ಒಳ ಮೀಸಲಾತಿ ಹೋರಾಟ ತಾಲೂಕ ಸಮಿತಿ ಬೂದೆಪ್ಪ ಕ್ಯಾದಿಗಿ ಆರೋಪ

ನ್ಯಾ.ಸದಾಶಿವ ವರದಿ ಜಾರಿಗೆ ಸರ್ಕಾರ ಹಿಂದೇಟು
ದೇವದುರ್ಗ.ನ.೨೪- ದಲಿತ ಸಮುದಾಯಕ್ಕೆ ಸಮಾನ ಅವಕಾಶ ಒದಗಿಸುವ ಸಂಬಂಧ ಒಳಮೀಸಲಾತಿ ಜಾರಿಗೆ ಶಿಫಾರಸ್ಸು ಮಾಡಿದ್ದ ನ್ಯಾ.ಸದಾಶಿವ ಆಯೋಗದ ವರದಿಯನ್ನು ಸರ್ಕಾರಗಳು ಅನುಷ್ಠಾನ ಮಾಡುವಲ್ಲಿ ಹಿಂದೇಟು ಹಾಕಿವೆ. ಇದರಿಂದ ತುಳಿತಕ್ಕೊಳಗಾದ ಜಾತಿಗಳಿಗೆ ಭಾರಿ ಅನ್ಯಾಯವಾಗಿದೆ ಎಂದು ಒಳ ಮೀಸಲಾತಿ ತಾಲೂಕ ಹೋರಾಟ ಸಮಿತಿ ಬೂದೆಪ್ಪ ಕ್ಯಾದಿಗಿ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಬುಧವಾರ ಮಾತನಾಡಿದರು.
ದಲಿತರಿಗೆ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ನ.೨೮ರಿಂದ ಆಯೋಜಿಸಿರುವ ಪಾದಯಾತ್ರೆ ಹಿನ್ನೆಲೆಯಲ್ಲಿ. ನ್ಯಾ.ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ದಲಿತ ಸಂಘಟನೆಗಳು ಐತಿಹಾಸಿಕ ಹೋರಾಟಕ್ಕೆ ಮುಂದಾಗಿವೆ.
ದಲಿತ ಹೋರಾಟಗಾರ ಪ್ರೊ.ಬಿ.ಕೃಷ್ಣಪ್ಪ ಸಮಾಧಿ ಇರುವ ದಾವಣಗೇರಾದಿಂದ ಬೆಂಗಳೂರುವರೆಗೆ ನ.೨೮ರಿಂದ ಡಿ.೧೧ರಂದು ಪಾದಯಾತ್ರೆ ಹೋರಾಟ ಆಯೋಜಿಸಲಾಗಿದೆ. ಈ ಹೋರಾಟದಲ್ಲಿ ರಾಜ್ಯದ ಮೂಲೆಮೂಲೆಯಿಂದ ಲಕ್ಷಾಂತರ ಜನರು ಭಾಗವಹಿಸಲಿದ್ದು, ಇದೊಂದು ಐತಿಹಾಸಿಕ ಹೋರಾಟವಾಗಲಿದೆ. ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಸಮಿತಿ ಮುಖಂಡ ಶಿವಪ್ಪ ಪಲಕನಮರಡಿ ಮಾತನಾಡಿ, ನ್ಯಾ.ಸದಾಶಿವ ಆಯೋಗ ರಾಜ್ಯಾದ್ಯಂತ ಪ್ರವಾಸ ಮಾಡಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದೆ. ವರದಿ ಪ್ರಕಾರ ಮಾದಿಗರಿಗೆ ಶೇ.೬, ಛಲವಾದಿಗೆ ಶೇ.೫, ಕೊರಮ, ಕೊರಚ, ಲಮಾಣಿ ಮತ್ತು ಭೋವಿ ಸಮುದಾಯಕ್ಕೆ ಶೇ.೩ ಹಾಗೂ ಇತರೆ ಜಾತಿಗಳಿಗೆ ಶೇ.೧ ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿದೆ. ಆದರೆ, ರಾಜ್ಯದಲ್ಲಿ ಆಡಳಿತ ನಡೆಸಿದ ಯಾವುದೇ ಸರ್ಕಾರ ವರದಿ ಜಾರಿಗೆ ಮುಂದಾಗಿಲ್ಲ ಎಂದು ದೂರಿದರು. ಅಲ್ಲದೇ ತಾಲೂಕಿ ಗಬ್ಬೂರ,ಜಾಲಹಳ್ಳಿ,ಅರಕೇರಾ ಸೇರಿದಂತೆ ತಾಲೂಕಿನಅದ್ಯಂತ ಎಲ್ಲಾ ದಲಿತ ಸಂಘಟನೆ ಮುಂಖಡರ ಸಭೆ ಪೂರ್ವಭಾವಿ ಮಾಡಿ ಡಿ,೧೧ರಂದು ಬೆಂಗಳೂರಿನ ಪ್ರೀಡಂ ಪರ್ಕಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಭಾರಿ ಸಂಖ್ಯಯಲ್ಲಿ ಜನ ಸೇರಿಸಿ ಸರಕಾರಕ್ಕೆ ಬಿಸಿಮುಟಸುವ ಕೆಲಸಮಾಡಲಿದ್ದಾರೆ.ಎಂದರು.
ಈಸಂದರ್ಭದಲ್ಲಿ ಹನುಮಂತ ಕಾಕರಗಲ್,ಶಾಂತಕುಮಾರ ಹೊನ್ನಟ್ಟಿಗಿ,ಮೌನೇಶ ಬಲ್ಲದ್ವ, ಶಿವಕುಮಾರ,ಸೇರಿದಂತೆ ಇತರರು ಇದ್ದರು.