
ವಿಜಯಪುರ:ಸೆ.11: ಬುದ್ದಿ ಭಾವಗಳನ್ನು ವಿಕಸನಗೊಳಿಸಿ ಉತ್ತಮ ಸಂಸ್ಕಾರ ನೀಡಿದರೆ ಮಗು ನೀತಿವಂತನಾಗಿ ಬೆಳೆಯುತ್ತದೆ. ಮಕ್ಕಳ ಸಾಹಿತಿಗಳು ಒಳ್ಳೆಯ ಸಾಹಿತ್ಯದ ಮೂಲಕ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತಬೇಕೆಂದು ಮುಧೋಳದ ಖ್ಯಾತ ವೈದ್ಯ ಸಾಹಿತಿ ಡಾ. ಶಿವಾನಂದ ಕುಬಸದ ಅವರು ಹೇಳಿದರು.
ಅವರು ಬಿ.ಎಲ್.ಡಿ.ಇ. ಸಂಸ್ಥೆಯ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಜರುಗಿದ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಂಬುನಾಥ ಕಂಚ್ಯಾಣಿಯವರ ‘ಮತ್ತೆ ಅವತರಿಸಿದ ದೈತ್ಯರು’ ಮಕ್ಕಳ ವೈಜ್ಞಾನಿಕ ಕಾದಂಬರಿ ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ, ಸಂಶೋಧನೆ, ಸಾಹಸ ಮತ್ತು ಸೃಜನಶೀಲ ಗುಣಗಳನ್ನು ಅಭಿವೃದ್ಧಿಗೊಳಿಸುತ್ತದೆ ಎಂದು ಹೇಳಿದರು.
ಬದಾಮಿಯ ವೈದ್ಯ ಸಾಹಿತಿ ಡಾ. ಕರವೀರಪ್ರಭು ಕ್ಯಾಲಕೊಂಡರು ಗ್ರಂಥಾವಲೋಕನ ಮಾಡಿ, ಇಂದಿನ ಮಕ್ಕಳಿಗೆ ವಿನೂತನ ತಂತ್ರ ಹಾಗೂ ಶೈಲಿಗಳಿಂದ ಕೂಡಿದ ಸಾಹಿತ್ಯ ಗ್ರಂಥಗಳನ್ನು ನೀಡಿ ಅವರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸಬೇಕೆಂದು ಹೇಳಿದರು.
ಡಾ. ಮಹಾಲಿಂಗಪ್ಪ ಮದಭಾವಿ ಅವರು ಅಧ್ಯಕ್ಷತೆ ವಹಿಸಿದ್ದರು. ಪಾಲಕರು ಸಾಹಿತ್ಯ ಗ್ರಂಥಗಳನ್ನು ಕೊಂಡು ತಮ್ಮ ಮಕ್ಕಳಿಗೆ ನೀಡಿ ಓದುವ ಹವ್ಯಾಸವನ್ನು ಬೆಳೆಸಬೇಕೆಂದು ಕಿವಿಮಾತು ಹೇಳಿದರು.
ನಿರ್ದೇಶಕರಾದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.
ಬಿ.ಎಂ. ಪಾಟೀಲ, ಪ್ರಾರ್ಥಿಸಿದರು. ಡಾ. ವಿ.ಡಿ. ಐಹೊಳ್ಳಿ, ಸ್ವಾಗತಿ ಪರಿಚಯಿಸಿದರು. ಸಿದ್ದಲಿಂಗಪ್ಪ ಹದಿಮೂರ ವಂದಿಸಿದರು. ಪ್ರೊ. ಎ.ಬಿ. ಬೂದಿಹಾಳ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಮಾರಂಭದಲ್ಲಿ ಎಸ್.ಬಿ. ದೊಡಮನಿ, ಗಂಗಾಧರ ಸಾಲಕ್ಕಿ, ಬಿ.ಎಚ್. ಬಾದರಬಂಡಿ, ದೊಡ್ಡಣ್ಣ ಭಜಂತ್ರಿ, ಸಿದ್ದಲಿಂಗಪ್ಪ ನಂದಿ, ಎಸ್.ಎಸ್. ಕೊಕಟನೂರ, ಸುನಂದಾ ಅಜ್ಜು ಹಾಗೂ ಅರವಿಂದ ಕಂಚ್ಯಾಣಿ, ಡಾ. ಉಷಾ ಹಿರೇಮಠ, ಬಸವರಾಜ ಇಂಚಗೇರಿ, ಚೇತನಾ ಸಂಕೊಂಡ, ಡಾ. ಕ್ಯಾಲಗೊಂಡ, ಸುರೇಖಾ ಕಡಕೋಳ, ಡಾ. ರುದ್ರಾಂಬಿಕಾ, ಗುರುರಾಜ ಬಾಬಾನಗರ, ಅಂಕಲಗಿ ವಕೀಲ ದಂಪತಿಗಳು, ಸಂಗಮೇಶ ಬದಾಮಿ, ಹಾಲಳ್ಳಿ ಮುಂತಾದವರು ಉಪಸ್ಥಿತರಿದ್ದರು.