`ಓಂಕಾರ’ ಕೃತಿ ಲೋಕಾರ್ಪಣೆ

ಹುಬ್ಬಳ್ಳಿ,ಏ5: ಸಾಂಸ್ಕೃತಿಕ, ವೈಜ್ಞಾನಿಕ, ಐತಿಹಾಸಿಕ, ಆಧ್ಯಾತ್ಮಿಕ, ಸಾಮಾಜಿಕ ಈ ಐದು ಪ್ರಮುಖ ವಿಷಯಾಧಾರಿತವಾಗಿ ಸಾಹಿತ್ಯ ಸೃಜಿಸ¨ಹುದಾಗಿದ್ದು, ಎಲ್ಲ ಪ್ರಕಾರ ಮತ್ತು ವಿಷಯವನ್ನು ಮುಕ್ತ ಮನಸ್ಸಿನಿಂದಲೇ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳುವದು ಅಗತ್ಯವಾಗಿದೆ ಎಂದು ಸಾಹಿತಿ ಜನಮೇಜಯ ಉಮ್ಮರ್ಜಿ ಅವರು ಅಭಿಪ್ರಾಯಪಟ್ಟರು.
ಅವರು ಸಂಯುತ ಪ್ರತಿಷ್ಠಾನ ಹಾಗೂ ವಿಪ್ರದರ್ಶನ ವತಿಯಿಂದ ಪತ್ರಕರ್ತರ ಸಂಘದ ಸ್ವರ್ಣ ಭವನದಲ್ಲಿ ನಡೆದ ಯುವ ಬರಹಗಾರ ಹನುಮಂತ ದೇಶಕುಲಕರ್ಣಿ ಅವರ ಚೊಚ್ಚಲ ಕೃತಿ `ಓಂಕಾರ’ (ವಿವಿಧ ವಿಷಯಗಳ ಸಾಕಾರ..) ಕೃತಿ ಅವಲೋಕನ ಮಾಡಿ ಮಾತನಾಡಿದ ಅವರು ಸಾಹಿತ್ಯ ಇಂದು ಸಂಕೀರ್ಣಾವಸ್ಥೆಯಲ್ಲಿದೆ ಎಂದರು.
ಓಂಕಾರ ಕೃತಿ ಲೋಕಾರ್ಪಣೆ ಮಾಡಿದ ಹಿರಿಯ ನಿವೃತ್ತ ವಾರ್ತಾಧಿಕಾರಿ ಪಿ. ಎಸ್. ಪರ್ವತಿ ಮಾತನಾಡಿ, ಹನುಮಂತ ದೇಶಕುಲಕರ್ಣಿ ಅವರ ಪ್ರಬುದ್ಧ ಲೇಖನಗಳಿಂದ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಅವರ ಲೇಖನಗಳಲ್ಲಿ ಇನ್ನಷ್ಟು ಅಧ್ಯಯನದಿಂದ ಕೂಡಿ ಉತ್ತಮ ಕೃತಿಯಾಗಿ ಹೊರಬರಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಣಪತಿ ಗಂಗೊಳ್ಳಿ ಮಾತನಾಡಿ, ಹನುಮಂತ ದೇಶಕುಲಕರ್ಣಿ ಅವರು ಬರೆದ ಓಂಕಾರ ಕೃತಿಯಲ್ಲಿನ 114 ಲೇಖನಗಳು ಅವರ ಬರಹದ ವಿಸ್ತಾರತೆ ಹಾಗೂ ವಿಭಿನ್ನತೆ ಜೊತೆಗೆ ಪತ್ರಿಕೆಗೆ ಬರೆದ ಲೇಖನಗಳನ್ನು ಅಳವಡಿಸಿದ್ದರಿಂದ ಕಾಲಮಾನದ ಲೇಖನಗಳಾಗಿವೆ ಎಂದರು. ಪತ್ರಕರ್ತರ ಸಂಘದ ವತಿಯಿಂದ ಸಂಘದ ಸದಸ್ಯರು ಪುಸ್ತಕ ಬಿಡುಗಡೆ ಮಾಡಿದರೆ ಅವರಿಗೆ ಪೆÇ್ರೀತ್ಸಾಹರೂಪವಾಗಿ ರೂ. 5,000 ಸಹಾಯಧನ ನೀಡಲಾಗುತ್ತದೆ ಎಂದರು.
ಲೇಖಕ ಹನುಮಂತ ದೇಶಕುಲಕರ್ಣಿ ತಮ್ಮ ಅನಿಸಿಕೆ ಹಂಚಿಕೊಂಡು, ನಾಡಿನ ಎಲ್ಲ ಪತ್ರಿಕೆಗಳಲ್ಲಿ ಲೇಖನ ಬರೆಯುವ ಮೂಲಕ ಉತ್ತೇಜಿತನಾಗಿದ್ದೇನೆ. ಈ ಕೃತಿ ಹೊರಬರಲು ಅನೇಕ ಪತ್ರಿಕೆಗಳು ನನ್ನ ಲೇಖನಗಳನ್ನು ಪ್ರಕಟಿಸಿ ಪೆÇ್ರೀತ್ಸಾಹಿಸಿವೆ. ಅಲ್ಲದೆ ಹಿರಿಯರ ಮಾರ್ಗದರ್ಶನ ಲೇಖನವಾಗಿ ರೂಪಿಸಲು ಸಹಾಯಕವಾಗಿದೆ ಎಂದರು.
ಮಹಾಂತಪ್ಪ ನಂದೂರ, ಮುನಿಸ್ವಾಮಿ, ಕಟ್ಟೀಮನಿ, ಉಳವಪ್ಪ ಸಲಕಿ, ಗುರುರಾಜ ದೇಶಕುಲಕರ್ಣಿ, ಬಸವಂತರಾವ್ ದೇಶಕುಲಕರ್ಣಿ, ಆರ್.ಡಿ.ಕುಲಕರ್ಣಿ, ಶಂಕರ ಮಾಮಲೆ ದೇಶಪಾಂಡೆ, ಈರಣ್ಣ ಗಣಾಚಾರಿ, ಪರಮ ಕಿತ್ಲಿ, ಕಾಶೀನಾಥ ಬಾಕಳೆ, ಶ್ರೀವಲ್ಲಭ ಕುಲಕರ್ಣಿ, ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ಸಂಯುತಾ ಪ್ರತಿಷ್ಠಾನದ ವತಿಯಿಂದ ಲೇಖಕ ಹನುಮಂತ. ಮ. ದೇಶಕುಲಕರ್ಣಿ ಅವರಿಗೆ ಸನ್ಮಾನಿಸಲಾಯಿತು. ಕವಯತ್ರಿ ಮಾಧವಿ ಕುಲಕರ್ಣಿ ನಿರೂಪಿಸಿದರು. ನವೀನಶಾಸ್ತ್ರೀ ಸ್ವಾಗತಿಸಿದರು. ಸುಶೀಲೇಂದ್ರ ಕುಂದರಗಿ ವಂದಿಸಿದರು.