ಮಾನ್ವಿ,ಏ.೩೦- ಒಳ ಮೀಸಲಾತಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ ಬಿಜೆಪಿ ಪಕ್ಷದ ಋಣ ತೀರಿಸಲು ೫೦೦ ಕ್ಕಿಂತ ಹೆಚ್ಚು ಮಾದಿಗ ಜನಾಂಗದವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಬಸವರಾಜ್ ನಕ್ಕುಂದಿ ಮತ್ತು ಮುತ್ತಣ್ಣ ಚಾಗಬಾವಿ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ೫೦೦ ಕಿಂತ ಹೆಚ್ಚು ಮಾದಿಗ ಜನಾಂಗದವರನ್ನು ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವಿ. ನಾಯಕ ಅವರು ಪಕ್ಷದ ಶಾಲು ಮತ್ತು ನೀಲಿ ಶಾಲಾ ಹಾಕುವುದರ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ನಂತರ ಮಾತನಾಡಿದ ಮಾದಿಗ ಮುಖಂಡರಾದ ಬಸವರಾಜ ನಕ್ಕುಂದಿ ಅವರು ಮಾದಿಗ ಜನಾಂಗದವರು ಮತ್ತು ಇತರ ಜನಾಂಗದವರು ಬಹುದಿನದ ಬೇಡಿಕೆಯಾದ ಒಳ ಮೀಸಲಾತಿಗಾಗಿ ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದರು. ಸಿದ್ದರಾಮಯ್ಯ ಅವರ ಸರ್ಕಾರ ಕೇರ್ ಮಾಡಲಿಲ್ಲ ಅಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಪಕ್ಷದ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಬಹುದಿನಗಳ ಬೇಡಿಕೆಯಾದ ಒಳ ಮೀಸಲಾತಿ ಕೇಂದ್ರಕ್ಕೆ ಶಿಫಾರಸು ಮಾಡಿರುವುದರಿಂದ ಮಾದಿಗ ಜನಾಂಗದವರು ಸ್ವಾಭಿಮಾನದ ಜನಾಂಗವಾಗಿರುವುದರಿಂದ ಬಿಜೆಪಿ ಪಕ್ಷ ಋಣ ಇಟ್ಟುಕಾಬಾರದೆಂಬ ಉದ್ದೇಶದಿಂದ ೫೦೦ ಕ್ಕಿಂತ ಹೆಚ್ಚಿನ ಮಾದಿಗ ಜನಾಂಗದವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸನಗೌಡ ಬ್ಯಾಗಾವಟ್, ಮಾಜಿ ಶಾಸಕ ಗಂಗಾಧರ ನಾಯಕ,ಶರಣಪ್ಪಗೌಡ ನಕ್ಕುಂದಿ, ಕಾರ್ತಿಕ್ ರಡ್ಡಿ, ಮಲ್ಲಿಕಾರ್ಜುನ ಜಾಕ್ಕಲದಿನ್ನಿ, ತಿಮ್ಮರಡ್ದೆಪ್ಪಗೌಡ ಬೋಗಾವತಿ, ಉಮೇಶ್ ಸಜ್ಜನ, ಮಾನಪ್ಪ ನಾಯಕ, ಜಯರಾಜ್, ಮುತ್ತಣ್ಣ ಚಾಗಬಾವಿ, ಅಯ್ಯಪ್ಪ ಮ್ಯಾಕಲ್, ವಿರೇಶ್ ನಾಯಕ, ಶಿವರಾಜ್ ಜಾನೇಕಲ್, ವಿನಯ್ ಕುಮಾರ್ ಹೊಸೂರ್, ಕೊಟ್ರೇಶಪ್ಪ ಕೋರಿ, ವಿರುಭದ್ರಪ್ಪ ಬೊಗಾವತಿ, ಮ್ಯಾರೇಶ ಬಂಡಾರಿ, ಚನ್ನಬಸವ ಗವಿಗೆಟ್ಟ, ಸತ್ಯನಾರಾಯಣ ಮುಸ್ಟೂರು, ಸುದರ್ಶನ್ ವಕೀಲರು, ಭಾಸ್ಕರ್ ಜಗಲಿ, ಉದಯಕುಮಾರ ಹಾಗೂ ಇನ್ನು ಉಪಸ್ಥಿತರು ಇತರರಿದ್ದರು.