ಒಳಮೀಸಲಾತಿ ಶಿಫಾರಸ್ಸು ಹಿಂಪಡೆಯಲು ಆಗ್ರಹ

ರಾಯಚೂರು,ಏ.೧೨- ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ರಾಜ್ಯ ಸರ್ಕಾರ ನಡೆಯನ್ನು ಖಂಡಿಸಿ ಭೋವಿ( ವಡ್ಡರು) ಬಂಜಾರ,ಕೋರಚ ಮತ್ತು ಕೋರಮ ಸಮಾಜಗಳಿಂದ ರಾಜ್ಯ ವ್ಯಾಪ್ತಿ ಶಿಫಾರಸ್ಸು ಹಿಂಪಡೆಯವರೆಗೆ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಎನ್.ಅನಂತನಾಯಕ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಂವಿಧಾನದಲ್ಲಿ ಅವಕಾಶವಿಲ್ಲದ ಹಾಗೂ ಸುಪ್ರೀಂ ಕೋರ್ಟ್ ನ ತೀರ್ಪು ಗೆ ವಿರುದ್ಧವಾದ ಪರಿಶಿಷ್ಟ ಜಾತಿಗಳನ್ನು ೪ ಗುಂಪುಗಳನ್ನಾಗಿ ವರ್ಗೀಕರಿಸಿ ಒಳಮೀಸಲಾತಿ ಹಂಚಿಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಿರುವುದು ತಡೆಯಬೇಕು ಎಂದ ಅವರು,ಒಳ ಮೀಸಲಾತಿಯೇ ಅಸಂವಿಧಾನಿಕ ಆಗಿರುವ ಗುಂಪು ೩ ಹೆಸರಿನಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ ೪.೫ ರಷ್ಟು ಮೀಸಲಾತಿ ಹಂಚಿಕೆ ಮಾಡಿರುವುದು ಕೂಡ ಅವೈಜ್ಞಾನಿಕವಾಗಿದ್ದು,ಇದು ಸಂವಿಧಾನ ಮತ್ತು ನಮ್ಮ ಸಮುದಾಯಗಳಿಗೆ ಮಾಡಿದ ಮಹಾದ್ರೋಹವಾಗಿದೆ ಈ ನಿಟ್ಟಿನಲ್ಲಿ ರಾಜ್ಯ ವ್ಯಾಪ್ತಿ ಒಳಮೀಸಲಾತಿ ಶಿಫಾರಸ್ಸು ಹಿಂಪಡೆಯಲು ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಡಾ.ರವಿ ಮಾಕಳಿ,ಆದರ್ಶ ಯಲ್ಲಪ್ಪ,ಡಾ.ರಾಜನಾಯಕ,ಮಾಲಾ ಭಜಂತ್ರಿ,ಶಶಿಕಲಾ ಭೀಮರಾಯ ಸೇರಿದಂತೆ ಇತರರು ಉಪಸ್ಥಿತರಿದ್ದರು.