ಓಝೋನ್ ಸಂರಕ್ಷಿಸದಿದ್ದರೆ ಮಾನವನ ಮೇಲೆ ದುಷ್ಪರಿಣಾಮ: ನಾಯಿಕೊಡೆ

ಬೀದರ:ಸೆ.24: ಓಝೋನ್ ಪದರವನ್ನು ಸಂರಕ್ಷಿಸದಿದ್ದರೆ ಬರುವ ದಿನಗಳಲ್ಲಿ ಮಾನವ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದು ನಿಶ್ಚಿತ ಎಂದು ತೋಟಗಾರಿಕೆ ಕಾಲೇಜಿನ ಉಪನ್ಯಾಸಕ ಡಾ. ಪ್ರವೀಣಕುಮಾರ ನಾಯಿಕೋಡೆ ಹೇಳಿದರು.

ಇಲ್ಲಿಯ ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸಸ್ಯವಿಜ್ಞಾನ ವಿಭಾಗದ ವತಿಯಿಂದ ಆಯೋಜಿಸಿದ್ದ ವಿಶ್ವ ಓಝೋನ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಓಝೋನ್ ಪದರ ದಿನದಿಂದ ದಿನಕ್ಕೆ ಸವಿಯುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರಕ್ಕಾಗಿ ಅದನ್ನು ಕಾಪಾಡಬೇಕಿದೆ ಎಂದು ತಿಳಿಸಿದರು.

ಮಾನವ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಚಲುವಾ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಡಾ. ಎಂ.ಎಸ್. ಪಾಟೀಲ, ಜೋಶಿ ಇದ್ದರು. ಸಸ್ಯವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಪೂಜಾ ಸೂರ್ಯವಂಶಿ ಸ್ವಾಗತಿಸಿದರು. ಗೌರಿಪ್ರಿಯಾ ನಿರೂಪಿಸಿದರು. ಭವ್ಯ ವಂದಿಸಿದರು.