ಒಳ್ಳೆಯ ಆಲೋಚನೆ,ಭಾವನೆಗಳಿಂದ ಉತ್ತಮ ಬದುಕು

ಕೆಂಭಾವಿ:ಸೆ.22:ಒಳ್ಳೆಯ ಆಲೋಚನೆ ಮತ್ತು ಭಾವನೆಗಳಿಂದ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಕರಡಕಲ್ ಶ್ರೀಮಠದ ಪೂಜ್ಯ ಶಾಂತರುದ್ರಮುನಿ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಸಮೀಪ ಕರಡಕಲ್ ಸದ್ಗುರು ಕೋರಿಸಿದ್ದೇಶ್ವರ ಶಾಖಾ ಮಹಾಮಠದಲ್ಲಿ ನೆರವೇರಿದ 241 ನೆ ಶಿವಾನುಭವ ಚಿಂತನಗೋಷ್ಠಿ ಹಾಗೂ ಗಣಪತಿ ವಿಸರ್ಜನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಬ್ರಹ್ಮಾಂಡ ಬೆಳಗಲು ಸೂರ್ಯ, ಆತ್ಮ ಬೆಳಗಲು ಗುರುವಿನ ಅಗತ್ಯವಿದೆ. ಮನೆಯ ಕಿಟಕಿ, ಬಾಗಿಲುಗಳನ್ನು ತೆರೆದಾಗ ಗಾಳಿ, ಬೆಳಕು ಬರುವಂತೆ ಮನದ ಬಾಗಿಲನ್ನು ತೆರೆದಾಗ ಭಗವಂತನ ಬೆಳಕು ತುಂಬಿ ತುಳಕುತ್ತದೆ. ಗುರು ಮತ್ತು ದೇವರ ದರ್ಶನದಿಂದ ಜೀವನ ಪವಿತ್ರವಾಗುತ್ತದೆ ಎಂದರು.

ಗಡಿ ಸೋಮನಾಳ ಶ್ರದ್ಧಾನಂದ ಮಠದ ಶರಣರು ವಿಶೇಷ ಉಪನ್ಯಾಸ ನೀಡಿದರು. ಮುಖಂಡರಾದ ಶಾಂತಗೌಡ ಮಾಲಿಪಾಟೀಲ, ಮಲ್ಲಿಕಾರ್ಜುನ ಯಡಹಳ್ಳಿ, ಗೌರಿಶಂಕರ ಗೌಡಗೇರಿ, ಶರಣಪ್ಪ ಸಾಹು, ಹಣಮಂತ ಯಡಹಳ್ಳಿ, ಸಂಗಣ್ಣ ಹಾಲಭಾವಿ ಸೇರಿದಂತೆ ಇತರರಿದ್ದರು.

ಶ್ರೀಮಠದ ವಕ್ತಾರ ಶಿವಪ್ರಕಾಶಸ್ವಾಮಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಪರಸನಹಳ್ಳಿ ನಿರೂಪಿಸಿದರು. ವಿಜಯ ಹಾಲಭಾವಿ ವಂದಿಸಿದರು. ಬಸನಗೌಡ ಮಾಲಿಪಾಟೀಲ, ಯಮನೂರ ಹೆಗ್ಗನದೊಡ್ಡಿ ಸಂಗೀತ ಸೇವೆ ಒದಗಿಸಿದರು.