ಓಂ ಶಕ್ತಿ ಅಮ್ಮನವರಿಗೆ ಗಂಜಿ ಪೂಜೆ; ನೂರಾರೂ ಭಕ್ತರು ಭಾಗಿ

ವಿಜಯಪುರ, ಜು. ೩೧:ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎ.ರಂಗನಾಥಪುರ ಗ್ರಾಮದಲ್ಲಿ ಓಂ ಶಕ್ತಿ ಮಹಿಳಾ ಬಳಗದಿಂದ ಅಮ್ಮನವರ ಗಂಜಿ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಅಮ್ಮನವರ ದೇವಾಲಯದಲ್ಲಿ ಮಹಿಳೆಯರು ಬೆಳಗ್ಗಿನಿಂದ ದೇವಾಲಯವನ್ನು ಸ್ವಚ್ಚ ಗೊಳಿಸಿ ಅಮ್ಮನವರಿಗೆ ನೂರಾರು ಹೂವುಗಳಿಂದ ಅಂಲಕಾರ ಮಾಡಲಾಯಿತು. ನಂತರ ದೇವಾಲಯದಲ್ಲಿ ಮಹಿಳೆಯರೇ ಸೇರಿ ಗಂಜಿಯನ್ನು ತಯಾರಿಸಿ ನಂತರ ಪ್ರತಿಯೊಂದು ಮನೆಯ ಮಹಿಳೆಯರು ಗಂಜಿ ಮಡಿಕೆಗೆ ವಿವಿಧ ಬಗ್ಗೆಯ ಅಲಂಕಾರ ಮಾಡಿ ಅಮ್ಮನವರ ಪೋಟೋದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.
ಹಾಗೆಯ ಮೆರವಣಿಗೆ ಬರುವಾಗ ಮಹಿಳೆಯರು ಅಮ್ಮನವ ಹಾಡುಗಳೊಂದಿಗೆ ತಮ್ಮ ಭಕ್ತಿ ಭಾವವನ್ನು ಮೆರೆದರು. ಊರಿನ ಪ್ರಮುಖ ಬೀದಿಗಳಲ್ಲಿ ಗ್ರಾಮಸ್ಥರು ಮೆರವಣಿಗೆಯಲ್ಲಿ ಅರಿಶಿನ ಕುಂಕುಮವನ್ನು ರಸ್ತೆ ಉದ್ದಕ್ಕೂ ಹಾಕಿ ತಮ್ಮ ಭಕ್ತಿ ಭಾವ ಮೆರದರು.
ಗ್ರಾಮವನ್ನು ಸುತ್ತುವರೆದ ಭಕ್ತರಿಗೆ ದೇವಾಲಯದಿಂದ ಗಂಜಿಯನ್ನು ಅವರ ಅವರ ಕುಟುಂಬದವರಿಗೆ ಹಂಚಲಾಯಿತು.
ಈ ವೇಳೆ ಭಕ್ತೆ ರಾಧಮ್ಮ ರಮೇಶ್ ಮಾತನಾಡಿ, ನಾವು ಮೇಲ್ ಮರವತ್ತೂರ್ ಅದಿಪರಶಕ್ತಿ ಅಮ್ಮ ನವರ ದೇವಾಲಯಕ್ಕೆ ಸುಮಾರು ೧೪ ವರ್ಷಗಳಿಂದ ಅಮ್ಮನವರ ದೇವಾಲಯಕ್ಕೆ ಹಿಡುಮುಡಿ ಕಟ್ಟಿಕೊಂಡು ಅಮ್ಮನವರ ದರ್ಶನ ಮಾಡಿಕೊಂಡು ಬರುತ್ತಿದ್ದು ಅಮ್ಮನವರ ಅನುಗ್ರಹದಿಂದ ನಮಗೆ ಎವು ಒಳ್ಳೆಯದಾಗಿದೆ ಎಂದರು.
ಭಕ್ತೆ ಹಂಸ ರಾಮಚಂದ್ರ ಮಾತನಾಡಿ, ನಾವು ಅಮ್ಮನವರ ಸೇವೆ ಸುಮಾರು ವರ್ಷಗಳಿಂದ ಮಾಡಿಕೊಂಡು ಬರುತ್ತೀದೆವೆ, ನಾವು ಪ್ರತಿ ಅಮಾವಾಸ್ಯೆ ಯೊಂದು ಅಮ್ಮನವರ ದೇವಾಲಯದಲ್ಲಿ ಗ್ರಾಮಸ್ಥರ ಸಹಕಾರದಿಂದ ಪೂಜಾ ಕಾರ್ಯಕ್ರಮಗಳು ಮಾಡಿಕೊಂಡ ಬರುತ್ತಿದ್ದು ನಾವು ಪ್ರತಿ ವರ್ಷವೂ ಅಮ್ಮನವರ ದರ್ಶನ ದಿಂದ ಎಲ್ಲಾವು ಒಳ್ಳೆಯದು ಹಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಬಂದಂತಹ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಭಕ್ತರಾದ ಲಕ್ಷಮ್ಮ, ನಾರಾಯಣಮ್ಮ, ಸುಜಾತಮ್ಮ, ರತ್ನಮ್ಮ, ಶೈಲಾ, ರಾಧ, ಮುನಿಲಕ್ಷಮ್ಮ, ಸರೋಜಮ್ಮ, ನೇತ್ರ, ಕೆಂಪಕ್ಕ, ಅನುಶ್ರೀ, ಅನು, ನಾಗರತ್ನಮ್ಮ, ಅಂಬಿಕಾ, ರಮಾದೇವಿ, ಜೋತಿ, ಶಶಿ, ಆರತಿ, ಸುಧಾ, ಸುನೀತಾ, ಉಮಾ, ಮಂಜು, ತೇಜ್ ಹಾಗೂ ಗ್ರಾಮ ಎಲ್ಲಾ ಮಹಿಳೆಯರು ಭಕ್ತವೃಂದ ಹಾಜರಿದ್ದರು.