ಒಳ ಮೀಸಲಾತಿ ರದ್ದು ಪಡಿಸಲು ಆಗ್ರಹಿಸಿ ಪ್ರತಿಭಟನೆ

ದೇವದುರ್ಗ: ರಾಜ್ಯ ಸರ್ಕಾರ ಜಾರಿ ಮಾಡಿರುವಂತಹ ದಲಿತ ಸಮುದಾಯದ ಒಳ ಮೀಸಲಾತಿ ವಾಪಸ್ ಕಾಯಿದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ಪಟ್ಟಣದ ಮಿನಿ ವಿಧಾನಸೌಧ ಮುಂದೆ, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಮಂಗಳವಾರ ಪ್ರತಿಭಟನೆ ನಡೆಸಿತು.
ಇತ್ತೀಚಿಗೆ ನಡೆದ ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದಲಿತ ಸಮುದಾಯದಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಮೂಲಕ ಜಾತಿ ಜಾತಿಗಳ ನಡುವೆ ಕೈ ಮನಸು ಮೂಡುವಂತೆ ಮಾಡಿದೆ ಒಳ ಮೀಸಲಾತಿ ಜಾರಿ ಮಾಡುವುದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಖಂಡಿಸಿದರು. ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸುವುದು ಹಾಗೂ ಮೀಸಲು ಸೌಲಭ್ಯ ಕಲ್ಪಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಆದರೆ ಒಳ ಮೀಸಲಾತಿ ಕಲ್ಪಿಸುವ ಯಾವುದೇ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಇದು ಸಂವಿಧಾನ ಬಾಹಿರ ಕ್ರಮವಾಗಿದ್ದು ಕಾನೂನು ಸಚಿವ ಎ ಮಾಧುಸ್ವಾಮಿ ರಚಿಸಿದ ಸಮಿತಿ ಯಾವುದೇ ಅಧ್ಯಯನ ಮಾಡದೆ ಅವೈಜ್ಞಾನಿಕವಾಗಿ ಒಳ ಮೀಸಲಾತಿ ಜಾರಿಗೊಳಿಸಿದೆ ದಲಿತರಲ್ಲಿ ನಾಲ್ಕು ಉಪ ಪಂಗಡ ಮಾಡಿರುವುದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಖಂಡಿಸಿದರು.
ಕೂಡಲೇ ರಾಜ್ಯ ಸರ್ಕಾರ ಜಾರಿ ಮಾಡಿರುವಂತಹ ಒಳ ಮೀಸಲಾತಿಯನ್ನು ಹಿಂಪಡೆಯಬೇಕು ಈ ಇಂದಿನ ಮೀಸಲಾತಿಯನ್ನು ಮುಂದುವರಿಸಬೇಕು. ಶಿವಮೊಗ್ಗದಲ್ಲಿ ಒಳ ಮೀಸಲಾತಿ ವಿರೋಧಿಸಿ ಹೋರಾಟ ನಡೆಸುತ್ತಿದ್ದ ಮುಖಂಡರ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ತಮ್ಮಣ್ಣ ರಾಥೋಡ್ ಮುಖಂಡರಾದ ದೇವೇಂದ್ರಪ್ಪ ಶಿವಪ್ಪ ವಕೀಲ ವೆಂಕಟೇಶ್ ಚವಾಣ್ ಅಮರೇಶ್ ರಮೇಶ ರಾಥೋಡ್ ಲಕ್ಷ್ಮಣ ರೂಪೇಶ್ ಗುರಪ್ಪ ಪಂಪಣ್ಣ ದೀಪಕ್ ಮುತ್ತಿಲಾಲ್ ಸೀತಪ್ಪ ನರೇಶ್ ಜಾದವ್ ಶಂಕ್ರಪ್ಪ ಆನಂದ್ ತುಕಾರಾಂ ಭೀಮಣ್ಣ ಕೊತ್ತದೊಡ್ಡಿ ಭೀಮಣ್ಣ ರವಿ ಬಂಡೆಗುಡ್ಡ ಸೇರಿದಂತೆ ಇತರರು ಇದ್ದರು.