ಒಳಮೀಸಲಾತಿ ಜಾರಿಗೆ: ಡಾ.ಅಂಬಾರಾಯ ಅಷ್ಠಗಿ ಸ್ವಾಗತ

ಕಲಬುರಗಿ:ಮಾ.25:ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಒಳ ಮೀಸಲಾತಿಯನ್ನು ಜಾರಿಗೆ ಮಾಡಿರುವ ಬಿಜೆಪಿ ನೇತೃತ್ವದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಯವರ ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಡಾ.ಅಂಬಾರಾಯ ಅಷ್ಠಗಿ ಸ್ವಾಗತಿಸಿದ್ದಾರೆ.
ರಾಜ್ಯವನ್ನು ಆಳಿದ ಈ ಹಿಂದಿನ ಯಾವ ಸರ್ಕಾರಗಳು ಕೂಡ ದಲಿತ ಸಮುದಾಯಗಳಿಗೆ ಯಾರು ಮಾಡದೆ ಇರುವಂತಹ ಐತಿಹಾಸಿಕ ನಿರ್ಧಾರವನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮಾಡಿರುವುದು ಸಾಮಾಜಿಕವಾಗಿ ತುಳಿತಕ್ಕೊಳಗಾದವರಿಗೆ ನ್ಯಾಯ ಒದಗಿಸಿದಂತಾಗಿದೆ ಎಂದು ಅಷ್ಠಗಿ ಬಣ್ಣಿಸಿದ್ದಾರೆ.
ಒಳ ಮೀಸಲಾತಿಗಾಗಿ ಶ್ರಮಿಸಿದ ಸಂಪುಟ ದರ್ಜೆಯ ಎಲ್ಲಾ ಸಚಿವರಿಗೆ ಹಾಗೂ ಒಳ ಮೀಸಲಾತಿಗಾಗಿ ಹೋರಾಟ ಮಾಡಿದ ಎಲ್ಲಾ ಹೋರಾಟಗಾರರಿಗೆ ಮತ್ತು ದಲಿತ ಸಮುದಾಯದ ಎಲ್ಲರಿಗೂ ಡಾ.ಅಂಬಾರಾಯ ಅಷ್ಠಗಿ ಅಭಿನಂದನೆ ಸಲ್ಲಿಸಿದ್ದಾರೆ.