ಒಳಮೀಸಲಾತಿ ದಿಟ್ಟ ನಿರ್ಧಾರ ಕೈಗೊಂಡ ಸಿಎಂ ಬೊಮ್ಮಾಯಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.30: ಮೀಸಲಾತಿ ವಿಚಾರದಲ್ಲಿ  ಕಳೆದ 30-40 ವರ್ಷದಲ್ಲಿ ಮಾಡದ ಸಾಧನೆಯನ್ನು ಬಿಜೆಪಿ ಸರ್ಕಾರ ಬಹುತೇಕ ಎಲ್ಲ ಸಮುದಾಯದವರಿಗೂ ಕಲ್ಪಿಸುವ ಮೂಲಕ ಸಹಕಾರಿಯಾಗಿದೆಂದು ವೀರಶೈವ ಲಿಂಗಾಯತ ಮಹಾಜನ ಪರಿಷತ್ ಅಧ್ಯಕ್ಷ ಶ್ರೀನಿವಾಸ್ ಪಾಟೀಲ್
ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು‌ ಸಣ್ಣ ಸಣ್ಣ ಜಾತಿಯವರೂ, ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರಲಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಹಾಗೂ ಕೇಂದ್ರದ  ಬಿಜೆಪಿ ಸರ್ಕಾರ ಒಳ ಮೀಸಲಾತಿ ಕಲ್ಪಿಸಿದೆ.
ಒಳ ಮಿಸಲಾತಿ ಕಲ್ಪಿಸುವುದು ಜೇನುಗೂಡಿಗೆ ಕೈಹಾಕುವುದು ಎಂದು ಗೊತ್ತಿದ್ದರೂ ಎಲ್ಲರಿಗೂ ಸಿಹಿ ತಿನಿಸಬೇಕು ಎಂದು ಈ ತೀರ್ಮಾನವನ್ನು ಕೈಗೊಂಡಿದ್ದಾರೆ ಸಿಎಂ ಬೊಮ್ಮಾಯಿಯವರೆಂದರು.