ಒಳಮೀಸಲಾತಿ ವರ್ಗೀಕರಣ ಕೇಂದ್ರಕ್ಕೆ ಶಿಫಾರಸ್ಸು
 ಹಿಂಪಡೆಯಲು ಲಂಬಾಣಿ ಸಮಾಜ ಒತ್ತಾಯ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.30: ಭಾರತದ ಸಂವಿಧಾನದಲ್ಲಿ ಅವಕಾಶವಿಲ್ಲದ ಹಾಗೂ ಸುಪ್ರೀಂ ಕೋರ್ಟ್‌ ನ ತೀರ್ಪಿಗೆ ವಿರುದ್ಧವಾಗಿ ಪರಿಶಿಷ್ಟ ಜಾತಿಗಳ ವರ್ಗೀಕರಣ ಒಳ ಮೀಸಲಾತಿ ಹಂಚಿಕೆ ಮೂಲಕ ಕೇಂದ್ರಕ್ಕೆ ಶಿಫಾರಸು ಮಾಡಿದ್ದು ಸ್ವಾಗತಾರ್ಹವಲ್ಲ.  ಈ ಶಿಫಾರಸ್ಸನ್ನು ತಾವು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ.
ಕರ್ನಾಟಕ ಬಂಜಾರ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ರಾಮುನಾಯ್ಕ ನೇತೃತ್ವದಲ್ಲಿ ನಿನ್ನೆ ನಗರದಲ್ಲಿ ಪ್ರತಿಭಟನೆ ನಡೆಸಿ, ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯ್ತು‌
ಸಚಿವ ಜೆಸಿ ಮಾಧುಸ್ವಾಮಿಯವರ ಉಪಸಮಿತಿಯ ವರದಿಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಸಹೋದರ ಸಮುದಾಯಗಳ ಕುರಿತು ವಸ್ತುನಿಷ್ಠ ಅಧ್ಯಯನ ಇಲ್ಲದೆ ಅನಗತ್ಯವಾಗಿ “ಸ್ಪಶ್ಯರು, ಅಸ್ಪೃಶ್ಯರು, ಎಡಗೈ, ಬಲಗೈ, ಎಲ್ಲಾ ಸೌಲಭ್ಯ ಪಡೆದವರು, ಮುಂದುವರದವರು, ಅಭಿವೃದ್ಧಿ ಆಗಿರುವವರು” ಎಂದು ಆರೋಪಿಸಿರುವವನ್ನು ವಾಪಸು ಪಡೆಯಬೆರಕು. 
ಅಸಂವಿಧಾನಿಕ ಅವಾಸ್ತವಿಕ ಅಂಶಗಳ ಮುಖಾಂತರ ಪರಿಶಿಷ್ಟ ಸಹೋದರರ ಸಮುದಾಯಗಳ ನಡುವಿನ ಐಕ್ಯತೆಯನ್ನು ಚಿತ್ರಗೊಳಿಸುವ ಉಪ ಸಮಿತಿಯ ವರದಿಯನ್ನು ತಿರಸಬೇಕು.
ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈಬಿಡುವ ಯಾವುದೇ ಪ್ರಸ್ತಾಪಗಳು ರಾಜ್ಯ ಸರ್ಕಾರದ ಎದುರಿಗೆ ಇಲ್ಲ ಎಂಬ ಲಿಖಿತ ಉತ್ತರವನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿ ಅಯೋಗಕ್ಕೆ ಪತ್ರದ ಮೂಲಕ ರವಾನಿಸಿರುವ ರಾಜ್ಯ ಸಚಿವ ಸಂಪುಟದ ನಿರ್ಣಯ ಸ್ವಾಗತಾರ್ಹ.
ಶಿಕಾರಿಪುರದಲ್ಲಿ ಬಂಧಿಸಿರುವ ಬಂಜಾರ ಮುಖಂಡರನ್ನು ಈ ಕೂಡಲೇ ಬಿಡುಗಡೆಗೊಳಿಸಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಕೈಬಿಡಬೇಕೆಂದು ಆಗ್ರಹಿಸಲಾಯ್ತು.