ಒಳ ಹೊರಗು ಕನ್ನಡ ಮಾತನಾಡುವುದು ರೂಢಿಯಾಗಲಿ: ಪಾಟೀಲ

ಆಳಂದ:ನ.22: ಕನ್ನಡ ಭಾಷೆಯ ಮೇಲೆ ಅನೇಕ ಅನ್ಯಭಾಷೆಗಳ ಅಕ್ರಮಣ ನಡೆದಿದೆ. ಹೀಗಾಗಿ ಪ್ರತಿಯೊಬ್ಬರು ಮನೆಯ ಒಳಗೆ ಮತ್ತು ಹೊರಗೆ ಪರಸ್ಪರ ಕನ್ನಡ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಅವರು ಹೇಳಿದರು.

ತಾಲೂಕಿನ ಸರಸಂಬಾ ಗ್ರಾಮದಲ್ಲಿ ನಮ್ಮ ಕರುನಾಡು ರಕ್ಷಣಾ ವೇದಿಕೆಯ ತಾಲೂಕು ಘಟಕ ಈಚೆಗೆ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ನಿಮಿತ್ತವಾಗಿ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಡಿ ಭಾಗದ ಗ್ರಾಮಗಳಲ್ಲಿ ನಿರಂತರವಾಗಿ ಕನ್ನಡಪರ ಸಂಘಟನೆಯ ಮೂಲಕ ಕನ್ನಡ ರಾಜ್ಯೋತ್ಸವ ಪ್ರತಿಭಾ ಪುರಸ್ಕಾರ ಕೈಗೊಂಡ ಕಾರ್ಯ ಸಂತಷ ತಂದಿದೆ. ಕನ್ನಡದ ಮೇಲೆ ಅನ್ಯ ಭಾಷೆಯ ಅಕ್ರಮಣ ನಡೆದಿದೆ. ಹೀಗಾಗಿ ಇನ್ಮೂಂದೆ ನಾವು ಕನ್ನಡ ಉಳಿಸಿ ಬೆಳೆಸಲು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಜೀವಂತವಾಗಿ ಉಳಿಸಕೊಳ್ಳಬೇಕಾಗಿದೆ. ಕನ್ನಡ ಭಾಷೆಗಾಗಿ ದುಡಿಯೋಣಾ, ಕನ್ನಡಗರು ಎಲ್ಲೇ ಇದ್ದರು ಸಹ ಕನ್ನಡ ಮಾತನಾಡುವುದು ನಮ್ಮ ಮೊದಲಾದ್ಯತೆ ಆಗಬೇಕು. ಕನ್ನಡಕ್ಕೆ ಧಕ್ಕೆ ಬಂದರೆ ಎಲ್ಲರು ಕಂಕಣಬದ್ಧರಾಗಿ ನಿಲ್ಲೋಣ್ಣಾ ಎಂದು ಅವರು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಗುಲಬರ್ಗಾ ವಿವಿ ಉಪನ್ಯಾಸಕ ಗುರುಲಿಂಗಯ್ಯಾ ಸ್ವಾಮಿ ಹೊನ್ನಳಿ ಅವರು ಕನ್ನಡ ನಾಡು, ನುಡಿ ಇತಿಹಾಸ ದೊಡ್ಡ ಪರಂಪರೆಯಿಂದ ಕೂಡಿದೆ, ಇದನ್ನು ಪ್ರತಿಯೊಬ್ಬರು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಜಿಲ್ಲಾ ಅಧ್ಯಕ್ಷ ಗಂಗಾಧರ್ ಕುಂಬಾರ ಅವರು ಮಾತನಾಡಿ, ಕನ್ನಡಪರ ಹಾಗೂ ಜನಪರ ಸಮಸ್ಯೆಗಳಿಗೆ ವೇದಿಕೆಯ ನಿರಂತರ ಧ್ವನಿಯಾಗಿ ಹೋರಾಡುತ್ತ ಬರುತ್ತಿದೆ ಎಂದು ಸಂಘಟನೆಯ ನಡೆದು ಬಂದ ದಾರಿಯನ್ನು ವಿವರಿಸಿದರು.

ಸರಸಂಬಾ ಗ್ರಾಪಂ ಅಧ್ಯಕ್ಷ ಪುತಳಾಬಾಯಿ ಕೊರಳ್ಳಿ, ತಾಪಂ ಮಾಜಿ ಸದಸ್ಯ ಸಾತಲಿಂಗಪ್ಪ ಪಾಟೀಲ, ಕೃಷಿ ಅಧಿಕಾರಿ ಬಿ.ಎಂ. ಬಿರಾದಾರ, ಪಿಯು ಪ್ರಾಚಾರ್ಯ ಶಶಿಕಾಂತ ಮೇತ್ರೆ, ಪ್ರೌಢಶಾಲೆ ಮುಖ್ಯ ಶಿಕ್ಷಕ ಪ್ರಕಾಶ ಸಾಸನಕಿ, ಸಿಆರ್‍ಸಿ ಸಂಜುಕುಮಾರ ಜೋಗನ, ಚಂದುಬಾಯಿ ಕಾಸರ, ವಸಂತ ಕಾಂಬಡೆ, ವಿಠ್ಠಲ ಫುಲಾರ, ಚಂದಾನಂದ ನಾಗಣೂಸರ, ಡಾ. ರಾಜಶೇಖರ ಪಾಟೀಲ ಹೆಬಳಿ ಮತ್ತಿತರು ಉಪಸ್ಥಿತರಿದ್ದರು. ಈ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.