ಓಂ-ಬಿರ್ಲಾ- ಖಾದರ್ ಭೇಟಿ

ಬೆಂಗಳೂರು,ಜೂ,೯:ರಾಜ್ಯವಿಧಾಸನಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಲೋಕಸಭಾಧ್ಯಕ್ಷರಾದ ಓಂ ಬಿರ್ಲಾರವರನ್ನು ಭೇಟಿ ಮಾಡಿದ್ದರು. ನವದೆಹಲಿಯ ಲೋಕಸಭಾಧ್ಯಕ್ಷರ ನಿವಾಸದಲ್ಲಿ ಲೋಕಸಭಾಧ್ಯಕ್ಷ ಓಂ ಬಿರ್ಲಾರವರನ್ನು ದೆಹಲಿಯಲ್ಲಿರುವ ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್ ಸೌಹಾರ್ದಯುತ ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.
ಈ ಚರ್ಚೆಯ ಸಂದರ್ಭದಲ್ಲಿ ನಿಯಮಾವಳಿಗಳಂತೆ ಸದನ ನಡೆಸಿ ಯಾವುದೇ ಗದ್ದಲ, ಧರಣಿಗಳಿಗೆ ಆಸ್ಪದವಾಗದಂತೆ ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸುವ ಪರಂಪರೆಯನ್ನು ಬೆಳೆಸುವಂತೆಯೂ ಲೋಕಸಭಾಧ್ಯಕ್ಷರು ರಾಜ್ಯ ವಿಧಾನಸಭಾಧ್ಯಕ್ಷರಿಗೆ ಸಲಹೆ ನೀಡಿದರು ಎಂದು ಹೇಳಲಾಗಿದೆ.
ಈ ಭೇಟಿ ವಿಶೇಷವೇನಿಲ್ಲ.ಇದು ಸೌಹಾರ್ದ ಭೇಟಿ ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು.