ಒಳಮೀಸಲಾತಿ ಅಸ್ತು ಸಂಭ್ರಮ ಆಚರಣೆ

ರಾಯಚೂರು,ಮಾ.೨೫- ಪರಿಶಿಷ್ಟ ಜಾತಿ ಒಳಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದ ಎಡಗೈ- ಬಲಗೈ ಸಮುದಾಯದವರಿಗೆ ಒಳಮೀಸಲಾತಿ ಕಲ್ಪಿಸುವ ಮಹತ್ವ ನಿರ್ಧಾರ ತೆಗೆದುಕೊಂಡಿರುವ ರಾಜ್ಯ ಬಿಜೆಪಿ ಬೊಮ್ಮಾಯಿ ಸರ್ಕಾರವನ್ನು ಸ್ವಾಗತಿಸಿ ತಿಪ್ಪರಾಜು ಹವಾಲ್ದಾರ್ ಅಭಿಮಾನಿಗಳ ಸಂಘದ ವತಿಯಿಂದ ಗ್ರಾಮೀಣ ವಿಧಾನಸಭಾ ಕ್ಷೇತ್ರ ಮಾನ್ವಿ ತಾಲೂಕಿನ ಆರೋಲಿ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ನೆರೆವೇರಿಸಿ ಸಂಭ್ರಮ ಆಚರಣೆ ಮಾಡಿದರು.
ಬಿಜೆಪಿ ಎಸ್ಸಿ ಮೋರ್ಚಾ ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಒಡೆಯರಾಜು ಮಾತನಾಡುತ್ತಾ, ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಒಳ ಮೀಸಲಾತಿಯನ್ನು ಜಾರಿ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಕ್ರಮ ಶ್ಲಾಘನೀಯ ಎಂದರು.
ಹಿಂದಿನ ಯಾವ ಸರ್ಕಾರಗಳು ಕೂಡ ದಲಿತ ಸಮುದಾಯಗಳಿಗೆ ಯಾರು ಮಾಡದೇ ಇರುವಂತಹ ಐತಿಹಾಸಿಕ ನಿರ್ಧಾರವನ್ನು ಬಿಜೆಪಿ ಸರ್ಕಾರ ಮಾಡಿರುವುದು ಸಾಮಾಜಿಕವಾಗಿ ತುಳಿತಕ್ಕೊಳಗಾದವರಿಗೆ ನ್ಯಾಯ ಒದಗಿಸಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಪರುಶುರಾಮ ಆರೋಲಿ, ಹನುಮಂತ ಆರೋಲಿ, ಚಿದಾನಂದ ಆರೋಲಿ, ಭೀಮಣ್ಣ, ವಿಜಯಕುಮಾರ, ಪಾಲ್ಗುಣ, ಬಸವರಾಜ, ಭರತಕುಮಾರ, ಶ್ಯಾಮರಾಜ, ಸೇರಿದಂತೆ ಉಪಸ್ಥಿತರಿದ್ದರು.