ಒಳ ಚರಂಡಿ ವ್ಯವಸ್ಥೆ  ಸರಿಪಡಿಸಲು ಒತ್ತಾಯ                     

        
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.31:  ಪಾಲಿಕೆಯ ವ್ಯಾಪ್ತಿಯ  35ನೇ ವಾರ್ಡ್ ನ ಬಸ್ ಡಿಪೋ ಹಿಂದಗಡೆಯ  ಕುರಹಟ್ಟಿ ಹತ್ತಿರ ಇರುವ ನೂರಕ್ಕೂ ಹೆಚ್ಚು ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಬ್ಲಾಕ್ ಆಗಿದ್ದು ಇದನ್ನು ಸರಿಪಡಿಸಲು‌ಕ್ರಮ ತೆಗೆದುಕೊಳ್ಳಬೇಕು ಎಂದು ಆಯುಕ್ತ ಎಂ.ಎನ್.ರುದ್ರೇಶ್ ಅವರಿಗೆ ಇಂದು ಡಿವೈಎಫ್ ಐ ನೇತೃತ್ದಲ್ಲಿ ಸ್ಥಳೀಯ ಜನತೆ ಮನವಿ ಸಲ್ಲಿಸಿದ್ದಾರೆ.
ಒಳ‌ಚರಂಡಿ ನೀರಿನಿಂದ ಮನೆಯಲ್ಲಿ ದುರು ವಾಸನೆ ಉಂಟಾಗಿದೆ. ಓವರ್ ಪ್ಲೋ ಆಗಿ ಹರಿಯತೊಡಗಿದ್ದು ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ.
ಈ ಸಮಸ್ಯೆ  ಕಳೆದ ಒಂದು ವರೆ ವರ್ಷದಿಂದ ಇದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನದಿಗಳಿಗೆ ತಿಳಿಸಿದರು ಈವರಗೆ  ಯಾವುದೇ ರೀತಿ ಪ್ರಯೋಜನವಾಗದೆ ದಿನನಿತ್ಯ ಮಹಾನಗರ  ಪಾಲಿಗೆ ಅಲೆದಾಡಿ ಸಕಾಗಿದೆ.
ಆದ್ದರಿಂದ ಈ ಸಮಸ್ಯೆಯನ್ನು ತಮ್ಮ ಗಮನಕ್ಕೆ ತರುತ್ತಿದೆ.  ಕೂಡಲೇ  ಒಳಚರಂಡಿ ಚೇಂಬರ್ ಗಳನ್ನು ಕ್ಲೀನ್ ಮಾಡಿಸಿ ಈ ಸಮಸ್ಯೆಗೆ ಶಾಶ್ವತವಾದ ವ್ಯವಸ್ಥೆಯನ್ನು ಮಾಡಿ ನಮಗೆ ತೊಂದರೆ ಆಗದಂತೆ ಸಮರ್ಪಕವಾದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ತಾವೂ  ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ ತೋರಿದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಸಂಘಟನೆಯ  ನೇತೃತ್ವದಲ್ಲಿ ಮಹಿಳೆಯರು ಯುವಕರು ಕುಟುಂಬ ಸಮೇತರಾಗಿ  ಪಾಲಿಕೆಯ ಮುಂದೆ  ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಸಂಘಟನೆಯ ಜಿಲ್ಲಾಧ್ಯಕ್ಷ ಯು.ಎರ್ರಿಸ್ವಾಮಿ,  ಎಸ್ ಶಂಕರ್ ಗೌಡ, ಬೈಲ ಹನುಮಂತ, ಪಿ. ಲೋಕೇಶ್ ಬಿಪಿ ನವೀನ್, ಎ.ತಿಪ್ಪೇರುದ್ರ ಹೆಚ್.ಎರಿಸ್ವಾಮಿ,  ಜಿ.ಎನ್. ಎರ್ರಿಸ್ವಾಮಿ, ರೂಪನಗುಡಿ ರಾಮಾಂಜನಿ  ಮುಂತಾದವರು ಮನಚಿ ಸಲ್ಲಿಸುವ ವೇಳೆ ಉಪಸ್ಥಿತರಿದ್ದರು