
ತಾಳಿಕೋಟೆ:ಮಾ.26:ಸದಾಶಿವ ಆಯೋಗದ ವರಧಿ ಜಾರಿಗೆ ತರಬೇಕೆಂಬ ಹಕ್ಕೋತ್ತಾಯ ಮತ್ತು ಹೋರಾಟವು ಕಳೆದ 30 ವರ್ಷಗಳಿಂದ ಮಾಡುತ್ತಾ ಬರಲಾಗಿತ್ತು ಕೊನೆಗೂ ಬಿಜೆಪಿ ಸರ್ಕಾರವು ಸದಾಶಿವ ಆಯೋಗ ವರಧಿ ಜಾರಿಗೆ ತರುವ ಮೂಲಕ ಒಳಮಿಸಲಾತಿ ಒದಗಿಸಿ ಸಾಮಾಜಿಕ ನ್ಯಾಯ ಒದಗಿಸಿದೆ ಎಂದು ಮಾದಿಗ ಸಮಾಜದ ಮುಖಂಡ ಹಾಗೂ ಡಿಎಸ್‍ಎಸ್ ಬೆಳಗಾವಿ ವಿಭಾಗದ ಸಂಘಟನಾ ಸಂಚಾಲಕ ದೇವೇಂದ್ರ ಹಾದಿಮನಿ ಅವರು ಹೇಳಿದರು.
ಶನಿವಾರರಂದು ಪಟ್ಟಣದಲ್ಲಿ ಮಾದಿಗ ಸಮಾಜದ ವತಿಯಿಂದ ಸದಾಶಿವ ಆಯೋಗದ ವರಧಿ ಜಾರಿಗೆ ಬಂದಿದ್ದರ ಕುರಿತು ಮತ್ತು ಒಳ ಮಿಸಲಾತಿ ಸಮಾಜಕ್ಕೆ ಸಿಕ್ಕಿದ್ದರ ಬಗ್ಗೆ ಸಂತಸದ ಕೂಟದಲ್ಲಿ ಸಿಹಿ ವಿತರಣೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಈ ಹಿಂದೆ ನಮ್ಮನಾಳುವ ಸರ್ಕಾರಗಳು ಸದಾಶಿವ ಆಯೋಗದ ಜಾರಿಯ ಬಗ್ಗೆ ಯಾವುದೇ ರೀತಿಯ ಮನಸ್ಸನ್ನು ಮಾಡಲಿಲ್ಲಾ ಕೊನೆಗೆ ಈಗೀನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸದಾಶಿವ ಆಯೋಗದ ವರಧಿಯಂತೆ ಒಳಮಿಸಲಾತಿ ಒದಗಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ ಅವರಿಗೆ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆಂದರು.
ಇನ್ನೋರ್ವ ಮಾದಿಗ ಸಮಾಜದ ಮುಖಂಡ ಸುಭಾಸ ಗುಂಡಕನಾಳ ಅವರು ಮಾತನಾಡಿ ಸದಾಶಿವ ಆಯೋಗದ ವರಧಿ ಜಾರಿಗೆ ಕುರಿತು ಕಳೆದ 30 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದರೂ ಕೂಡಾ ಅದು ಇಡೇರಿದಿಲ್ಲಾ ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರಧಿಯಲ್ಲಿ ಸೂಚಿಸಿದಂತೆ ಒಳಮಿಸಲಾತಿ ಮತ್ತು ಮಿಸಲಾತಿ ವಿಂಗಂಡಣೆ ಮಾಡಿ ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಿದ್ದಾರೆ ಹೀಗಾಗಿ ಮುಂಬರುವ ದಿನಗಳಲ್ಲಿ ಬಿಜೆಪಿ ಸರ್ಕಾರದ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸಂಪುಟದ ಸಹುದ್ಯೋಗಿಗಳಿಗೆ ಋಣವನ್ನು ತೀರಿಸುವಂತಹ ಕೆಲಸ ಸಮಾಜದ ಬಂದುಗಳೆಲ್ಲರು ಮಾಡೋಣವೆಂದರು.
ವಿವಿಧ ದಲಿತಪರ ಸಂಘಟನೆಗಳ ಮುಖಂಡರಾದ ಮುತ್ತಪ್ಪಣ್ಣ ಚಮಲಾಪೂರ ಅವರು ಮಾತನಾಡಿದರು.
ಇದೇ ಸಮಯದಲ್ಲಿ ಸಮಾಜದ ಜನರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಮಯದಲ್ಲಿ ಸಮಾಜದ ಮುಖಂಡರುಗಳಾದ ರಾಮಣ್ಣ ತಾಳಿಕೋಟಿ, ಬಸ್ಸು ಕಟ್ಟಿಮನಿ, ರಮೇಶ ಹಡಗಿನಾಳ, ಪರಶುರಾಮ ಕೂಚಬಾಳ, ಮಹಾದೇವ ಸಾಲೋಡಗಿ, ಸಿದ್ದು ಫೀರಾಪೂರ, ಭಾಗಪ್ಪ ಬಿಳೇಭಾವಿ, ಯಮನಪ್ಪ ಗುತ್ತಿಹಾಳ, ಮೊದಲಾದವರು ಇದ್ದರು.