ಒಳ್ಳೆಯ ಗುಣ ಸಂಬಂಧ ಮನುಷ್ಯನ ಆಸ್ತಿ

ಭಾಲ್ಕಿ:ಮಾ.25: ತಾಲೂಕಿನ ಚಳಕಾಪೂರ ಗ್ರಾಮದಲ್ಲಿ ಪವಾಡ ಪುರುಷ ಸಿದ್ಧಾರೂಢ ಸ್ವಾಮೀಜಿ ಅವರ 187ನೆಯ ಜಯಂತ್ಯುತ್ಸವ ಸಮಾರಂಭಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಗ್ರಾಮದ ಸಿದ್ಧಾರೂಢ ಮಠದ ಆವರಣದಲ್ಲಿ ಬೆಳಿಗ್ಗೆ 10ಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಅವರು ಧ್ವಜರೋಹಣ ನೆರವೇರಿಸುವ ಮೂಲಕ ವಾರ ಪೂರ್ತಿ ನಡೆಯುವ ಜಯಂತ್ಯುತ್ಸವ ಸಮಾರಂಭಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ಕಾರ್ಯಕ್ರಮದ ದೀಪ ಬೆಳಗಿಸಿದ ಪಂಡಿತಾರಾಧ್ಯ ಶಿವಾಚಾರ್ಯ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಹಣ ಗಳಿಕೆಯ ಹಿಂದೆ ಬಿದ್ದಿದ್ದಾನೆ. ಆದರೆ ಹಣದಿಂದ ಎಲ್ಲವೂ ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಹಣಕ್ಕಿಂತ ಒಳ್ಳೆಯ ಗುಣ ಸಂಬಂಧ ಮನುಷ್ಯನ ಆಸ್ತಿ ಎನ್ನುವುದು ಮನಗಾಣಬೇಕು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ ಡಾ.ಶಿವಕುಮಾರ ಸ್ವಾಮೀಜಿ ಮಾತನಾಡಿ, ಮನುಷ್ಯ ಉತ್ತಮ ಗುಣ, ಚಾರಿತ್ರ್ಯಗಳಿಂದ ಶ್ರೀಮಂತನಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತೋಶ್ರೀ ಲಕ್ಷ್ಮೀದೇವಿ, ಜಡಿಸಿದ್ದೇಶ್ವರ ಸ್ವಾಮೀಜಿ, ಸದ್ರುಪಾನಂದ ಸ್ವಾಮೀಜಿ, ಮಾತೋಶ್ರೀ ಯೋಗೀಶ್ವರಿ, ಶಂಕರನಾಂದ ಸ್ವಾಮೀಜಿ, ಜ್ಞಾನೇಶ್ವರಿ ತಾಯಿ, ಗ್ರಾಪಂ ಅಧ್ಯಕ್ಷೆ ಸುಧಾರಾಣಿ ಬಾಯಪ್ಪನೋರ್, ಸೋಮನಾಥ ಸ್ವಾಮೀಜಿ, ವಿಜಯಕುಮಾರ ಸ್ವಾಮೀಜಿ, ಸೋಮನಾಥ ಚಿಕಪಾಟೀಲ್ ಸೇರಿದಂತೆ ಹಲವರು ಇದ್ದರು. ನರೇಂದ್ರ ಪಾಟೀಲ್ ನಿರೂಪಿಸಿ, ವಂದಿಸಿದರು.