾಗೂ ಗಿಡಗಂಟೆ ತುಂಬಿದ ವಾತಾವರಣ ಕಿಟಕಿಇಲ್ಲದ ಮುರಿದ ಬಾಗಿಲ ಗ್ರಂಥಾಲಯ ತಾಲೂಕಿನ ಮೊರಬದಲ್ಲಿ ಕಾಣಬಹುದು. ಇಂತಹ ದುಸ್ಥಿಯ ಗ್ರಂಥಾಲಯ ನಮ್ಮ ಕೂಡ್ಲಿಗಿ ತಾಲೂಕು ಕೇಂದ್ರದಿಂದ ಆರೇಳು ಕಿಲೋಮೀಟರ್ ವ್ಯಾಪ್ತಿಯ ಮೊರಬ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಕಂಡುಬರುತ್ತಿದ್ದು ಈ ಗ್ರಂಥಾಲಯ ತೆರೆದಿದ್ದು 1999ರ ಡಿಸೇಂಬರ್ 5ರಂದು ಆದರೆ ಈ ಗ್ರಂಥಾಲಯ ಆರಂಭದಿಂದಲೂ ಒಂದೇ ದಿನಪತ್ರಿಕೆ ಹಾಕಿಸಿಕೊಳ್ಳುತ್ತಿದ್ದು ಉಳಿದ ಪತ್ರಿಕೆಗಳು ಪುಸ್ತಕಗಳು ಎಲ್ಲಿವೆ ಇದಕ್ಕೆ ಬರುವ ಅನುದಾನ ಎಷ್ಟು ಮುರಿದ ಕಿಟಕಿಗಳು, ಸ್ವಾಗತಿಸುವ ಬಾಗಿಲು ಕೆಳಗೆ ಹಲಗೆ ಮುರಿದಿದ್ದು ಅದನ್ನು ಸರಿಪಡಿಸುವ ಗೋಜಿಗೂ ಸಂಬಂಧಿಸಿದವರು ಮುಂದಾಗಿಲ್ಲ ಯಾರಾದರೂ ಓದಲು ಬರುವ ಯುವಕರು ಅದರಲ್ಲೂ ಮೊರಬನಹಳ್ಳಿಯಿಂದ ಬಂದು ನೋಡಿದರೆ ಮಾತ್ರ ಗ್ರಂಥಾಲಯದ ಬಾಗಿಲು ತೆರೆಯುತ್ತದೆ ಇಲ್ಲವಾದರೆ ಹಾಕಿದ ಬಾಗಿಲು ಹಾಕಿದಂಗೆ ಸುಮಾರು ಐದಾರು ತಿಂಗಳಿಂದ ಗ್ರಂಥಾಲಯದ ಸುತ್ತಲ ವಾತಾವರಣ ಎಕ್ಕಿಗಿಡ ಮತ್ತು ಹುಲ್ಲಿನ ಗಿಡಗಂಟೆ ಬೆಳೆದಿದ್ದರು ಅದರ ಸ್ವಚ್ಛತೆಗೆ ಗ್ರಂಥಾಲಯದ ಗ್ರಂಥಪಾಲಕರಾಗಲಿ ಪಂಚಾಯತಿ ಅಧಿಕಾರಿಗಳು ಮುಂದಾಗಿಲ್ಲ ಎನ್ನುವುದೇ ಯುವಕರ ಯಕ್ಷಪ್ರಶ್ನೆಯಾಗಿದೆ.
ಈ ಹಿಂದೆ ಗ್ರಂಥಾಲಯಕ್ಕೆ ಸಂಬಂದಿಸಿದ ಸಮಸ್ಯೆಗಳಿದ್ದರೆ ಗ್ರಂಥಾಲಯಕ್ಕೆ ಸಂಬಂದಿಸಿದ ಇಲಾಖೆ ನೋಡಿಕೊಳ್ಳುತಿತ್ತು ಆದರೆ ಇದೇ ವರ್ಷದ ಮಾರ್ಚ್ ತಿಂಗಳ ಹಾಸುಪಾಸಿನಲ್ಲಿ ಗ್ರಂಥಾಲಯದ ಸಂಪೂರ್ಣ ಜವಾಬ್ದಾರಿ ಗ್ರಾಮಪಂಚಾಯಿತಿಗೆ ನೀಡಿದೆ ಎಂದು ತಿಳಿದಿದ್ದು ದಿನ ಪತ್ರಿಕೆಗಳಿಗೆ ತಿಂಗಳಿಗೆ 450ರೂ ನೀಡುತ್ತಿದೆ ಎಂದು ತಿಳಿದಿದ್ದರೂ ಮೊರಬ ಗ್ರಂಥಾಲಯದಲ್ಲಿ ಮಾತ್ರ ಬರೀ ಒಂದೇ ದಿನಪತ್ರಿಕೆ ಮಾತ್ರ ಇರುತ್ತಿದ್ದು ಅದು ಕೆಲವೊಮ್ಮೆ ಹರಿದ ದಿನಪತ್ರಿಕೆ ಓದುಗರ ಕೈ ಸೇರುತ್ತಿದೆ ಹರಿದ ದಿನಪತ್ರಿಕೆಯೇ ಬಡವರ ಪಾಲಿಗಾಗಿದೆ ಸರ್ಕಾರ ಗ್ರಂಥಾಲಯ ಅಭಿವೃದ್ಧಿಗೆ ಪಂಚಾಯತಿ ಕರವಸೂಲಿ ಹಣದಲ್ಲಿ ಇಂತಿಷ್ಟು ತೆಗೆಯಬೇಕು ಎಂಬ ನಿಯಮವಿದ್ದು ಸಂಬಂದಿಸಿದ ಹಣ ಎಲ್ಲಿ ಅಭಿವೃದ್ಧಿಯಾಗಬೇಕಾದ ಗ್ರಂಥಾಲಯ ಗಿಡಗಂಟೆಗಳ ವಾತಾವರಣದಲ್ಲಿ ಮುರಿದ ಕಿಟಕಿ ಬಾಗಿಲ ದುರಾವಸ್ಥೆ ಅಧಿಕಾರಿಗಳಿಗೆ ಕಾಣುತ್ತಿಲ್ಲವೇ ಎನ್ನುತ್ತಾರೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಯುವಕರು.
ಕೋಟ್ :- ಸುಮಾರು ವರ್ಷಗಳಿಂದ ನಾನು ದಿನಪತ್ರಿಕೆ ಓದಲು ಹೋಗುತ್ತಿದ್ದು ಒಂದೇ ಒಂದು ದಿನಪತ್ರಿಕೆ ಇರುತ್ತೆ ಇತ್ತೀಚಿಗೆ ಇರುವ ಒಂದು ಪತ್ರಿಕೆ ಸಹ ಅದು ಹರಿದಿದ್ದ ಪತ್ರಿಕೆ ಇತ್ತು ಮೊರಬ ಗ್ರಾಮದ ರಂಗಮಂದಿರಕ್ಕೆ ಹೊಂದಿಕೊಂಡಿರುವ ಗೋಡೆಗೆ ಗ್ರಂಥಾಲಯ ಕೋಣೆ ಕಟ್ಟಿದ್ದು ನಾವು ಗ್ರಂಥಾಲಯಕ್ಕೆ ಹೋದರೆ ಅಲ್ಲಿ ಬೆಳೆದಿರುವ ಗಿಡಗಂಟೆಗಳು ನಮ್ಮನ್ನು ಸ್ವಾಗತಿಸುತ್ತವೆ ಅದನ್ನು ಸ್ವಚ್ಛಗೊಳಿಸಲು ಸಹ ಸಂಬಂಧಿಸಿದವರು ಮುಂದಾಗಿಲ್ಲ ಬಡವರ ಪಾಲಿನ ಜ್ನಾನಬಂಡಾರವಿಲ್ಲಿ ಬೇಕಾಬಿಟ್ಟಿ ಇರುವುದು ಸರಿಯಲ್ಲ ಸಂಬಂದಿಸಿದ ಅಧಿಕಾರಿ ವರ್ಗ ತಕ್ಷಣ ಹೆಚ್ಚೆತ್ತು ಹೆಚ್ಚು ಪತ್ರಿಕೆ ಪುಸ್ತಕಗಳ ಜ್ನಾನಬಂಡಾರ ಮಾಡಬೇಕಾಗಿದೆ ಎನ್ನುತ್ತಾರೆ ಮೊರಬನಹಳ್ಳಿ ಕರಿಯಪ್ಪ.