ಒಳ ಮೀಸಲಾತಿ ಜಾರಿ  ಬಂಜಾರ ಸಮುದಾಯಕ್ಕೆ ಅನ್ಯಾಯ
 ಬಿಜೆಪಿ ಸೋಲಿಸಲು ರಾಮು ನಾಯ್ಕಕರೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.26; ಓಟಿನ ರಾಜಕೀಯಕ್ಕಾಗಿ ಡಬಲ್ ಇಂಜಿನ್ ಸರ್ಕಾರ  ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡಿ ಬಂಜಾರ ಸಮುದಾಯಕ್ಕೆ
ಅನ್ಯಾಯ ಮಾಡಿದೆಂದು ಬಂಜಾರ ಸಮುದಾಯದ ಮುಖಂಡ ರಾಮು ನಾಯ್ಕ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಗೋಷ್ಟಿ ನಡೆಸಿ.  ಕಳೆದ ಜನವರಿ 4 ರಂದು ಸದಾಶಿವ ಆಯೋಗದ ವರದಿ ಜಾರಿ ಮಾಡಲ್ಲ ಎಂದು ಹೇಳಿ. ಈಗ ಆರ್ ಎಸ್ ಎಸ್ ಕುಮ್ಮಕ್ಕಿನಿಂದ ಈಗ ಜಾರಿ ಗಿಳಿಸಿದೆ. ಜಾತಿ ಬೇಧಬಾವ ಎಂದು ಹೇಳುವ, ಹಿಂದುಗಳೆಲ್ಲ ಒಂದು ಎಂದು ಹೇಳುವ ನೀವು ಮತ್ತೆ ಒಳಮೀಸಲಾತಿ ಜಾರಿಗೆ ತಂದು ಅಸ್ಪೃಶ್ಯ, ಸ್ಪೃಶ್ಯ ಎಂದು ಮಾಡಿ ಕೆಲ ಜಾತಿಗಳಿಗೆ ಮೀಸಲಾತಿ ಹೆಚ್ಚು ನೀಡಿ ಉಳಿದ ಪರಿಶಿಷ್ಟ ಜಾತಿಗೆ ಅನ್ಯಾಯ ಮಾಡಿದೆ.
ಅದಕ್ಕಾಗಿ ಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಬಾರದೆಂದು ಪ್ರತಿ ತಾಂಡಗಳಿಗೆ ತೆರಳಿ ಹೇಳಲಿದೆಂದರು.
ಈ ಬಗ್ಗೆ ಬಿಜೆಪಿ ಮುಖಂಡರಿಗೆಲ್ಲ ಎಚ್ಚರಿಕೆ ನೀಡಲು, ಬಂಜಾರ ಸಮುದಾಯದ ಎಲ್ಲಾ ಸಂಘಟನೆಗಳ ಸಭೆ ನಾಳೆ ಬೆಳಿಗ್ಗೆ ಬೆಂಗಳೂರಿನಲ್ಲಿ ಸಭೆ ಕರೆದಿದೆ.
ಕೇವಲ ಶೇ 4.5 ಮೀಸಲಾತಿಯಲ್ಲಿ 99 ಜಾತಿಗಳು ಬರುತ್ತವೆ. ರಾಜ್ಯದಲ್ಲಿ ನಾವು 45 ಲಕ್ಷ ಜನರಿದ್ದೇವೆ. ಒಟ್ಟಾರೆ ಒಳ ಮೀಸಲಾತಿ ಜಾರಿಯಿಂದ ಅನ್ಯಾಯವಾಗಿದ್ದು. ಇದನ್ನು  ಹಿಂದಕ್ಕೆ ಪಡೆಯದಿದ್ದರೆ ಬಿಜೆಪಿಗೆ ತಕ್ಕ ಪಾಠಕಲಿಸಲಿದೆಂದರು.
ಗೋರ್ ಸೇನಾ ಕರ್ನಾಟಕದ ಜಿಲ್ಲಾ ಅಧ್ಯಕ್ಷ ಪಿ.ಗೋಪಿ ನಾಯ್ಕ, ರಾಮು ನಾಯ್ಕ  ಮೊದಲಾದವರು ಸುದ್ದಿಗೋಷ್ಟಿಯಲ್ಲಿದ್ದರು.

One attachment • Scanned by Gmail