ಒಳಚರಂಡಿ ಸಮಸ್ಯೆ ಆಲಿಸಿದ ಆಮ್ ಆದ್ಮಿ ಪಾರ್ಟಿ

ವಿಜಯಪುರ, ಜು.14-ನಗರದ 29ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ರಾಮನಗರ ಬಸ್ ನಿಲ್ದಾಣದಿಂದ ಬಿದನೂರು ಪೆಟ್ರೋಲ್ ಪಂಪ್ ವರೆಗೆ ಒಳಚರಂಡಿ ಸೋರಿಕೆ ಸಮಸ್ಯೆ ಹಾಗೂ ಲಾಕೇಜ್ ಸಮಸ್ಯೆಯನ್ನು ಆಮ್ ಆದ್ಮಿ ಪಕ್ಷ ಆಲಿಸಿತು.
3 ತಿಂಗಳಿನಿಂದ ಈ ಸಮಸ್ಯೆ ಇದ್ದು, ಸ್ಥಳೀಯರು ಸಾಕಷ್ಟು ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಪಾಲಿಕೆಯ ಯಾವುದೇ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಗಮನ ಹರಿಸಿರುವದಿಲ್ಲ. ಆಮ್ ಆದ್ಮಿ ಪಾರ್ಟಿ ಸಮಸ್ಯೆಯನ್ನು ಪ್ರಸ್ತಾಪಿಸುವುದು ಮಾತ್ರವಲ್ಲದೆ ಅದನ್ನು ತಕ್ಷಣವೇ ಪರಿಹರಿಸಲು ಪ್ರಯತ್ನ ಮಾಡಿದೆವು. ವಿಜಯಪುರ ಮಹಾನಗರ ಪಾಲಿಕೆಯ ಆಯುಕ್ತರನ್ನು ಕರೆ ಮಾಡಿ, ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಕರೆಸಿ ಸ್ಥಳದಲ್ಲೇ ಜೆಸಿಬಿ ಮತ್ತು ಸಕ್ಕಿಂಗ್ ಯಂತ್ರವನ್ನು ಕರೆಸುವಲ್ಲಿ ಯಶಸ್ವಿಯಾದೇವು.
ಸಂಪೂರ್ಣ ಕೆಲಸವನ್ನು ಪೂರ್ಣಗೊಳಿಸಲು ಸುಮಾರು 6-7 ಗಂಟೆಗಳನ್ನು ತೆಗೆದುಕೊಂಡಿತು ಮತ್ತು ಅದನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿ ವಿಜಯಪುರ ನಗರ ಅಧ್ಯಕ್ಷ ಭೋಗೇಶ್ ಸೋಲಾಪುರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧನರಾಜ್ ಬಸವಂತಿ, ವಾರ್ಡ್ ಅಧ್ಯಕ್ಷರಾದ ಶಕೀಲ್ ಧಲಾಯತ್ ಹಾಗೂ ಮುಖಂಡರಾದ ಅಬ್ದುಲ್ ಹಮೀದ್ ಶೇಖ್ ಅವರು ಉಪಸ್ಥಿತರಿದ್ದರು.