ತಾಳಿಕೋಟೆ:ಮಾ.25: ವಿಶ್ವಕರ್ಮ ಸಮಾಜದ ಇತಿಹಾಸವು ಈ ಹಿಂದಿನ ಇತಿಹಾಸದ ಗತವೈಭವದಲ್ಲಿ ಮೆರದಿದೆ ಇದಕ್ಕೆ ಕಾರಣ ಸಮಾಜದ ಶಿಲ್ಪಿಗಳು ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದೆ ಕಾರಣವಾಗಿದೆ ಎಂದು ಉಡುಪಿ ಜಿಲ್ಲೆಯ ಪಡಕುತ್ಯಾರು ಸರಸ್ವತಿ ಮಹಾಸಂಸ್ಥಾನ ಪೀಠದ ಶ್ರೀಮದ್ ಆನೆಗುಂದಿ ಜಗದ್ಗುರುಗಳಾದ ಕಾಳಹಸ್ತೆಂದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು.
ಶುಕ್ರವಾರರಂದು ಸ್ಥಳೀಯ ಶ್ರೀ ಕಾಳಿಕಾದೇವಿ ದೇವಸ್ಥಾನ ವಿಶ್ವಕರ್ಮ ಸಮಾಜ ಟ್ರಸ್ಟ ವತಿಯಿಂದ ಶ್ರೀ ಕಾಳಿಕಾದೇವಿ ಜಾತ್ರಾಮಹೋತ್ಸವ ಹಾಗೂ ಸಾಮೂಹಿಕ ಉಪನಯನ ಕುರಿತು ಏರ್ಪಡಿಸಲಾದ ಧರ್ಮಸಭೆಯ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಜಗದ್ಗುರುಗಳು ಪುರಾತನ ದೇವಸ್ಥಾನಗಳಿಗೆ ಹಾಗೂ ಇನ್ನಿತರ ರಾಜಮಹಾರಾಜರ ಕಾಲದ ಗತವೈಭವ ಮೆರೆಯಲು ನಮ್ಮ ಶಿಲ್ಪಗಳೇ ಕಾರಣಿಭೂತರಾಗಿದ್ದಾರೆಂದರು. ಅವರು ಮಾಡಿದ ಹಾಗೂ ಅವರ ನಿಷ್ಟಾವಂತ ಸೇವೆಯ ಕಾರ್ಯ ಆಯಾ ಶಿಲ್ಪಕಲೆಗಳಲ್ಲಿಯೇ ಉತ್ತರ ದೊರೆಯುತ್ತಿದೆ ಎಂದರು. ಇಂದಿನ ದಿನಮಾನದಲ್ಲಿ ಸರ್ಕಾರದ ಸೌಲಭ್ಯಕ್ಕಾಗಿ ಅಪೇಕ್ಷಿಸಿದರೂ ಆ ಸೌಲಭ್ಯ ದೂರ್ಬಳಕೆಯಾಗದಂತೆ ನೋಡಿಕೊಳ್ಳ ಬೇಕು ಮೂಲ ರಿಜರ್ವವೇಶನ ಎನ್ನುವುದನ್ನು ಆರ್ಥಿಕವಾದವರಿಗೆ ನೀಡುವ ವ್ಯವಸ್ಥೆ ಹೆಚ್ಚಾಗಬೇಕಾಗಿದೆ ಎಂದರು. ಈ ವ್ಯವಸ್ಥೆಯನ್ನು ಎಲ್ಲರೂ ಬಳಸಿಕೊಳ್ಳುವುದು ಬೇಡ ಆದರೆ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ನಮ್ಮ ದೇಶದ ಸಂಸ್ಕಾರ ಸಂಸ್ಕøತಿಯ ಬಗ್ಗೆ ಚಿಂತನೆ ನಡೆಸಿ ಅದರಂತೆ ನಡೆದುಕೊಳ್ಳಬೇಕೆಂದರು. ಪಾಲಕರಾದವರು ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸಿ ಕೊಳ್ಳುವುದನ್ನು ಕಲಿಸುವುದರೊಂದಿಗೆ ಮಕ್ಕಳಿಗೆ ತಿದ್ದಿ ತೀಡುವ ಕಾರ್ಯ ಮಕ್ಕಳಿಗೆ ಮಾಡಬೇಕೆಂದರು. ಸಮಾಜ ಬೆಳವಣಿಗೆಯಾಗಬೇಕಾದರೇ ಒಳ್ಳೆಯ ಸಂಸ್ಕಾರದಿಂದಲೇ ಮಾತ್ರವೆಂದು ಹೇಳಿದ ಜಗದ್ಗುರುಗಳು ಅಕ್ಷರ ಒಳ್ಳೆಯ ಸಂಸ್ಕಾರ ಕಲಿಸಿದರೇ ಸಮಾಜಕ್ಕೆ ದೊಡ್ಡ ಆಸ್ತಿ ಬೆಳೆಸಿದಂತಾಗುತ್ತದೆ ಎಂದು ಹೇಳಿದ ಜಗದ್ಗುರುಗಳು ಉಪನಯನ ಅಂದರೇನು ಅದನ್ನು ಚೆನ್ನಾಗಿ ತಿಳಿದುಕೊಳ್ಳಿ ಇಲ್ಲವಾದರೇ ಏನಾಗುತ್ತದೆ ಎಂಬುದರ ಕುರಿತು ಕತೆಯೊಂದನ್ನು ಹೇಳಿದ ಜಗದ್ಗುರುಗಳು ಉಪನಯನ ಯಾಕೆ ಮಾಡಬೇಕು ಯಾವಾಗ ಮಾಡಬೇಕು ಎಂಬುದರ ಕುರಿತು ಹಾಗೂ ಯಜ್ಞೋಪದಾರಣೆ ಮಾಡುವ ಕುರಿತು, ಗುರುಕುಲಕ್ಕೆ ಕಳಿಸಿ ಹಿಂದಿನ ಕಾಲದಲ್ಲಿ ಗುರುಗಳಿಂದ ಶಿಕ್ಷಣ ಪಡೆಯುವ ರೀತಿ ಕುರಿತು ಹಾಗೂ ಗಾಯತ್ರಿ ಮಂತ್ರದ ಉಪದೇಶ ಮಾಡಿದರಲ್ಲದೇ ನಮ್ಮದೆಯಾದ ಸ್ವಾಭಿಮಾನದಿಂದ ನಡೆಯಬೇಕು ಎಂದು ತಿಳಿಹೇಳಿದರಲ್ಲದೇಮುಂಬರುವ ದಿನಮಾನಗಳಲ್ಲಿ ವಿಶ್ವಕರ್ಮ ವಿಶ್ವವಿದ್ಯಾನಿಲಯ ಪ್ರಾರಂಭಿಸಿ ಸಮರ್ಥವಾಗಿ ಮಕ್ಕಳನ್ನು ಬೆಳೆಸುವ ಯೋಚನೆ ತಮ್ಮದಾಗಿದ್ದರ ಕುರಿತು ಜಗದ್ಗುರುಗಳು ಬಹು ಮಾರ್ಮಿಕವಾಗಿ ಸಮಾಜ ಬಾಂಧವರಿಗೆ ವಿವರಿಸಿದರು.
ಇನ್ನೋರ್ವ ಸಾನಿಧ್ಯ ವಹಿಸಿದ ವಿಜಯಪುರದ ಮೂರುಜಾವದೀಶ್ವರಮಠ ಅಂತರವಳ್ಳಿ ಮೂಲಪೀಠದ ಪ.ಪೂ.ಶ್ರೀ ಮಹೇಂದ್ರ ಮಹಾಸ್ವಾಮಿಗಳು ಮಾತನಾಡಿ ಸಂಘಟನೆಯಲ್ಲಿ ಶಕ್ತಿ ಇರಲಾರದಕ್ಕೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ ಶಿಕ್ಷಣ ಸಂಘಟನೆ ಎಂಬುದು ಇಂದಿನ ದಿನಮಾನಗಳಲ್ಲಿ ಅಗತ್ಯವಾಗಿದೆ. ಸಮಾಜದಲ್ಲಿಯ ಎಲ್ಲ ಸಂಘಟಿಕರು ಒಂದಾಗಿ ಕಾರ್ಯ ನಿರ್ವಹಿಸಿದರೇ ಸರ್ಕಾರದ ಸೌಲಭ್ಯಗಳು ದೊರೆಯಲಿದೆ ಎಂದ ಶ್ರೀಗಳು ಸಂಘಟನೆಯಲ್ಲಿ ಶಕ್ತಿ ಎಂಬುದನ್ನು ಅಳವಡಿಸಿಕೊಳ್ಳುವ ಕಾರ್ಯ ಮಾಡುವುದರೊಂದಿಗೆ ಶಿಕ್ಷಣಕ್ಕೆ ಒತ್ತುನೀಡಿ ಪಾಲಕರು ಮಕ್ಕಳಿಗೆ ಒಳ್ಳೆಯ ಸ್ವಾಭಿಮಾನದ ಬದುಕನ್ನು ರೂಪಿಸಿಕೊಡುವ ಕಾರ್ಯ ಮಾಡಬೇಕೆಂದರು.
ಇನ್ನೋರ್ವ ಅಥಿತಿ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆಯವರು ಮಾತನಾಡಿ ವಿಶ್ವಕರ್ಮ ಸಮಾಜ ಬಾಂಧವರು ಆದಿ ಕಾಲದಿಂದಲೂ ತಮ್ಮದೇಯಾದ ಗೌರವದಿಂದ ಮುನ್ನಡೆದಿದ್ದಾರೆ ಅಂತಹ ಗೌರವ ಸ್ಥಾನ ದೊರೆಯಬೇಕಾದರೇ ಶ್ರೀ ಕಾಳಿಕಾದೇವಿಯ ಆರ್ಶೀವಾದ ಫಲವೇ ಕಾರಣವಾಗಿದೆ ಎಂದರು. ದೇವಿ ಎಂಬ ಎರಡಕ್ಷರದಲ್ಲಿ ಎಲ್ಲ ದೇವತೆಯ ಶಕ್ತಿ ಅಡಗಿದೆ ಆ ಶಕ್ತಿ ದುಷ್ಟರನ್ನು ಸಂಹರಿಸುವ ಕಾರ್ಯ ಮಾಡಿದೆ ಎಂದ ಅವರು ಛತ್ರಪತಿ ಶಿವಾಜಿ ಮಹಾರಾಜರ ಗೆಲುವಿಗೆ ಹಾಗೂ ಹಿಂದವಿ ಸ್ವರಾಜ್ಯ ಸ್ಥಾಪನೆಗೆ ಅನುವುಮಾಡಿಕೊಟ್ಟ ಶಕ್ತಿ ಶ್ರೀ ಭವಾನಿಯ ಶಕ್ತಿಯಾಗಿದೆ ಕಾರಣ ಶ್ರೀ ದೇವಿಯ ಶಕ್ತಿಗೆ ಎಲ್ಲ ಸಮಾಜ ಬಾಂಧವರು ಗೌರವಿಸುತ್ತಿದ್ದಾರೆ ಅಂತಹ ದೇವಿಯ ಜಾತ್ರಾಉತ್ಸವವನ್ನು ವಿಶ್ವಕರ್ಮ ಸಮಾಜ ಬಾಂಧವರು ಪ್ರತಿವರ್ಷ ಆಚರಿಸುತ್ತ ಸಾಗಿ ಬಂದಿರುವುದು ಮಾದರಿಯ ಉತ್ಸವದ ಕಾರ್ಯಕ್ರಮ ಇದಾಗಿದೆ ಎಂದರು.
ಇನ್ನೋರ್ವ ಪುರಸಭೆಯ ಸದಸ್ಯ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರ ಆತ್ಮಿಯರಾದ ವಾಸುದೇವ ಹೆಬಸೂರವರು ಮಾತನಾಡಿ ವಿಶ್ವಕರ್ಮ ಸಮಾಜ ಬಾಂಧವರು ಶ್ರೀ ದೇವಿಯ ಮಂದಿರದ ಶಿಖರದ ನಿರ್ಮಾಣ ಕಾರ್ಯಕ್ಕೆ ತಗಲುವ ವೆಚ್ಚವನ್ನು ಶಾಸಕರಿಂದ ನೀಡಿ ಅನುವುಮಾಡಿ ಕೊಡಬೇಕೆಂದು ಸಲ್ಲಿಸಿದ ಮನವಿ ಪತ್ರಕ್ಕೆ ಉತ್ತರಿಸಿದ ವಾಸುದೇವ ಅವರು ಉತ್ತರಿಸಿ ಶೀಘ್ರದಲ್ಲಿಯೇ ಈ ಕಾರ್ಯ ಕಾರ್ಯಗತ ಮಾಡಿ ಕೊಡಿಸುತ್ತೆನೆಂದು ಭರವಸೆ ನೀಡಿದರಲ್ಲದೇ ವಿಶ್ವಕರ್ಮ ಸಮಾಜಬಾಂಧವರ ನಡತೆ ಹಾಗೂ ಅವರ ಪ್ರೀತಿ ವಿಶ್ವಾಸ ಕುರಿತು ಗುಣಗಾನ ಮಾಡಿದರಲ್ಲದೇ ಶ್ರೀ ಕಾಳಿಕಾದೇವಿ ಜಾತ್ರೋತ್ಸವವನ್ನು ಆಚರಿಸಿಕೊಂಡು ಬಂದದ್ದಲ್ಲದೇ ಅನ್ಯ ಸಮಾಜದವರನ್ನು ಕರೆಯಿಸಿ ಗೌರವಿಸಿದಕ್ಕೆ ಸಂತಸ ವ್ಯಕ್ತಪಡಿಸಿದರು.
ನಾಲತವಾಡದ ಗಂಗಾಧರ ಮಹಾಸ್ವಾಮಿಗಳು, ಹಾಗೂ ಸಾಸನೂರದ ಮೂರುಜಾವದೀಶ್ವರ ಮಠದ ಪ.ಪೂ.ಶ್ರೀಶೈಲ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು.
ಶ್ರೀ ಕಾಳಿಕಾದೇವಿ ದೇವಸ್ಥಾನ ವಿಶ್ವಕರ್ಮ ಸಮಾಜದ ಅಧ್ಯಕ್ಷ ಶ್ರೀನಿವಾಸ ಸೊನಾರವರು ಅಧ್ಯಕ್ಷತೆ ವಹಿಸಿದ್ದರು.
ಈ ಸಮಯದಲ್ಲಿ ವೇ.ವಿಶ್ವನಾಥ ಶರ್ಮ, ವೀರುಪಾಕ್ಷಯ್ಯಸ್ವಾಮಿ, ಸಿದ್ದೇಶ ಶರ್ಮ, ಮಹಾಚಂದನಸ್ವಾಮಿ ಅವರು ಸಾಮೂಹಿಕ ಉಪನಯನ ಕಾರ್ಯಕ್ರಮ ನಡೆಸಿಕೊಟ್ಟರಲ್ಲದೇ ಶ್ರೀ ಕಾಳಿಕಾದೇವಿಗೆ ಮಹಾಭಿಷೇಕ, ಲಲಿತಾಸಹಸ್ರ ನಾಮಾರ್ಚನೆ ಹಾಗೂ ಗಮಗಳಿಂದ ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟರು.
ವೇಧಿಕೆಯ ಮೇಲೆ ಬಿ.ಜೆ.ಪಿ.ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಪುರಸಭೆಯ ಮಾಜಿಸದಸ್ಯ ಪ್ರಕಾಶ ಹಜೇರಿ, ಪುರಸಭೆಯ ಸದಸ್ಯ ಮುದುಕಣ್ಣ ಬಡಿಗೇರ, ಹೆಸರಣ್ಣ ಪತ್ತಾರ, ಗಂಗಪ್ಪ ಬಡಿಗೇರ, ರಾಜು ಪತ್ತಾರ, ಪ್ರಭಾಕರ ಹಿಪ್ಪರಗಿ, ಮಹಿಳಾ ಅಧ್ಯಕ್ಷೆ ಜಯದೇವಿ ಪತ್ತಾರ, ಕುಮಾರ ಬಡಿಗೇರ, ನಾಗರಾಜ ಪತ್ತಾರ, ಗಂಗಾಧರ ಪತ್ತಾರ (ಬಾವೂರ), ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳ ವೇದಘೋಷದೊಂದಿಗೆ ಪ್ರಾಂಭವಾದ ಈ ಕಾರ್ಯಕ್ರಮದಲ್ಲಿ ಕುಮಾರಿ ಪೃತ್ವಿ ಹೆಗ್ಡೆ ಭರತನಾಟ್ಯ ಗೈದು ಜನಮನ ರಂಜಿಸಿದರಲ್ಲದೇ ಅದರಂತೆ ಕುಮಾರಿ ಮಂಗಳಾದೇವಿ ಪತ್ತಾರ ಹಾಗೂ ಸಂಘಡಿಗರಿಂದ ಶ್ರೀ ದೇವಿ ರೂಪಕ ನೃತ್ಯ ಜನಮನ ಸೆಳೆಯಿತು. ಸಿದ್ದೇಶ ಶರ್ಮ ಸ್ವಾಗತಿಸಿದರು. ಗಜಾನನ ಸೋನಾರ ನಿರೂಪಣೆ ಮಾಡಿದರು.