ಓಡಿಐನಲ್ಲಿ ೭೦೦೦ ರನ್ ಪೂರೈಸಿದ ಮಿಥಾಲಿ

ಲಖನೌ,ಮಾ.೧೪- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿರಾಜ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ೭ ಸಾವಿರ ರನ್ ಪೂರೈಸುವ ಮೂಲಕ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೆ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ೧೦ ಸಾವಿರ ರನ್ ಪೂರೈಸಿದ್ದ ಮಿಥಾಲಿರಾಜ್ ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ೪ನೇ ಏಕದಿನ ಪಂದ್ಯದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.
೨೧೩ನೇ ಏಕದಿನ ಪಂದ್ಯವಾಡುತ್ತಿರುವ ಮಿಥಾಲಿರಾಜ್, ವೇಗವಾಗಿ ೨೬ ರನ್ ಗಳಿಸುವ ಮೂಲಕ ೭ ಸಾವಿರ ರನ್ ಪೂರೈಸಿ ಐತಿಹಾಸಿಕ ಸಾಧನೆ ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ.
ಪಂದ್ಯ ಆರಂಭಕ್ಕೂ ಮುನ್ನ ಮಿಥಾಲಿರಾಜ್, ಏಕದಿನ ಕ್ರಿಕೆಟ್‌ನಲ್ಲಿ ೬೯೭೪ ರನ್ ಗಳಿಸಿದ್ದರು. ದಕ್ಷಿಣ ಆಫ್ರಿಕ ವಿರುದ್ಧ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿತು. ಈ ಪಂದ್ಯದಲ್ಲಿ ೭೧ ಎಸೆತದಲ್ಲಿ ೪೫ ರನ್ ಗಳಿಸಿ ಔಟಾಗಿದ್ದಾರೆ.