ಒಳ್ಳೆತನಕ್ಕೆ ಯಾವಾಗಲೂ ಒಳ್ಳೆಯದೇ ಆಗುತ್ತದೆ : ಬೂಡಾ ಅಧ್ಯಕ್ಷ ಮಾರುತಿ ಪ್ರಸಾದ್ ಶೀರ್ಡಿಸಾಯಿ ಸೇವಾ ಟ್ರಸ್ಟ್ ಗೆ ಸಿ.ಎ ಸೈಟ್ ಮಂಜೂರು

.(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಮಾ.26: ಸಮಾಜದಲ್ಲಿ ಒಳ್ಳೆ ಕೆಲಸ ಮಾಡುತ್ತಾ ಎಲ್ಲರನ್ನು ಒಂದೇ ದೃಷ್ಟಿಯಲ್ಲಿ ನೋಡುತ್ತಾ ಸಮಾನವಾಗಿ ಗೌರವ ಕೊಟ್ಟು ಒಳ್ಳೆತನದಿಂದ ನಡೆದುಕೊಂಡವರಿಗೆ ಸದಾ ದೇವರು ಒಳ್ಳೆಯದೇ ಮಾಡುತ್ತಾನೆ ಎಂದು ಬೂಡಾ ಅಧ್ಯಕ್ಷ ಮಾರುತಿ ಪ್ರಸಾದ್ ಹೇಳಿದರು.ಶನಿವಾರ ನಗರದ ಬೈಪಾಸ್ ರಸ್ತೆಯ ಅಲ್ಲಂ ಭವನದ ಹತ್ತಿರ ಎಸ್ ಆರ್. ಎಂ ಬಡಾವಣೆಯಲ್ಲಿ ಬೂಡಾವತಿಯಿಂದ ಸಿ.ಎ.ಸೈಟ್ (ನಾಗರೀಕ ಬಳಕೆಗಾಗಿ)ನ್ನು ಶ್ರೀ ಶಿರಡಿ ಸಾಯಿ ಸೇವಾ ಸಂಘ ಟ್ರಸ್ಟ್ ಗೆ ಮಂಜೂರು ಮಾಡಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಟ್ರಸ್ಟ್ ಅದ್ಯಕ್ಷರಾದ ಆರ್ ಗೋಪಾಲಕೃಷ್ಣ ಅವರಿಗೆ ಹಸ್ತಾಂತರಿಸುವ ಸಂದರ್ಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಬಳ್ಳಾರಿ ನಗರದ ಸುಮಾರು ಹತ್ತೊಂಬತ್ತು ಸಿ.ಎ ಸೈಟ್ ಗಳನ್ನು ಸಮಾಜ ಸೇವೆ ಮಾಡುತ್ತಿರುವ ಸಂಘ ಸಂಸ್ಥೆಗಳಿಗೆ ಮತ್ತು ಆಯಾ ಜಾತಿ ಸಮುದಾಯದವರಿಗೆ  ಮಂಜೂರು ಮಾಡಲು ನಮಗೆ ಕೂಡ ಸಂತೋಷವಾಗುತ್ತದೆ. ಇಲ್ಲಿಯವರೆಗೆ ಸಿ.ಎ ಸೈಟ್ ನ್ನು ಯಾವ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿರುವುದಿಲ್ಲ ಎಂದು ಇದೇ ಸಂದರ್ಭದಲ್ಲಿದ ಹೇಳಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಆರ್ ಗೋಪಾಲಕೃಷ್ಣ ಮಾತನಾಡಿ, ದಿನನಿತ್ಯ ನಮ್ಮ ಟ್ರಸ್ಟ್ ನಿಂದ ಜರುಗುವ ಸಾಮಾಜಿಕ ಕಾರ್ಯಕ್ರಮಗಳನ್ನು ನೋಡಿ ಮಾರುತಿ ಪ್ರಸಾದ್ ರವರು ನಮ್ಮ ಸಂಘಕ್ಕೆ ಸಿ.ಎ ಸೈಟ್ ನೀಡಿದ್ದಾರೆ, ಮತ್ತು ಇದೇ ಸಂದರ್ಭದಲ್ಲಿ ನಾರಾ ಸೂರ್ಯನಾರಾಯಣರೆಡ್ಡಿಯವರು ಐದು ಲಕ್ಷ ರೂಪಾಯಿಗಳನ್ನು ನಮ್ಮ ಟ್ರಸ್ಟ್ ಅಭಿವೃದ್ಧಿಗಾಗಿ ನೀಡಿದ್ದಾರೆ. ಹಾಗೂ ಪಾಲಿಕೆ ಸದಸ್ಯ ಪ್ರಭಂಜನ್ ಅರವತ್ತು ಸಾವಿರ, ನಮ್ಮ ಟ್ರಸ್ಟ್ ನ ಸದಸ್ಯರ ರಮೇಶ್ ಒಂದು ಲಕ್ಷ ಹನ್ನೊಂದು ಸಾವಿರ, ಪಿ.ಎನ್ ರಾವ್ ಒಂದು ಲಕ್ಷ ಹನ್ನೊಂದು ಸಾವಿರ, ವೇಣು ಲಿಕ್ಕರ್ಸ್ ಒಂದು ಲಕ್ಷ ಹನ್ನೊಂದು ಸಾವಿರ ಈ ರೀತಿಯಾಗಿ ದಾನಿಗಳು ನೀಡಿದ ಹಣದಿಂದಲೇ ಈ ಸಿ.ಎ ಸೈಟ್ ಖರೀದಿಸಲಾಗಿದೆ ಎಂದು ತಿಳಿಸಿದ್ದಾರೆ.ಸುಮಾರು ಎರಡು ಕೋಟಿ ಐವತ್ತು ಲಕ್ಷದ 9400 ಚ.ಅ ನಿವೇಶನವನ್ನು ಹನ್ನೆರಡು ಲಕ್ಷ ಅರವತ್ತು ಸಾವಿರ ರೂಪಾಯಿಗಳಿಗೆ ಬೂಡಾದಿಂದ ನೀಡಿ ನಮ್ಮ ಸಂಘ ಇನ್ನಷ್ಟು ಸಾಮಾಜಿಕ ಸೇವೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸೈಟ್ ಕೊಳ್ಳಲು ಸಹಾಯ ಮಾಡಿರುವ ಎಲ್ಲರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ನಿಂದ ವಿವಿಧ ತರಬೇತಿ ಪಡೆದಿರುವ ಮಹಿಳೆಯರಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಸದಸ್ಯ ಪ್ರಭಂಜನ್, ಆರ್ಯ ವೈಶ್ಯ ಸಂಘದ ಅಧ್ಯಕ್ಷ ಡಾ. ಡಿ.ಎಲ್ ರಮೇಶ್ ಗೋಪಾಲ್, ಅಯ್ಯಪ್ಪಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಜಯಪ್ರಕಾಶ್ ಜೆ ಗುಪ್ತ, ಆರ್.ಎಸ್.ಬಿ ಟ್ರಸ್ಟ್ ಅಧ್ಯಕ್ಷ ಪೋಲಾ ರಾಧಕೃಷ್ಣ, ಕಾರ್ಯದರಶಿ, ಗುಡದೂರು ವಿಜಯ್ ಕುಮಾರ್, ನಗರೇಶ್ವರ ದೇವಸ್ಥಾನದ ನಾಮ ಸತ್ಯನಾರಾಯಣ, ಪಿ.ಎನ್.ರಾವ್, ಮತ್ತು ಟ್ರಸ್ಟ್ ನ ಸದಸ್ಯರು ಸೇರಿದಂತೆ ಇತರರಿದ್ದರು.