ಓಝೋನ್ ಪದರಿನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ಧಾರವಾಡ, ಸೆ.17: ಭೂಮಂಡಲವನ್ನು ಆವರಿಸಿರುವ ಓಝೋನ್ ಪದರವು ಭೂಮಿಯನ್ನು ಮತ್ತು ಅಲ್ಲಿರುವ ಜೀವ ಸಂಕುಲಗಳನ್ನು ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳಿಂದ ರಕ್ಷಿಸುತ್ತದೆ. ಆದ್ದರಿಂದ ಜೀವರಕ್ಷಕ ಓಝೋನ್ ಪದರಿಗೆ ಹಾನಿಯಾಗದಂತೆ ಮುಂಜಾಗ್ರತೆ ವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಶೋಭಾ ಪೆÇೀಳ ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಮತ್ತು ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿ ಸಹಯೋಗದಲ್ಲಿ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಶ್ವ ಓಜೋನ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮೂಲಸೌಕರ್ಯಗಳನ್ನು ಅಭಿವುದ್ಧಿಪಡಿಸುವ ಯೋಜನೆಗಳು, ತಂತ್ರಜ್ಞಾನಗಳು, ಕೈಗಾರಿಕೆ ಮುಂತಾದ ಚಟುವಟಿಕೆಗಳಿಂದ ಹೊರಹೊಮ್ಮುವ ರಾಸಾಯನಿಕ ಮತ್ತು ವಿಷಕಾರಕ ವಸ್ತುಗಳಿಂದಾಗಿ ಜಾಗತಿಕ ತಾಪಮಾನ ಹೆಚ್ಚಾಗಿ ಓಝೋನ್ ಪದರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಮತ್ತು ಪರಿಸರದಲ್ಲಿ ಉಂಟಾಗುತ್ತಿರುವ ಬದಲಾವಣೆಯಿಂದ ಓಝೋನ್ ಪದರವು ಕ್ಷೀಣಿಸುತ್ತಿದೆ ಎಂದು ಅವರು ಹೇಳಿದರು.

ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಕೆ. ಕೊಟ್ರೇಶ ಮಾತನಾಡಿ, ಓಝೋನ್ ಪದರವು ಸೂರ್ಯನಿಂದ ಹೊರಹೊಮ್ಮುವ ನೇರಳಾತೀತ ಕಿರಣಗಳಿಂದ ಜೈವಿಕ ರಾಶಿಗಳನ್ನು ಸಂರಕ್ಷಿಸುತ್ತದೆ. ಮಾನವ ಹಾಗೂ ಪ್ರಾಣಿ ಸಂಕುಲಗಳು ಸಸ್ಯ ಪ್ರಬೇಧವನ್ನು ಅವಲಂಬಿಸಿ ಬದುಕುತ್ತಿವೆ. ಕ್ಲೊರೊಪೆÇ್ಲರೊ ಕಾರ್ಬನ್ ಹವಾನಿಯಂತ್ರಿತ ವಸ್ತುಗಳ ಬಳಕೆಯಿಂದ ಓಝೋನ್ ಪದರ ನಾಶವಾಗುತ್ತಿದೆ. ಸಾಧಾರಣವಾಗಿ ಇರಬೇಕಾದ ಪದರ ಕ್ಷೀಣಿಸುತ್ತಿದೆ. ಚರ್ಮದ ಕ್ಯಾನ್ಸರ್, ಉಸಿರಾಟದ ತೊಂದರೆ, ಚರ್ಮದ ಅಲರ್ಜಿ ಮುಂತಾದ ಅಪಾಯಕಾರಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದರು.

ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಿವಾನಂದ ಜಿ.ಚೌಗಲಾ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಎಂ ಡೋರಿಸ್ ಸಿಂಗ್, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸಣಕಲ್, ಪರಿಸರ ಸಮಿತಿ ಕಾರ್ಯದರ್ಶಿ ಡಾ. ವಿಲಾಸ ಕುಲಕರ್ಣಿ, ಸಹಾಯಕ ಪರಿಸರ ಅಧಿಕಾರಿ ಸೋಮಶೇಖರ ಹಿರೇಗೌಡರ, ಕೆ. ಪಿ. ಕುಲಕರ್ಣಿ, ಹರ್ಷ ನೀಲಗುಂದ ಉಪಸ್ಥಿತರಿದ್ದರು. ಅನಿತಾ ಪ್ರಾರ್ಥಿಸಿದರು. ಮೌನ.ಎಸ್. ಸ್ವಾಗತಿಸಿದರು. ಡಾ. ಎಸ್. ಎಸ್. ಮಂಗಳವಾಡಿ ವಂದಿಸಿದರು.