ಒಳಚರಂಡಿ ಮಾಡಿ ಮನೆಗಳನ್ನು ನಿರ್ಮಿಸಲು ಡಿ.ಎಸ್.ಎಸ್ ಒತ್ತಾಯ

ರಾಯಚೂರು, ಆ.೪- ನಗರದ ಸ್ಲಂ ಹಾಗೂ ಆಶ್ರಯ ಯೋಜನೆಯಡಿಯಲ್ಲಿ ಮನೆಗಳು ಮಂಜೂರಾಗಿದ್ದು,ಏರಿಯಗಳಲ್ಲಿ ಒಳಚರಂಡಿ ಇಲ್ಲದೇ ಮನೆಗಳನ್ನು ಕಟ್ಟುವುದು ಕಾನೂನು ಬಾಹಿರ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಭೆ ಕರೆದು ಒಳಚರಂಡಿ ಮಾಡಿದ ನಂತರವೇ ಮನೆಗಳನ್ನು ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದ ಕೆಲವು ಸ್ಲಂ ಏರಿಯಾಗಳಲ್ಲಿ ಆಶ್ರಯ ಮನೆಗಳು ಮತ್ತು ಸ್ಲಂ ಮನೆಗಳು ನಿರ್ಮಾಣವಾಗುತ್ತಿದ್ದು,ಕೆಲವೊಂದು ಏರಿಯಾಗಳಲ್ಲಿ ನಡೆದಾಡುವುದಕ್ಕೆ ದಾರಿ ಇಲ್ಲದಂತಹ ಪರಸ್ಥಿತಿಯನ್ನು ನಗರಸಭೆ ನಿರ್ಮಾಣ ಮಾಡಿದೆ.ಕೆಲವೊಂದು ಏರಿಯಾಗಳಲ್ಲಿ ಬಡ ಜನರು ಮನೆಗಳನ್ನು ಕಟ್ಟಿಕೊಳ್ಳಬೇಕಾದರೆ ಮುಖ್ಯ ರಸ್ತೆಯಿಂದ ಮೆಟ್ರಲ್‌ಗಳನ್ನು ಹೊತ್ತುಕೊಂಡು ಹೋಗಿ ಮನೆಗಳನ್ನು ನಿರ್ಮಾಣ ಮಾಡುವ ಪರಸ್ಥಿತಿ ನಿರ್ಮಾಣವಾಗಿದೆ.ಏರಿಯಾಗಳಲ್ಲಿ ಸಣ್ಣ ಸಣ್ಣ ದಾರಿಗಳಿರುವುದರಿಂದ ಯಾವುದೇ ಟ್ರ್ಯಾಕ್ಟರ್ ಅಥವಾ ಗಾಡಿಗಳು ಹೋಗದಂತಹ ಪರಿಸ್ಥಿತಿ ಏರಿಯಾಗಳಲ್ಲಿ ನಿರ್ಮಾಣವಾಗಿದೆ.ಆದ್ದರಿಂದ ಬಹಿರ್ದೆಸೆಗೆ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಹೊರಗಡೆ ಹೋಗಿ ಬಹಿರ್ದೆಸೆ ಮಾಡುವಂತಹ ಪರಿಸ್ಥಿತಿ ಈಗಲೂ ಏರಿಯಾಗಳಲ್ಲಿ ಜೀವಂತವಾಗಿದೆ. ಆದ್ದರಿಂದ ಮೊದಲು ಏರಿಯಾಗಳಲ್ಲಿ ಒಳಚರಂಡಿ ಮಾಡಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಜನರಿಗೆ ಮನೆಗಳನ್ನು ಕಟ್ಟಿಸಿಕೊಡುವ ಮೊದಲೇ ಎಲ್ಲಾ ಮನೆಗಳಿಗೂ ಒಳಚರಂಡಿ ಮಾಡಿಸಿಕೊಡಬೇಕು. ಇಲ್ಲವಾದರೆ ತಮ್ಮ ಅಧಿಕಾರಿಗಳು ನಗರಸಭೆ ಮತ್ತು ಸ್ಲಂ ಬೋರ್ಡ್ ಎಇಇ ಮತ್ತು ಒಳಚರಂಡಿ ಅಧಿಕಾರಿಗಳೇ ನೇರ ಹೊಣೆಗಾರರು ಆಗುತ್ತಾರೆ ಆದ್ದರಿಂದ ಏರಿಯಗಳಲ್ಲಿ ಮೊದಲು ಒಳಚರಂಡಿ ಮಾಡಿಸಿ ಸಿಸಿ ರಸ್ತೆ ಹಾಕಿ ಮಂಜೂರಾದಂತ ಮನೆಗಳನ್ನು ಕಟ್ಟಿಸಿಕೊಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಯರಾಮ,ರಾಜು ಬೊಮ್ಮನಾಳ,ಚಂದ್ರಶೇಖರ ಭಂಡಾರಿ,ಮುಕೇಶ್ ತಿಮ್ಮಾಪೂರು,ವಿಜಯ ಅಲ್ಕೂರು ತಾಯಪ್ಪ ಕೊಲಿಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.