ಲಕ್ಷ್ಮೇಶ್ವರ,ಮಾ30: ಪಟ್ಟಣದಲ್ಲಿ ಬುಧವಾರ ಸರಕಾರ ಎ.ಜೆ.ಸದಾಶಿವ ಆಯೋಗದ ವರದಿಗೆ ಶಿಫಾರಸು ಮಾಡಿರುವುದನ್ನು ಹಾಗೂ ಒಳ ಮೀಸಲಾತಿಯನ್ನು ಕೈಬಿಡುವಂತೆ ಆಗ್ರಹಿಸಿ ಲಕ್ಷ್ಮೇಶ್ವರ ತಾಲೂಕ ಬಂಜಾರ ಭೂಮಿ ಕೋರಮ್ ಕೋರಚಾ ಸೇರಿದಂತೆ ವಿವಿಧ ಸಮಾಜದವರು ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮೊದಲು ಜಮಾಯಿಸಿದ್ದ ಸಮಾಜದ ಭಾಂದವರು ಸರಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೀಪಕ ಲಮಾಣಿ ಜಯಕ್ಕ ಕಳ್ಳಿ ಶಿವಪ್ಪ ಲಮಾಣಿ ಅಶೋಕ ಲಮಾಣಿ ಜಾನು ಲಮಾಣಿ ಪುಂಡಲೀಕ ಲಮಾಣಿ ರಾಜ್ಯ ದಲ್ಲಿನ ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ನೇತೃತ್ವದಲ್ಲಿನ ಸರಕಾರ 99 ಜಾತಿಗಳನ್ನು ಒಳ ಮೀಸಲಾತಿ ಒಳಪಡಿಸಿ ಸದಾಶಿವ ಆಯೋಗ ವರದಿಯನ್ನು ಶಿಫಾರಸು ಮಾಡಿರುವುದು ಅತ್ಯಂತ ಖಂಡನಿಯ ಬಂಜಾರ ಭೋವಿ ಕೋರಮಾ ಕೊಚ್ಚಾ ಸೇರಿದಂತೆ ಈ ಜಾತಿಗಳ ಜನಾಂಗ ಅತ್ಯಂತ ಕಷ್ಟದ ಸ್ಥಿತಿ ಎದುರಿಸುತ್ತಿದ್ದು ಅಲ್ಪಸ್ವಲ್ಪ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಅವರ ಭವಿಷ್ಯಕ್ಕೆ ಸರಕಾರ ಎಳ್ಳುನೀರು ಹಾಕಿದೆ ಸರಕಾರದ ಈ ನಿರ್ಧಾರದಂದ 99 ಜಾತಿಗಳು ಕುದಿಯುತ್ತಿವೆ ಅಸಮಾಧಾನ ಕಟ್ಟೆ ಉಡೆದರೆ ಮುಂದಾಗುವ ಯಾವದೇ ಪರಿಸ್ಥಿತಿಗೂ ಸರಕಾರವೇ ಹೊಣೆ ಆಗಬೇಕಾಗುತ್ತದೆ ತಾಳ್ಮೆ ಸಹನೆಯನ್ನು ಪರಿಸ್ಕಿರಿಸುದನ್ನು ಬಿಟ್ಟು ಎತಾಸ್ಥಿತಿಯನ್ನು ಕಾಯ್ದುಕೊಳ್ಳದ್ದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗಿತು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಟೋಪ್ಪಣ್ಣ ಲಮಾಣಿ ಗುರಪ್ಪ ಲಮಾಣಿ ಮಲ್ಲೇಶಪ್ಪ ಲಮಾಣಿ ಗಣೇಶ ನಾಯಕ ಗಣೇಶ ಲಮಾಣಿ ಸೋಮಣ್ಣ ಲಮಾಣಿ ತುಕಪ್ಪ ಪೂಜಾರ ಲಾಲಪ್ಪಮಾಣಿ ಶೇಖಪ್ಪ ಲಮಾಣಿ ಬಾಬು ಲಮಾಣಿ ಸಂತೋಷ ರಾಥೋಡ ಗೆಮ್ಮಪ್ಪ ಲಮಾಣಿ ಪರಮೇಶ ಲಮಾಣಿ ಸುರೇಶ ಲಮಾಣಿ ಸೇರಿದಂತೆ ಅನೇಕರು ಇದ್ದರು.