ಒಳಮೀಸಲಾತಿ ಬೇರೆ ಗುಂಪಿನಲ್ಲಿ ಸೇರಿದ ಬಲಗೈ/ಛಲವಾದಿ ಸಮುದಾಯದ ಪರ್ಯಾಯ ಪದಗಳನ್ನು ಸರಿಪಡಿಸಲಾಗಿದೆ ಛಲವಾದಿ ನಾರಾಯಣಸ್ವಾಮಿ ಸ್ಪಷ್ಟನೆ:ಡಾ. ಅಷ್ಠಗಿ

ಕಲಬುರಗಿ,ಏ.01: ಒಳಮೀಸಲಾತಿ ಬೇರೆ ಗುಂಪಿನಲ್ಲಿ ಸೇರಿದ ಬಲಗೈ/ಛಲವಾದಿ ಸಮುದಾಯದ ಪರ್ಯಾಯ ಪದಗಳನ್ನು ಸರಿಪಡಿಸಲಾಗಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಶಾಸಕ ಛಲವಾದಿ ನಾರಾಯಣಸ್ವಾಮಿ ಸ್ಪಷ್ಟನೆ ನೀಡಿದ್ದಾರೆ
೨ ದಿನಗಳಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ಸುತ್ತೋಲೆ ಹೊರಡಿಸಲಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಅಂಬಾರಾಯ ಅಷ್ಠಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಒಳಮೀಸಲಾತಿ ಹಂಚಿಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ವರದಿಯಲ್ಲಿ ಎಸ್ಸಿ ಬಲಗೈ/ಛಲವಾದಿ ಸಮುದಾಯದ ಪರ್ಯಾಯ ಪದಗಳಾದ ಹೊಲೆಯ/ಹೊಲೆರ್/ಹೊಲಯ ಪದಗಳು ತಪ್ಪಾಗಿ ಒಳಪಂಗಡದ ನಾಲ್ಕನೇ ಗುಂಪು (1%)ನಲ್ಲಿ ಸೇರಿಕೊಂಡಿರುವುದು ಕಣ್ಣ ತಪ್ಪಿನಿಂದ ಆಗಿರುವ ಪ್ರಮಾದವೇ ಹೊರತು ಉದ್ದೇಶ ಪೂರ್ವಕವಾಗಿ ಅಲ್ಲವೆಂದು ವಿಧಾನ ಪರಿಷತ್ ಸದಸ್ಯರು, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಅವರು ಸ್ಪಷ್ಟ ಪಡಿಸಿದ್ದು, ಈ ಕುರಿತು ಅವರು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿರುವುದಾಗಿ ತಿಳಿಸಿದ್ದು ಇನ್ನೂ ಎರಡು ಮೂರು ದಿನಗಳಲ್ಲಿ ಪರಿಷ್ಕೃತ ಆದೇಶ ಹೊರಡಿಸಲಿದ್ದಾರೆ.

ಬಲಗೈ/ಛಲವಾದಿ ಸಮಾಜ ಬಂಧುಗಳು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲವೆಂದು ತಿಳಿಸಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಅಂಬಾರಾಯ ಅಷ್ಠಗಿ ಹೇಳಿದ್ದಾರೆ.