ಒಳಮೀಸಲಾತಿಯಲ್ಲಿ ಆದ್ಯತೆ ನೀಡಿದ್ದರೂ ಹೋರಾಟ ಮಾಡುವುದು ಖಂಡನೀಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.28: ಒಳ ಮೀಸಲಾತಿಯ ವಾಸ್ತವತೆ ಅರಿತುಕೊಂಡು ಬದುಕಬೇಕು. ಅದು ಬಿಟ್ಟು ಯಾರದ್ದೋ ಪ್ರಚೋದನೆಗೆ ಒಳಗಾಗಿ ಹೋರಾಟ ಮಾಡಿದರೆ.  ಮುಂದಿನ‌ದಿನದಲ್ಲಿ ನಷ್ಟಕ್ಕೆ ಒಳಗಾಗುತ್ತೀರಿ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷ ಹೆಚ್.ಹನುಂತಪ್ಪ ಸ್ಪೃಶ್ಯ ಸಮುದಾಯದ ಎಸ್ಸಿ ವರ್ಗಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅವರು ಇಂದು ಬಳ್ಳಾರಿ ಪತ್ರಕರ್ತರ ಒಕ್ಕೂಟದಲ್ಲಿ ಸುದ್ದಿಗೋಷ್ಟಿ ನಡೆಸಿ. ಅಕ್ಕಪಕ್ಕದ ರಾಜ್ಯದಲ್ಲಿ ಎಸ್ಸಿ ಎಸ್ಟಿ ಪಟ್ಟಿಯಲ್ಲಿ ಇಲ್ಲದ ನೀವು.  ಈವರಗೆ ಎಸ್ಸಿ ಪಟ್ಟಿಯಲ್ಲಿದ್ದು ಲಾಭ ಪಡೆದಿದ್ದೀರಿ.‌ ಈಗ ರಾಜ್ಯ ಸರ್ಕಾರ ಎಲ್ಲಾ ರೀತಿಯಲ್ಲಿ ಚಿಂತನೆ ಮಾಡಿ ಎಲ್ಲರಿಗೂ ನ್ಯಾಯ ಒದಗಿಸಿದೆ. ಈಗ ಹೆಚ್ಚಳ ಮಾಡಿ ನೀಡಿರುವ ಮೀಸಲಾತಿ  ಶೈಕ್ಷಣಿಕ, ಉದ್ಯೋಗಕ್ಕೆ ಮಾತ್ರ ಸೀಮಿತವಾದುದು  ರಾಜಕೀಯಕ್ಕಲ್ಲ ಎಂದರು.
ಪ್ರಚೋದನೆಗೆ ಒಳಗಾಗಿ‌ ಯಡಿಯೂರಪ್ಪ ಅವರ ಮನೆಗೆ ಕಲ್ಲು ತೂರಿದ್ದು ಸರಿಯಲ್ಲ. ಹೋರಾಟ ಸರ್ಕಾರದ ವಿರುದ್ದ ಆಗಿರಬೇಕು ಎಂದರು. ವಿನಾ ಕಾರಣ ಪ್ರತಿ‌ಪಕ್ಷಗಳ ಪ್ರಚೋದನೆಗೆ ಒಳಗಾಗಿ‌ ಹೋರಾಟ ಮಾಡಿದರೆ. ಇತರ  ರಾಜ್ಯಗಳಲ್ಲಿರುವ ಸ್ಥಾನವನ್ನು ತೋರಿಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ತಳಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕೆಂದು ಕಳೆದ ಮೂವತ್ತು ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಇಂದಿನ ಬಿಜೆಪಿ ಸರ್ಕಾರದಿಂದ ಜಯ ಸಂದಿದೆ ಎಂದರು.
ಎಸ್.ಎಂ.ಕೃಷ್ಣ ಅವರು ಒಳ ಮೀಸಲಾತಿ ನಿಗಧಿ ಮಾಡಲು ನ್ಯಾ.ಸದಾಶಿವ ಅಸಯೊಇಗ ಮಾಡಿದರು, ಆದರೆ ಆರ್ಥಿಕ ಸಂಪನ್ಮೂಲ ನೀಡಲಿಲ್ಲ. ಯಡಿಯೂರಪ್ಪ ಅವರು 2008 ರಲ್ಲಿ ಮುಖ್ಯ ಮಂತ್ರಿಗಳಾದ ಮೇಲೆ ಆಯೋಗಕ್ಕೆ ಹಣ ನೀಡಿದರು. ಅಧ್ಯಯನ ನಡೆಸಿ ಆಯೋಗ ಮುಖ್ಯ ಮಂತ್ರಿ ಸದಾನಂದಗೌಡ ಅವರಿದ್ದಾಗ ವರದಿ ನೀಡಿದ್ದರು. ಆದರೆ ನಂತರ ಬಂದವರು ವರದಿ ಅನುಷ್ಟಾನಕ್ಕೆ ತರಲಿಲ್ಲ. ಆದರೆ ಬೊಮ್ಮಾಯಿ ಅವರು ಈಗ ಒಳ‌ಮೀಸಲಾತಿ ಜಾರಿಗೆ ತಂದು ನಮ್ಮ‌ಹೋರಾಟಕ್ಕೆ ನ್ಯಾಯ ಒದಗಿಸಿದೆಂದರು.
ಸಿದ್ದರಾಮಯ್ಯ ಅವರ ದ್ವಂದ ನಿಲುವಿನಿಂದ ಆಗದ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆಂದರು.
 ಟಿಕೆಟ್ ಸಿಗುತ್ತೆ:
ಈ ಬಾರಿ ನಾನು ಹಡಗಲಿ ಕ್ಷೇತ್ರದ ಟಿಕೆಟ್ ಬಯಸಿರುವೆ ಪಕ್ಷ ಟಿಕೆಟ್ ನೀಡುವ ಭರವಸೆ ಇದೆ. ಪಕ್ಷಕ್ಕೆ ಯಾರೇ ಬರಲಿ ಸ್ವಾಗತಿಸುತ್ತೇವೆ, ಹೋಗುವವರನ್ನು ಬೀಳ್ಕೊಡುತ್ತೇವೆಂದರು.
ಸುದ್ದಿಗೋಷ್ಟಿಯಲ್ಲಿ ಸಮುದಾಯದ ಮುಖಂಡರುಗಳಾದ ಸೋಮಶೇಖರ, ರಾಜೇಶ್, ಹುಲುಗಪ್ಪ, ರಾಮಣ್ಣ ಇದ್ದರು

One attachment • Scanned by Gmail