ಒಳ್ಳೆಯ ಕಾರ್ಯವೇ ಶಾಶ್ವತವಾಗಿ ಉಳಿಯುತ್ತದೆ:ಗೋಸಿಮಠ

ಕಲಬುರಗಿ:ಮಾ.27:ಅಲೆಯಾಗಿ ಬಂದು, ನೆಲೆಯಾಗಿ ನಿಂತು ಅಲೆಯಂತೆ ಅಪ್ಪಳಿಸಿ, ನೆಲೆ ಇಲ್ಲದೆ ಹೋಗುವ ಈ ಜೀವನದಲ್ಲಿ ನೆನಪುಗಳ ಜೊತೆಗೆ ನಾವು ಮಾಡುವ ಒಳ್ಳೆಯ ಕಾರ್ಯಗಳೆ ಶಾಶ್ವತವಾಗಿ ಉಳಿಯುತ್ತವೆ ಎಂದು ಹುಟಗಿ ಬ್ರಹನ್ಮಠ ಯೋಗಿ ರಾಜೇಂದ್ರ ಶಿಕ್ಷಣ ಟ್ರಸ್ಟನ್ ಕಾರ್ಯದರ್ಶಿಯಾದ ಶ್ರೀ ಓಂಕಾರೆಶ್ವರ ಗೋಸಿಮಠ ಹೇಳಿದರು. ನಗರದ ಒಕ್ಕಲಗೆರದ ಶ್ರೀ ವೀರ ತಪಸ್ವಿ ಚನ್ನವೀರ ಶಿವಾಚಾರ್ಯ ಪ್ರೌಢಶಾಲೆಯಲ್ಲಿ ಚನ್ನಮಲ್ಲಯ್ಯ ಹಿರೇಮಠ ಅವರ ದ್ವಿತೀಯ ದರ್ಜೆಯ ಸಹಾಯಕರಾಗಿ ಸೇವಾ ನಿವೃತ್ತಿ ಹಾಗೂ ಬಿಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸೇವಾ ನಿವೃತ್ತಿ ಜೀವನ ಸಮಾಜ ಸೇವೆಗೆ ಮನಸ್ಸನ್ನು ಇಮ್ಮಡಿಗೊಳಿಸುತ್ತದೆ. ಅಂತಹ ಕಾರ್ಯ ನಿರಂತರವಾಗಿ ಸಾಗಲಿ ಎಂದು ಹಾರೈಸಿದರು. ಸೇವಾ ನಿವೃತ್ತಿ ಹೊಂದಿದ ಚನ್ನಮಲ್ಲಯ್ಯ ಹಿರೇಮಠ ಮಾತನಾಡುತ್ತಾ ಯಾವಾಗಲೂ ಕಷ್ಟಗಳನ್ನು ಭೇಟಿಯಾದಾಗ, ತಾಳ್ಮೆಗೆ ದಾರಿ ಸಿಗುತ್ತದೆ, ಅವಮಾನವನ್ನು ಭೇಟಿಯಾದಾಗ ನಿರ್ಣಯಗಳಿಗೆ ದಾರಿ ಸಿಗುತ್ತದೆ, ಸೋಲನ್ನು ಭೇಟಿಯಾದಾಗ ಗೆಲುವಿನ ಧಾರಿ ಸಿಗುತ್ತದೆ ಅದಕ್ಕಾಗಿ ತಮ್ಮೆಲ್ಲರ ಸಹಕಾರದಿಂದ ಯಾವುದೇ ಕಪ್ಪು ಚುಕ್ಕೆ ನಿವೃತ್ತಿ ಹೊಂದಿರುವುದಕ್ಕೆ ತಮ್ಮೆಲ್ಲ ರ ಬೆಂಬಲವೇ ಕಾರಣವೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಟ್ರಸ್ಟನ್ ಮುಖ್ಯಸ್ಥರಾದ ಶಾಂತಯ್ಯ ಸ್ವಾಮಿ, ಸಿದ್ದರಾಮ ಪಾಟೀಲ, ಅಪ್ಸರ್ ಮಿಯ, ಸುವರ್ಣ ಲತಾ ಹಿರೇಮಠ, ಬಸ್ಸಮ್ಮ ಘೋಷಿ ಮಠ, ಮುಖ್ಯ ಗುರುಗಳಾದ ಚಂದ್ರಕಲಾ ಉಕಲಿ, ಚಂದ್ರಶೇಖರ ಚಂಡರಕಿ ಮಠ, ಅಶೋಕ, ಮಾಜಿ ವಿದ್ಯಾರ್ಥಿಯಾದ ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ, ಶಿವಕುಮಾರ ಮಠಪತಿ, ಶಿವಾನಂದ ಬಿರಾದರ, ಶರಣಗೌಡ ಕಿರಣಗಿ, ಆಗಮಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿವಾನಂದ ಸಾಗರ ಸ್ವಾಗತಿಸಿದರು. ಸಿದ್ದಣ್ಣ ಸಜ್ಜನ. ಸಿ.ವಿ. ಪಾಟೀಲ ನಿರೂಪಿಸಿದರು. ಶಿವರಾಜ ನಾಯಕ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಭಾಕರ ಪಾಟೀಲ, ಬಸವರಾಜ ಇಂಗಳೇಶ್ವರ, ಶಾರದಾ, ಗುರುರಾಜ ಕುಲಕರ್ಣಿ, ಸಂಗಮೇಶ ನಾಗೂರ, ವೀರೇಶ ಹಿರೇಮಠ, ಪ್ರೌಢಶಾಲೆಯ ಹಾಗೂ ಪ್ರಾಥಮಿಕ ಶಾಲೆ ಶಿಕ್ಷಕರು ವಿದ್ಯಾರ್ಥಿಗಳು ಸೇರಿದಂತೆ ಅನೇಕ ಜನರು ಭಾಗವಹಿಸಿದ್ದರು.