ಓಡಬಾಯಿ ಬಳಿ ಕೋಳಿ ಸಾಗಾಟ ವಾಹನ ಪಲ್ಟಿ

ಸುಳ್ಯ , ಮೇ ೧೯- ಸುಳ್ಯ ಓಡಬಾಯಿ ಮಾಂಡೋವಿ ಶೋರೂಮ್ ಬಳಿ ಕೋಳಿ ಸಾಗಟದ ಈಚರ್ ಲಾರಿಯೋಂದು ಪಲ್ಟಿಯಾದ ಘಟನೆ ಮಂಗಳವಾರ ನಡೆದಿದೆ. ಸುಳ್ಯದಿಂದ ಹಾಸನಕ್ಕೆ ಕೋಳಿ ತರಲು ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದ್ದು, ಚಾಲಕ ಮತ್ತು ಸಹ ಸವಾರ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.